ಸೋಶಿಯಲ್ ಮೀಡಿಯಾ ಎನ್ನುವುದು ಎಂದು ಮಾಯಾಜಾಲ ಎಂದು ಈ ಹಿಂದೆ ಕೂಡ ಸಾಕಷ್ಟು ಜನರು ಹೇಳಿದ್ದಾರೆ. ಇದು ನೂರಕ್ಕೆ ನೂರರಷ್ಟು ನಿಜ. ಏಕೆಂದರೆ ಒಂದೇ ಕಡೆ ಕೂತು ಇಡೀ ಜಗತ್ತನ್ನು ನೋಡುವ ಹಾಗೆ ಅದನ್ನು ಅನುಭವಿಸುವ ಶಕ್ತಿ ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಇದೆ ಎಂದರೆ ತಪ್ಪಾಗುವುದಿಲ್ಲ.
ಇನ್ನು ಇತ್ತೀಚೆಗೆ ಎಲ್ಲರೂ ಸೋಶಿಯಲ್ ಮೀಡಿಯಾದಲ್ಲಿ ಅಕೌಂಟ್ ಹೊಂದಿರುತ್ತಾರೆ. ಇನ್ನು ಯು ಟ್ಯೂಬ್ ಅಂತೂ ಎಲ್ಲರ ಒಂದು ಫೇವರೆಟ್ ಎಂದರೆ ತಪ್ಪಾಗುವುದಿಲ್ಲ. ಏಕೆಂದರೆ ಪ್ರತಿಯೊಬ್ಬರೂ ಸಹ ಯು ಟ್ಯೂಬ್ ನಲ್ಲಿ ಯಾವುದಾದರೂ ತಮ್ಮ ರುಚಿಗೆ ತಕ್ಕ ವಿಡಿಯೋವನ್ನು ಹುಡುಕುತ್ತಲೇ ಇರುತ್ತಾರೆ. ಕೆಲವರು ಅಡುಗೆ ವಿಡಿಯೋಗಳನ್ನು ಸರ್ಚ್ ಮಾಡಿದರೆ. ಇನ್ನು ಕೆಲವರು ಪ್ರವಾಸದ ವಿಡಿಯೋಗಳನ್ನು ಸರ್ಚ್ ಮಾಡುತ್ತಾರೆ.
ಕೆಲವರಿಗೆ ನಮ್ಮ ಜಗತ್ತಿನ ಕೆಲವು ಸುಂದರ ಪ್ರದೇಶಗಳಿಗೆ ಪ್ರವಾಸ ಮಾಡುವುದು ಎಂದರೆ ಬಹಳ ಇಷ್ಟ. ಇನ್ನು ಕೆಲವರಿಗೆ ಪ್ರವಾಸ ಮಾಡಲು ಇಷ್ಟ ಇದ್ದರೂ ಸಹ ಪ್ರವಾಸ ಮಾಡಲು ಕೆಲವು ಕಾರಣಗಳಿಂದ ಆಗುವುದಿಲ್ಲ. ಇನ್ನು ಅಂತಹ ಜನರು ಯು ಟ್ಯೂಬ್ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊಗಳನ್ನು ನೋಡಿಕೊಂಡು ಸಮಾಧಾನ ಮಾಡಿಕೊಳ್ಳುತ್ತಾರೆ.
ಇನ್ನು ಕೆಲವರಿಗೆ ಸೋಲೋ ಟ್ರಿಪ್ ಮಾಡುವ ಆಸೆ ಇರುತ್ತದೆ. ಆದರೆ ಅವರಿಗೆ ಈ ಬಗ್ಗೆ ಹರಿವು ಇರುವುದಿಲ್ಲ. ಇನ್ನು ಈ ರೀತಿಯ ಜನಗಳು ಬೇರೆಯವರು ಮಾಡಿರುವ ವಿಡಿಯೋಗಳನ್ನು ನೋಡಿ ಆ ಬಗ್ಗೆ ತಿಳಿದು ಕೊಳ್ಳುತ್ತಾರೆ. ಇನ್ನು ಯು ಟ್ಯೂಬ್ ನ ಡಾಕ್ಟರ್ ಬ್ರೋ ಚಾನಲ್ ಎಲ್ಲರಿಗೂ ಚಿರಪರಿಚಿತ.
ಹೌದು ಒಬ್ಬ ಹುಡುಗ ಕೇವಲ ನಮ್ಮ ದೇಶವನ್ನು ಮಾತ್ರವಲ್ಲದೆ. ವಿದೇಶಗಳನ್ನು ಸುತ್ತಿ ಆ ವಿಡಿಯೋಗಳನ್ನು ತಮ್ಮ ಯು ಟ್ಯೂಬ್ ಚಾನಲ್ ನಲ್ಲಿ ಹಂಚಿಕೊಳ್ಳುವ ಮೂಲಕ ಅದೆಷ್ಟೋ ಜನರ ಮನ ಗೆದ್ದಿದ್ದಾರೆ. ಕನ್ನಡದ ಈ ಹುಡುಗ ಕೇವಲ ಭಾರತ ಮಾತ್ರವಲ್ಲದೇ, ಪಾಕಿಸ್ತಾನ, ರಶಿಯಾ, ಅಫಗ್ಗಾನಿಸ್ತಾನ್, ಫ್ರಾನ್ಸ್, ಹೀಗೆ ಹಲವಾರು ದೇಶಗಳನ್ನು ಸುತ್ತಿದ್ದಾನೆ.
ಇನ್ನು ಕೇವಲ ಯು ಟ್ಯೂಬ್ ಹಾಗೂ ಪ್ರವಾಸದ ಮೂಲಕ ಡಾ ಬ್ರೋ ಅದೆಷ್ಟೋ ಲಕ್ಷ ಅಭಿಮಾನಿ ಬಳಗವನ್ನು ಸಂಪಡಿಸಿಕೊಂಡಿದ್ದಾರೆ. ಇನ್ನು ಇದೀಗ ಈ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿರುವ ಡಾ ಬ್ರೋ ಅವರನ್ನು ಸಾಕಷ್ಟು ಮಾಧ್ಯಮಗಳು ಕರೆದು ಇಂಟರ್ವ್ಯೂ ಮಾಡುತ್ತಿದೆ. ಇನ್ನು ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಡಾ. ಬ್ರೋ ಅವರಿಗೆ ತಮ್ಮ ಮದುವೆ ವಿಚಾರದ ಬಗ್ಗೆ ಪ್ರಶ್ನೆ ಕೇಳಲಾಗಿತ್ತು.
ಯಾವಾಗ ಎನ್ನುವ ಪ್ರಶ್ನೆಗೆ ಉತ್ತರಿಸಿದ ಡಾ. ಬ್ರೋ ಮದುವೆ ಎನ್ನುವುದು ಒಂದು ರೀತಿಯ ಬಂಧನ. ಮದುವೆಯಾದರೆ ನಾನು ಈ ರೀತಿ ಪ್ರವಾಸ ಮಾಡಲು ಆಗುವುದಿಲ್ಲ ಆಕೆಯನ್ನು ಜೊತೆಗೆ ಕರೆದುಕೊಂಡು ಹೋಗಲು ಆಗುವುದಿಲ್ಲ ಆಕೆಯನ್ನು ಬಿಟ್ಟು ಹೋಗಲು ಆಗುವುದಿಲ್ಲ. ಸದ್ಯಕ್ಕೆ ನಾನು ಮದುವೆಯ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದಿದ್ದಾರೆ. ಸಧ್ಯ ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.