ನಟ ನಿರ್ದೇಶಕ ರೇಷನ್ ಶೆಟ್ಟಿ ಅವರ ಕಾಂತಾರ ಸಿನಿಮಾ ಗೆಲುವು ಕಂಡ ಹಿನ್ನೆಲೆ ಕಾಂತಾರ 2 ಸಿನಿಮಾದ ಬಗ್ಗೆ ಎಲ್ಲೆಡೆ ಬಾರಿ ಚರ್ಚೆಗಳು ನಡೆಯುತ್ತಿದೆ. ಕೆಲವು ದಿನಗಳ ಹಿಂದೆಯೇ ಕಾಂತಾರ 2 ಸಿನಿಮಾದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿತ್ತು. ಇನ್ನು ಈ ಸಿನಿಮಾದ ಬಗ್ಗೆ ನಾವು ಚರ್ಚಿಸಿ ಇಲ್ಲ ಎಂದು ರಿಷಬ್ ಶೆಟ್ಟಿ ಹೇಳಿದ್ದರು.
ಇದೀಗ ಕಾಂತರಾ ಸಿನಿಮಾದ ನಿರ್ಮಾಪಕ ವಿಜಯ್ ಕಿರಗುಂದೂರು ಅವರು ಕಾಂತಾರ 2 ಸಿನಿಮಾದ ಬಗ್ಗೆ ಅಭಿಮಾನಿಗಳಿಗೆ ಹೊಸ ಅಪ್ಡೇಟ್ ನೀಡಿದ್ದಾರೆ. ಕಾಂತಾರ 2 ಸಿನಿಮಾದ ಶೂಟಿಂಗ್ ಹಾಗೂ ರಿಲೀಸ್ ದಿನಾಂಕದ ಬಗ್ಗೆ ಇದೀಗ ವಿಜಯ್ ಕಿರಾಗುಂದೂರು ಅವರು ಮಾತನಾಡಿದ್ದಾರೆ.
ಜೊತೆಗೆ ಮತ್ತೊಂದು ಮಾಹಿತಿಯನ್ನು ಸಹ ಅವರು ಹಂಚಿಕೊಂಡಿದ್ದು, ಕಾಂತಾರ ಸಿನಿಮಾದ ಕಥೆ ಹಾಗೂ ಶೂ*ಟಿಂಗ್ ನಲ್ಲಿ ರಿಷಬ್ ಶೆಟ್ಟಿ ಹಾಗೂ ತಂಡ ತಮ್ಮನ್ನು ತೊಡಗಿಸಿಕೊಂಡಿದೆ ಎಂದು ನಿರ್ಮಾಪಕ ವಿಜಯ್ ಅವರು ತಿಳಿಸಿದ್ದಾರೆ. ಚಿತ್ರೀಕರಣದ ಶೂ*ಟಿಂಗ್ ಗಾಗಿ ಕಾಡು ಮೇಡು ಅಳೆಯುತ್ತಿರುವುದಾಗಿ ಕೂಡ ವಿಜಯ್ ಕಿರಗಂದೂರು ಹೇಳಿದ್ದಾರೆ.
ಅವರೇ ಹೇಳಿದಂತೆ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಕಾಂತಾರ 2 ತೆರೆ ಮೇಲೆ ಬರಲಿದೆ. ಪಕ್ಕ ಪ್ಲಾನ್ ಜೊತೆಗೆ ಈ ಬಾರಿ ಚಿತ್ರೀಕರಣಕ್ಕೆ ಇಳಿಯಲಿದೆ ಚಿತ್ರತಂಡ. ಕಾಂತರಾ ಮೊದಲ ಭಾಗದ ಶೂಟಿಂಗ್ ಮಾಡುವಾಗ ಚಿತ್ರತಂಡ ಹಲವು ಕಷ್ಟಗಳನ್ನು ಎದುರಿಸಬೇಕಾಯಿತು. ಇನ್ನು ಈ ಕಾರಣದಿಂದ ಸಿನಿಮಾದ ಬಜೆಟ್ ಕೂಡ ಹೆಚ್ಚಾಯಿತು.
ಆದರೆ ಕಾಂತಾರ 2 ಸಿನಿಮಾದಲ್ಲಿ ಯಾವುದೇ ತೊಂದರೆಗಳನ್ನು ಎದುರಿಸಬಾರದು ಎಂದು ಚಿತ್ರತಂಡ ಈಗಿನಿಂದಲೇ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈ ಬಾರಿ ಕಾಂತಾರ 2 ಸಿನಿಮಾ ಯಾವುದೇ ತೊಂದರೆಗಳಿಲ್ಲದೆ ಅದ್ಭುತವಾಗಿ ಮೂಡಿಬರುವುದರಿಂದ ಯಾವುದೇ ಒಂದು ಮಾತಿಲ್ಲ ಎನ್ನಲಾಗುತ್ತಿದೆ.
ಕಾಂತಾರ 2 ಸಿನಿಮಾದ ಕಥೆ ಏನು? ಈ ಸಿನಿಮಾದಲ್ಲಿ ಯಾರೆಲ್ಲ ಕಲಾವಿದರು ಇರುತ್ತಾರೆ? ಈ ರೀತಿಯ ಪ್ರಶ್ನೆಗಳನ್ನು ಕುರಿತು ನಿರ್ಮಾಪಕ ವಿಜಯ್ ಅವರು ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಆದರೆ ಕಾಂತಾರ 2 ಸಿನಿಮಾದ ಶೂಟಿಂಗ್ ಹಾಗೇ ಬಿಡುಗಡೆಯ ದಿನಾಂಕವನ್ನು ಸಹ ಹೊಂಬಾಳೆ ಫಿಲ್ಮ್ಸ್ ಮಾಲೀಕ ವಿಜಯ್ ಕಿರಗುಂದುರು ಗೋಷಿಸಿದ್ದಾರೆ.
ಸದ್ಯ ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಲ್ಲದೆ ಕಾಂತಾರ ಅಭಿಮಾನಿಗಳಿಗೆ ಈ ವಿಷಯ ಬಹಳ ಖುಷಿ ತಂದು ಕೊಟ್ಟಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ. ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ..