ಕನ್ನಡ ಚಿತ್ರರಂಗ ಹಿರಿಯ ನಟಿ ಗಿರಿಜಾ ಲೋಕೇಶ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಯಾವುದೆ ಪಾತ್ರ ಕೊಟ್ಟರು ಅದಕ್ಕೆ ತಕ್ಕಂತೆ ಅಭಿನಯಿಸುವ ಮೂಲಕ ನಟಿ ಆ ಪಾತ್ರಕ್ಕೆ ಸಂಪಾರ್ಣತೆಯನ್ನು ತರುತ್ತಾರೆ ಎಂದರೆ ತಪ್ಪಾಗುವುದಿಲ್ಲ. ಇನ್ನು ಹಿರಿತೆರೆಯ ಜೊತೆಗೆ ನಟಿ ಗಿರಿಜಾ ಲೋಕೇಶ್ ಅವರು ಕಿರುತೆರೆಯಲ್ಲಿ ಸಹ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ.
ಸದ್ಯ ನಟಿ ಗಿರಿಜಾ ಲೋಕೇಶ್ ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರವಾಹಿಗಳಲ್ಲಿ ಒಂದಾಗಿರುವ ಸತ್ಯ ಧಾರಾವಾಹಿಯಲ್ಲಿ ಸತ್ಯ ಅವರ ಅಜ್ಜಿಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಅದೆಷ್ಟೋ ಜನರ ಮನ ಗೆದ್ದಿದ್ದಾರೆ. ಇನ್ನು ಹಿರಿಯ ನಟಿ ಗಿರಿಜಾ ಲೋಕೇಶ್ ಅವರು ದರ್ಶನ್ ಅವರ ಬಹು ನಿರೀಕ್ಷಿತ ಸಿನಿಮಾ ಕ್ರಾಂತಿ ಸಿನಿಮಾದಲ್ಲಿ ಸಹ ಬಣ್ಣ ಹಚ್ಚಿದ್ದಾರೆ.
ಹೌದು ದರ್ಶನ್ ಅವರ ಅಜ್ಜಿಯ ಪಾತ್ರದಲ್ಲಿ ನಟಿ ಗಿರಿಜಾ ಲೋಕೇಶ್ ನಟಿಸಿದ್ದು, ಇವರ ಪಾತ್ರ ಸಹ ಸಿನಿಮಾದಲ್ಲಿ ಬಹು ಮುಖ್ಯವಾಗಿದೆ ಎನ್ನಲಾಗುತ್ತಿದೆ. ಇನ್ನು ಸದ್ಯ ಕ್ರಾಂತಿ ಸಿನಿಮಾದ ಪ್ರಚಾರದ ವೇಳೆ ನಟಿ ಗಿರಿಜಾ ಲೋಕೇಶ್ ಅವರು ದರ್ಶನ್ ಕುರಿತು ಕೆಲವು ಮಾತುಗಳು ಹೇಳಿದ್ದು, ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ನಟಿ ಗಿರಿಜಾ ಲೋಕೇಶ್ ಅವರು ಇದೀಗ ಕ್ರಾಂತಿ ಸಿನಿಮಾದ ಪ್ರಚಾರದ ವೇಳೆ, ಕ್ರಾಂತಿ ಸಿನಿಮಾದ ಬಗ್ಗೆ ಮಾತನಾಡಿದ್ದು, ನಾನು ಸಿನಿಮಾರಂಗಕ್ಕೆ ಬಂದು ಮುಂದಿನ ವರ್ಷ 60 ವರ್ಷಲಾಗುತ್ತಿದೆ, ಇನ್ನು ಇಂದಿಗೂ ಸಹ ನಿರ್ದೇಶಕರು, ನಿರ್ಮಾಪಕರು ನನ್ನನ್ನು ಗುರುತಿಸಿ ಸಿನಿಮಾಗಳ ಆಫರ್ ನೀಡುತ್ತಿರುವುದಕ್ಕೆ ನಾನು ನಿಜಕ್ಕೂ ಚಿರಋಣಿ ಎಂದಿದ್ದಾರೆ.
ಇನ್ನು ಮಾತು ಮುಂದುವರೆಸಿದ ಗಿರಿಜಾ ಲೋಕೇಶ್ ಅವರು ಹಳ್ಳಿಗಳ ಕಡೆ ದರ್ಶನ್ ಅವರ ಬಗ್ಗೆ ಆತ ನೋಡಲು ಬಹಳ ಸುಂದರವಾಗಿದ್ದಾನೆ, ಹಾಗೆ ದಷ್ಟ ಪುಷ್ಟವಾಗಿದ್ದಾನೆ. ಒಂದೇ ಸಲ 10 ಜನಕ್ಕೆ ಹೊಡೆಯುತ್ತಾನೆ ಎಂದು ಮಾತನಾಡಿಕೊಳ್ಳುತ್ತಾರೆ. ಇನ್ನು ನಮ್ಮ ದರ್ಶನ್ ಹಾಡು ಹಾಡುವುದಕ್ಕೆ ಸೈ, ನಟನೆಗೂ ಸೈ, ಯಾರೇ ಬಂದರೂ ಅವರಿಗೆ ಹೊಡೆಯುವುದಕ್ಕೂ ಸೈ ಅಂದರೆ ಫೈಟಿಂಗ್ ಗೆ ಕೂಡ ಸೈ.
ಇನ್ನು ಕಳೆದ ಎರಡು ವರ್ಷಗಳಿಂದ ದರ್ಶನ್ ಅವರು ಬಹಳ ಕಷ್ಟ ಪಟ್ಟು, ದಷ್ಟ ಪುಷ್ಟವಾಗಿ ಬಂದಿದ್ದಾರೆ. ಇನ್ನು ದರ್ಶನ್ ಅವರನ್ನು ತೆರೆ ಮೇಲೆ ನೋಡುವುದೇ ಚಂದ ಎಂದಿದ್ದಾರೆ. ಇನ್ನು ಮಾತು ಮುಂದುವರೆಸಿದ ನಟಿ ಗಿರಿಜಾ ಲೋಕೇಶ್ ಅವರು ಈ ಸಿನಿಮಾದಲ್ಲಿ ನಟಿ ರಚಿತಾ ರಾಮ್ ಕೂಡ ಈ ಸಿನಿಮಾದಲ್ಲಿ ಬರುವ ಹಾಡಿನ ರೀತಿ ಗೊಂಬೆಯಂತೆ ಇದ್ದಾರೆ.
ಇನ್ನು ಈ ಸಿನಿಮಾದ ಸಕ್ಸಸ್ ಮೀಟ್ ನಲ್ಲಿ ನಾನು ತಪ್ಪದೆ ದರ್ಶನ್ ಅವರ ಜೊತೆಗೆ ಈ ಸಿನಿಮಾದ ಪುಷ್ಪವತಿ ಹಾಡಿಗೆ ಡ್ಯಾನ್ಸ್ ಮಾಡುತ್ತೇನೆ ಎಂದಿದ್ದಾರೆ ಗಿರಿಜಾ ಲೋಕೇಶ್. ಇನ್ನು ನಟಿಯ ಮಾತಿಗೆ ಅಲ್ಲಿದ ಎಲ್ಲರೂ ಸಹ ಜೋರಾಗಿ ಕಿರುಚಿದ್ದಾರೆ. ಇನ್ನು ಸದ್ಯ ನಟಿ ಗಿರಿಜಾ ಲೋಕೇಶ್ ಅವರ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.