ನಟಿ ರಶ್ಮಿಕಾ ಮಂದಣ್ಣ ಹೆಸರು ಯಾರು ತಾನೆ ಕೇಳಿಲ್ಲ ನೀವೇ ಹೇಳಿ. ನಟಿ ರಶ್ಮಿಕಾ ಮಂದಣ್ಣ ತಮ್ಮ ಸಿನಿಮಾಗಳ ಜೊತೆಗೆ ಆಗಾಗ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿರುತ್ತಾರೆ. ಇನ್ನು ನಟಿ ರಶ್ಮಿಕಾ ಮಂದಣ್ಣ ಅವರು ನೆಟ್ಟಿಗರ ಹಾಟ್ ಟಾಪಿಕ್ ಎಂದರೆ ತಪ್ಪಾಗುವುದಿಲ್ಲ.
ಏಕೆಂದರೆ ನಟಿ ರಶ್ಮಿಕ ಮಂದಣ್ಣ ಅವರು ಏನೇ ಮಾಡಿದರು ಸಹ ನೆಟ್ಟಿಗರು ಅವರನ್ನು ಟ್ರೋಲ್ ಮಾಡುತ್ತಿರುತ್ತಾರೆ. ನಟಿ ರಶ್ಮಿಕಾ ಮಂದಣ್ಣ ಕುರಿತು ಯಾವುದೇ ವಿಷಯ ಹೊರಬಂದರೂ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಕನ್ನಡಿಗರು ಟೀಕಿಸುತ್ತಾರೆ.
ಇದಕ್ಕೆ ಒಂದು ರೀತಿ ನಟಿ ರಶ್ಮಿಕ ಮಂದಣ್ಣ ಸ್ವತಹ ಅವರೇ ಕಾರಣ. ಹೌದು ನಟಿ ರಶ್ಮಿಕಾ ಮಂದಣ್ಣ ಕನ್ನಡದಿಂದ ತಮ್ಮ ಸಿನಿ ಕೆರಿಯರ್ ಶುರು ಮಾಡಿ ಇದೀಗ ನಮ್ಮ ಭಾಷೆಯನ್ನು ಮರೆತು ಹೋಗಿರುವುದು ನಿಜಕ್ಕೂ ಬೇಸರದ ಸಂಗತಿ. ಇನ್ನು ಈ ಕಾರಣದಿಂದ ನಟಿ ರಶ್ಮಿಕ ಅವರನ್ನು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೊಲ್ ಮಾಡಲಾಗುತ್ತದೆ.
ಸದ್ಯ ನಟಿ ರಶ್ಮಿಕಾ ಮಂದಣ್ಣ ಅವರು ಬಾಲಿವುಡ್ ಗೆ ಸಹ ಪಾದರ್ಪಣೆ ಮಾಡಿದ್ದಾರೆ. ಬಾಲಿವುಡ್ನ ಅವರ ಗುಡ್ ಬೈ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿತ್ತು, ಆದರೆ ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ಅಮಿತಾ ಬಚ್ಚನ್ ಒಟ್ಟಾಗಿ ನಟಿಸಿರುವ ಗುಡ್ ಬೈ ಸಿನಿಮಾ ಬಾಲಿವುಡ್ ನಲ್ಲಿ ಫ್ಲಾಪ್ ಸಾಬೀತಾಯಿತು.
ಇನ್ನು ನಟಿ ರಶ್ಮಿಕಾ ಅವರ ಬಾಲಿವುಡ್ ನ ಮತ್ತೊಂದು ಸಿನಿಮಾ ಮಿಷನ್ ಮಜ್ನು ಶೀಘ್ರದಲ್ಲೇ ಓಟಿಟಿ ಪ್ಲಾಟ್ ಫಾರ್ಮ್ ಗಳಲ್ಲಿ ಬಿಡುಗಡೆಯಾಗಲಿದೆ. ಸದ್ಯ ನಟಿ ರಶ್ಮಿಕ ಮಂದಣ್ಣ ಹಾಗೂ ಇಡೀ ಚಿತ್ರತಂಡ ಸಿನಿಮಾದ ಪ್ರಮೋಷನ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಇದೇ ವೇಳೆ ನಟಿ ರಶ್ಮಿಕ ಮಂದಣ್ಣ ಅವರು ಅಭಿಮಾನಿಗಳಿಗೆ ಕ್ಷಮೆ ಕೇಳಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಅವರು ಪ್ರಮೋಷನ್ ಮುಗಿಸಿ ಹೊರಗೆ ಬರುವಾಗ ಅಲ್ಲಿಂದ ಅಭಿಮಾನಿಗಳು ಹಾಗೆ ಬಾಲಿವುಡ್ ನ ಪಾ*ಪರಸಿಗಳು ಅವರನ್ನು ಮುತ್ತಿಕೊಂಡು ಅವರ ಜೊತೆಗೆ ಫೋಟೋ ತೆಗೆಸಿಕೊಳ್ಳಲು ಪ್ರಯತ್ನಿಸಿದರು. ರಶ್ಮಿಕಾ ಮಂದಣ್ಣ ಬೇರೆ ಕೆಲಸಗಳಿದ್ದ ಕಾರಣ ಅಲ್ಲಿಂದ ವೇಗವಾಗಿ ಹೋದರು.
ಇನ್ನು ಹೇಗೋ ಕಾರಿನೊಳಗೆ ಹೋದ ರಶ್ಮಿಕಾ ಮಂದಣ್ಣ ಅವರು ತಮ್ಮ ಡ್ರೈವರ್ ಗೆ ನಿಧಾನವಾಗಿ ಚಲಿಸುವಂತೆ ಹೇಳಿದರು. ಹಾಗೆ ಅಲ್ಲಿದ್ದ ಜನರಿಗೂ ಕೊಂಚ ಎಚ್ಚರದಿಂದ ಇರುವಂತೆ ಹೇಳಿದ್ದಾರೆ. ಇನ್ನು ಅವರ ಅಭಿಮಾನಿಗಳಿಗೆ ಕ್ಷಮೆ ಕೂಡ ಕೇಳಿದ್ದಾರೆ. ಸದ್ಯ ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.