ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್ ಅವರ ಮದುವೆ ವಿಷಯ ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇನ್ನು ಇದೀಗ ಮತ್ತೆ ನಟಿ ರಚಿತಾ ರಾಮ್ ಮದುವೆ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿದೆ. ಸದ್ಯ ಈ ಬಗ್ಗೆ ಸ್ವತಹ ನಟಿ ರಚಿತಾ ರಾಮ್ ಅವರೇ ಮಾತನಾಡಿದ್ದಾರೆ.
ನಟಿ ರಚಿತಾ ರಾಮ್ ಸ್ಯಾಂಡಲ್ ವುಡ್ ನ ಟಾಪ್ ನಟಿಯರ ಪೈಕಿ ಒಬ್ಬರು. ಸದ್ಯ ನಟಿ ರಚಿತಾ ರಾಮ್ ಅವರು ಹಿರಿತೆರೆಯ ಜೊತೆಗೆ ಕಿರುತೆರೆಯಲ್ಲಿ ಸಹ ಸಿಕ್ಕಾಪಟ್ಟೆ ಬಿಸಿಯಾಗಿದ್ದಾರೆ. ಇನ್ನು ನಟಿ ರಚಿತಾ ರಾಮ್ ಅಭಿನಯಿಸಿರುವ ಬಹು ನಿರೀಕ್ಷಿತ ಸಿನಿಮಾ ದರ್ಶನ್ ಅವರ ಕ್ರಾಂತಿ ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ.
ಇನ್ನು ಈ ಸಿನಿಮಾದಲ್ಲಿ ನಟಿ ರಚಿತಾ ರಾಮ್ ಹಾಗೂ ದರ್ಶನ್ ಅವರ ಕೆಮಿಸ್ಟ್ರಿ ನೋಡಲು ಅಭಿಮಾನಿಗಳು ಬಹಳ ಕಾತುರರಾಗಿದ್ದಾರೆ. ಸಾಮಾನ್ಯವಾಗಿ ನಟ ನಟಿಯರಿಗೆ ತಮ್ಮ ಮದುವೆ ಯಾವಾಗ ಎನ್ನುವ ಸಾಕಷ್ಟು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇನ್ನು ಇದೇ ರೀತಿಯ ಪ್ರಶ್ನೆಗಳನ್ನು ಕಳೆದ ಕೆಲವು ದಿನಗಳಿಂದ ನಟಿ ರಚಿತಾ ರಾಮ್ ಎದುರಿಸುತ್ತಿದ್ದಾರೆ.
ಇನ್ನು ಇತ್ತೀಚೆಗೆ ನಟಿ ರಚಿತಾ ರಾಮ್ ಅವರು ನಾನು ಸಿನಿಮಾ ರಂಗದಲ್ಲಿ ಸಾಧಿಸುವುದು ತುಂಬಾ ಇದೆ. ಸದ್ಯಕ್ಕೆ ಯಾವುದೇ ಮದುವೆ ಪ್ಲಾನ್ ನನ್ನ ತಲೆಯಲ್ಲಿಲ್ಲ. ನನಗೆ ಹೋಲುವ ನನ್ನನ್ನು ಅರ್ಥ ಮಾಡಿಕೊಳ್ಳುವ ಹುಡುಗ ಸಿಕ್ಕರೆ ನಾನು ಖಂಡಿತವಾಗಿಯೂ ಮದುವೆಯಾಗುತ್ತೇನೆ. ಈ ಬಗ್ಗೆ ಸ್ವತಃ ನಾನೇ ಮಾಧ್ಯಮದವರಿಗೆ ವಿಷಯ ತಿಳಿಸುತ್ತೇನೆ ಎಂದಿದ್ದರು.
ಇದೀಗ ಮತ್ತೊಮ್ಮೆ ನಟಿ ರಚಿತಾ ರಾಮ್ ಅವರ ಮದುವೆ ವಿಷಯ ದಲ್ಲಿ ಸದ್ದು ನೀವು ಮದುವೆಯಾಗುವ ಹುಡುಗ ಹೇಗಿರಬೇಕು? ನಿಮ್ಮ ಮದುವೆಯ ಬಗ್ಗೆ ನಿಮ್ಮ ಪ್ಲಾನ್ಸ್ ಏನು? ಸಾಕಷ್ಟು ಪ್ರಶ್ನೆಗಳನ್ನು ನಟಿ ರಚಿತಾ ರಾಮ್ ಅವರಿಗೆ ಕೇಳಲಾಗಿತ್ತು. ಇದಕ್ಕೆ ರಚಿತಾ ರಾಮ ಏನೆಂದು ಉತ್ತರಿಸಿದ್ದಾರೆ ಗೊತ್ತಾ
ಇದೀಗ ನಟಿ ಸ್ವತಹ ತಮ್ಮ ಮದುವೆ ಹೇಗಿರಬೇಕು ಎನ್ನುವುದರ ಬಗ್ಗೆ ಮಾತನಾಡಿದ್ದಾರೆ. ನಾನು ಮದುವೆಯಾದಾಗ ಖಂಡಿತವಾಗಿಯೂ ಎಲ್ಲರಿಗೂ ತಿಳಿಸುತ್ತೇನೆ ನನ್ನ ಮದುವೆ ದೇವಸ್ಥಾನದಲ್ಲಿ ಅಥವಾ ನಮ್ಮ ಮನೆಯ ದೇವರ ಮನೆಯಲ್ಲಿ ಆಗಬೇಕು. ಏಕೆಂದರೆ ನಮ್ಮ ಮನೆಯಲ್ಲಿ ಒಂದು ಪಾಸಿಟಿವ್ ಎನರ್ಜಿ ಇರುತ್ತದೆ.
ಬಹಳ ಅದ್ದೂರಿಯಾಗಿ ಮದುವೆಯಾಗಿ ಮುಂದೆ ಅದರ ಬಗ್ಗೆ ನನಗೆ ಬೇಸರವಾಗಬಾರದು. ನಾನು ನನ್ನ ಪತಿಯ ಜೊತೆ ಜೀವನ ನಡೆಸುತ್ತೇನೆ ಹೀಗಾಗಿ ಮದುವೆ ನನ್ನಿಷ್ಟದಂತೆಯೇ ನಡೆಯಬೇಕು ಎಂದಿದ್ದಾರೆ ನಟಿ ರಚಿತಾ ರಾಮ್. ಸದ್ಯ ನಟಿಯ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.