ನಟ ಡಿ ಬಾಸ್ ದರ್ಶನ್ ಅವರಿಗೆ ಪ್ರಾಣಿಗಳು ಎಂದರೆ ಎಷ್ಟು ಇಷ್ಟ ಎಂಬುದು ನಿಮ್ಮೆಲ್ಲರಿಗೂ ಸಹ ಡಿ ಬಾಸ್ ದರ್ಶನ್ ಅವರು ತಮಗೆ ಏನೇ ಬೇಸರವಾದರೂ ಸಹ ಅಥವಾ ತಮಗೆ ಯಾವುದೇ ಖುಷಿ ವಿಚಾರಾ ಇದ್ದರು ಸಹ, ಅವರು ತಮ್ಮ ಫಾರ್ಮ್ ಹೌಸ್ ಗೆ ಭೇಟಿ ನೀಡಿ ಅಲ್ಲಿ ತಾವು ಸಾಕಿದ ಪ್ರಾಣಿ ಪಕ್ಷಿಗಳ ಜೊತೆಗೆ ಸಮಯ ಕಳೆಯುತ್ತಿದ್ದರು.
ಇನ್ನು ಡಿ ಬಾಸ್ ಫಾರ್ಮ್ ಹೌಸ್ ನಲ್ಲಿ ಅನೇಕ ಪ್ರಾಣಿ ಪಕ್ಷಿಗಳನ್ನು ಸಾಕಿದ್ದರು. ಅವರು ಮನುಷ್ಯರಿಗೆ ಎಷ್ಟು ಗೌರವ ನೀಡುತ್ತಾರೋ ಅಷ್ಟೇ ಗೌರವ ಮತ್ತು ಪ್ರೀತಿಯನ್ನು ಪ್ರಾಣಿ ಪಕ್ಷಿಗಳಿಗೂ ಸಹ ನೀಡುತ್ತಾರೆ. ಇನ್ನು ಡಿ ಬಾಸ್ ಅವರ ಫಾರ್ಮ್ ಹೌಸ್ ಗೆ ಇದೀಗ ಅರಣ್ಯ ಅಧಿಕಾರಿಗಳು ರೈಡ್ ನಡೆಸಿದ್ದು, ಅ*ಕ್ರಮವಾಗಿ ಸಾಕಿದ್ದ ಕೆಲವು ಪಕ್ಷಿಗಳನ್ನು,
ಅರಣ್ಯ ಅಧಿಕಾರಿಗಳು ಇದೀಗ ವಶಪಡಿಸಿಕೊಂಡು, ದರ್ಶನ್ ಅವರ ಮೇಲೆ ಕೇ*ಸ್ ದಾಖಲಿಸಿದ್ದಾರೆ. ಶುಕ್ರವಾರ ರಾತ್ರಿ ಮೈಸೂರು ಅರಣ್ಯ ಸಂಚಾರಿ ಇಲಾಖೆಯ ಅಧಿಕಾರಿಗಳು ಡಿ ಬಾಸ್ ದರ್ಶನ್ ಅವರ ಫಾರ್ಮ್ ಹೌಸ್ ಗೆ ದಾಳಿ ನಡೆಸಿದ್ದಾರೆ. ಇನ್ನು ಈ ವೇಳೆ ಕೆಲವು ಪಕ್ಷಿಗಳನ್ನು ಅಧಿಕಾರಿಗಳು ವ*ಶಕ್ಕೆ ಪಡೆದಿದ್ದಾರೆ.
ಈ ಪಕ್ಷಿಗಳು ಸಂರಕ್ಷಿತ ಪಕ್ಷಿಗಳಾದುದರಿಂದ, ಈ ಪಕ್ಷಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ದರ್ಶನ್ ಅವರ ತೋಟದ ಮನೆಯಲ್ಲಿ ಸಾಕತ್ತಿದ್ದ ಕೆಲವು ಪ್ರಾಣಿ ಪಕ್ಷಿಗಳಿಗೆ ವನ್ಯಜೀವಿ ಕಾ*ಯಿಲೆ ಹರಡಿ, ಅರಣ್ಯ ಇಲಾಖೆಯಿಂದ ಅನುಮತಿ ಪಡೆದಿರಲಿಲ್ಲ. ಇನ್ನು ಈ ಕಾರಣಕ್ಕೆ ದಾಳಿ ನಡೆದಿದೆ ಎಂದು ಸಂಚಾರಿ ದಳದ ಮುಖ್ಯಸ್ಥ ಭಾಸ್ಕರ್ ತಿಳಿಸಿದ್ದಾರೆ.
ನಾಲ್ಕು ಜಾತಿಯ ವಿಭಿನ್ನ ಬಾತುಕೋಳಿಗಳನ್ನು ಸಾಕುವಂತಿಲ್ಲ, ಇವುಗಳು ಕಾಡಿನಲ್ಲಿ ವಾಸ ಮಾಡಬೇಕು. ಇವುಗಳನ್ನು ಮೃ*ಗಾಲಯ ಅಥವಾ ಮನೆ ಅಥವಾ ಫಾರ್ಮ್ ಹೌಸ್ ಗಳಲ್ಲಿ ಸಾಕುವುದು ವನ್ಯ ಜೀವಿ ಸಂರಕ್ಷಣೆಯ ಕಾಯ್ದೆಯ ಅಡಿ ಅ*ಪರಾಧ ಎಂದು ಅವರು ತಿಳಿಸಿದ್ದಾರೆ.
ಸಾಕಾಣಿ ನಿಷೇಧಿತ ವನ್ಯ ಪಕ್ಷಿಗಳ ಸಾಕಣೆಗಾಗಿ ದರ್ಶನ್ ಅವರ ವಿರುದ್ಧ ಪ್ರ*ಕರಣ ದಾಖಲಿಸಲಾಗಿದೆ. ಈ ಪಕ್ಷಿಗಳನ್ನು ಅವುಗಳ ಪ್ರಬೇಧದ ಪಕ್ಷಿಗಳು ಜೀವಿಸುವ ಟಿ ನರಸೀಪುರದ ಸಮೀಪದ ಅಧಿನಾರು ಕೆರೆಯಲ್ಲಿ ಬಿಡಲು ನ್ಯಾಯಾಲಯದ ಅನುಮತಿ ಪಡೆಯುತ್ತಿದ್ದೇವೆ. ಬಳಿಕ ಅಲ್ಲಿಗೆ ಬಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದರ್ಶನ್ ಅವರು ಪ್ರಾಣಿ ಪಕ್ಷಿಗಳ ಪ್ರಿಯರಾಗಿದ್ದು, ಎಲ್ಲವನ್ನೂ ಅವರು ಕಾನೂನಿನ ಕೌಕಟಿನಲ್ಲೆ ಮಾಡುತ್ತಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಅಧಿಕಾರಿಗಳು ದಾಳಿ ಮಾಡಿರುವುದು ಆಶ್ಚರ್ಯ ಮೂಡಿಸಿದೆ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ..