ಮಗಳಾದ ಐರಾ ಜೊತೆಗೆ ರಾಧಿಕಾ ಪಂಡಿತ್ ಅವರ ಸಂಕ್ರಾಂತಿ ಹಬ್ಬ ಹೇಗಿತ್ತು ಗೊತ್ತಾ ನೀವೇ ನೋಡಿ ವಿಡಿಯೋ?…

Entertainment

ನಟಿ ರಾಧಿಕಾ ಪಂಡಿತ್ ತಮ್ಮ ಮಕ್ಕಳಾದ ಐರಾ ಮತ್ತು ಯಥರ್ವ ಜೊತೆಗೆ ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿ ಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಿಸಿದ್ದಾರೆ. ಯಶ್ ಹಾಗೂ ರಾಧಿಕಾ ಮುದ್ದಿನ ಮಗಳಾದ ಐರಾ ಸಂಕ್ರಾಂತಿ ಹಬ್ಬದಲ್ಲಿ ಬಹಳ ಮಿಂಚಿದ್ದು, ಸದ್ಯ ಈ ಫೋಟೋ ವೈರಲ್ ಆಗುತ್ತಿದೆ.

ಹೌದು ಹಬ್ಬದ ದಿನ ಹೊಸ ಬಟ್ಟೆ ತೊಟ್ಟ ಐರಾ ಬಹಳ ಸುಂದರವಾಗಿ ಮಿಂಚಿದ್ದಾರೆ. ಇನ್ನು ಹಬ್ಬದ ವಾತಾವರಣದಲ್ಲಿದ ಮನೆಯಲ್ಲಿ ಐರಾ ಏನೆಲ್ಲಾ ಮಾಡಿದ್ದಾರೆ. ಇನ್ನು ಯಶ್ ಹಾಗೂ ರಾಧಿಕಾ ಮನೆಯಲ್ಲಿ ಸಂಕ್ರಾಂತಿ ಹಬ್ಬ ಹೇಗೆ ಆಚರಿಸಲಾಯಿತು ಎನ್ನುವುದನ್ನು ತಿಳಿಸುತ್ತೇವೆ, ಈ ಪುಟವನ್ನು ಸಂಪೂರ್ಣವಾಗಿ ಓದಿ..

ನಟ ಯಶ್ ಅವರು ಪಕ್ಕ ಫ್ಯಾಮಿಲಿ ಮ್ಯಾನ್, ಸಿನಿಮಾಗಳ ಜೊತೆಗೆ ತಮ್ಮ ಕುಟುಂಬಕ್ಕೂ ಸಹ ನಟ ಯಶ್ ಅವರು ಹೆಚ್ಚಿ ಸಮಯ ಕೊಡುತ್ತಾರೆ. ಇನ್ನು ನಟ ಯಶ್ ಆಗಾಗ ತಮ್ಮ ಪತ್ನಿ ರಾಧಿಕಾ ಪಂಡಿತ್ ಹಾಗು ತಮ್ಮ ಮಕ್ಕಳಾದ ಐರಾ ಮತ್ತು ಯಥರ್ವ ಜೊತೆಗೆ ಸಮಯ ಕಳೆಯಲು ಪ್ರವಾಸಕ್ಕೆ ಸಹ ಹೋಗುತ್ತಿರುತ್ತಾರೆ.

ಇನ್ನು ಇದೀಗ ಈ ವರ್ಷದ ಮೊದಲ ಹಬ್ಬ ಸಂಕ್ರಾಂತಿ ಹಬ್ಬದ ದಿನ ನಟ ಯಶ್ ಅವರು ತಮ್ಮ ಪತ್ನಿ ರಾಧಿಕಾ ಪಂಡಿತ ಹಾಗೂ ಮಕ್ಕಳಾದ ಐರಾ ಮತ್ತು ಯಥರ್ವ ಜೊತೆಗೆ ಸಂಭ್ರಮದಿಂದ ಹಬ್ಬವನ್ನು ಆಚರಿಸಿದ್ದಾರೆ. ಇನ್ನು ಹಬ್ಬದ ಕೆಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸದ್ಯ ಈ ಫೋಟೋಗಳ ಮೂಲಕ ತಮ್ಮ ಮನೆಯ ಹಬ್ಬದ ವಾತಾವರಣವನ್ನು ಅಭಿಮಾನಿಗಳಿಗೆ ತೋರಿಸಿದ್ದಾರೆ.

ಮಗಳಾದ ಐರಾ ಮತ್ತು ಯಶ್ ಅವರ ಮುದ್ದಿನ ಮಗ ಯಥರ್ವ ಇಬ್ಬರೂ ಸಹ ಸಾಂಪ್ರದಾಯಿಕ ಬಟ್ಟೆ ತೊಟ್ಟು ಮಿಂಚಿದ್ದಾರೆ. ಇನ್ನು ಐರಾ ಅಮ್ಮನ ಜೊತೆ ಸೇರಿ ಅಮ್ಮನ ಕೆಲಸಗಳಲ್ಲಿ ಸಹಾಯ ಮಾಡಿದ್ದಾರೆ. ಅಷ್ಟೇ ಅಲ್ಲದೆ ರಾಧಿಕಾದರೂ ಬಣ್ಣದ ರಂಗೋಲಿ ಹಾಕುವಾಗ ಐರ ಕೂಡ ಬಣ್ಣ ತುಂಬಿಸಿ ಸಂತೋಷ ಪಟ್ಟಿದ್ದಾಳೆ.

ಸಂಕ್ರಾಂತಿ ಹಬ್ಬದ ಪ್ರಯುಕ್ತ ಯಶ್ ರಾಧಿಕಾ ದಂಪತಿಗಳ ಮನೆ ವಿದ್ಯುತ್ ದೀಪಗಳಿಂದ ಅಲಂಕಾರಗೊಂಡಿದೆ. ರಾಧಿಕಾ ಪಂಡಿತ್ ಹಾಗು ಯಶ್ ತಮ್ಮ ಮಕ್ಕಳ ಜೊತೆಗೆ ಬಹಳ ಖುಷಿಯಿಂದ ಹಬ್ಬವನ್ನು ಆಚರಿಸಿದ್ದಾರೆ. ಇನ್ನು ತಮ್ಮ ಅಭಿಮಾನಿಗಳಿಗೆ ಯಶ್ ಹಾಗೂ ರಾಧಿಕಾ ಪಂಡಿತ್ ಸಂಕ್ರಾಂತಿ ಹಬ್ಬದ ಶುಭಾಶಯಗಳು ತಿಳಿಸಿದ್ದಾರೆ.

ಸದ್ಯ ಈ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನು ಅಭಿಮಾನಿಗಳು ಕೂಡ ಎಸ್ ರಾಧಿಕಾ ದಂಪತಿಗಳಿಗೆ ಹಬ್ಬದ ಶುಭಾಶಯಗಳು ಕಾಮೆಂಟ್ ಮುಖಾಂತರ ತಿಳಿಸಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…

Leave a Reply

Your email address will not be published. Required fields are marked *