ದೊಡ್ಮನೆಯ ಮತ್ತೊಂದು ಕುಡಿ ಸಿನಿಮಾರಂಗಕ್ಕೆ ಎಂಟ್ರಿ! ಅಷ್ಟಕ್ಕೂ ಅದು ಯಾರು ಗೊತ್ತಾ?… ಸಂಪೂರ್ಣ ಮಾಹಿತಿ ಇಲ್ಲಿದೇ ನೋಡಿ..!!

Entertainment

ಕನ್ನಡ ಚಿತ್ರರಂಗದ ಹೆಮ್ಮೆಯನ್ನು ದೊಡ್ಮನೆಯ ಕುಟುಂಬ ಇನ್ನಷ್ಟು ಹರಾಡಿಸಿದೆ ಎಂದರೆ ತಪ್ಪಾಗುವುದಿಲ್ಲ. ದೊಡ್ಮನೆಯ ಪ್ರತಿಯೊಬ್ಬ ಸದಸ್ಯರು ಸಹ ನಮ್ಮ ಜೀವನವನ್ನು ಕಲೆಗೆ ಅರ್ಪಿಸಿದ್ದಾರೆ. ಡಾ ರಾಜಕುಮಾರ್ ಅವರ ತಂದೆಯ ಕಾಲದಿಂದ ಇಂದಿನವರೆಗೂ ದೊಡ್ಮನೆಯವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.

ಡಾ. ರಾಜ್ ಕುಮಾರ್ ಅವರ ತಂದೆ ಅವರು ಸಹ ನಾಟಕಗಳಲ್ಲಿ ಅಭಿನಯಿಸುತ್ತಾ ಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಇನ್ನು ಅವರ ನಂತರ ಅಣ್ಣಾವ್ರು ಸಹ ಕನ್ನಡ ಸಿನಿಮಾರಂಗದಲ್ಲಿ ಬೇರೆ ಯಾರೂ ಸಹ ಮಾಡಿರದ ಸಾಧನೆ ಮಾಡಿದ್ದಾರೆ. ಇಂದಿಗೂ ಸಹ ಡಾ. ರಾಜ್ ಕುಮಾರ್ ಅವರ ಸಿನಿಮಾಗಳನ್ನು ಜನರು ಬಹಳ ಇಷ್ಟ ಪಟ್ಟು ನೋಡುತ್ತಾರೆ.

ಇನ್ನು ರಾಜ್ ಕುಮಾರ್ ಅವರ ಮಕ್ಕಳಾದ ಶಿವಣ್ಣ, ರಾಘಣ್ಣ, ಹಾಗೂ ಪುನೀತ್ ಅವರು ಸಹ ಸಿನಿಮಾರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇನ್ನು ರಾಘಣ್ಣ ಅವರ ಮಕ್ಕಳಾದ ವಿನಯ್ ರಾಜ್ ಕುಮಾರ್ ಹಾಗೂ ಯುವ ರಾಜ್ ಕುಮಾರ್ ಇಬ್ಬರೂ ಸಹ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಇನ್ನು ಅವರ ಮಗಳು ಪೂರ್ಣಿಮಾ ಹಾಗೂ ರಾಮ್ ಕುಮಾರ್ ಅವರ ಮಗಳು ಧನ್ಯ ರಾಮ್ ಕುಮಾರ್ ಅವರು ಸಹ ಇತ್ತೀಚೆಗೆ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಇನ್ನು ಇದೀಗ ಅವರ ಮತ್ತೊಬ್ಬ ಮಗಳು ಲಕ್ಷ್ಮಿ ಹಾಗೂ ಅವರ ಅಳಿಯ ಗೋವಿಂದರಾಜು ಅವರ ಮಗ ಷನ್ನುಖ ಗೋವಿಂದರಾಜು ಸಹ ಸಿನಿಮಾರಂಗಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ.

ಈ ಬಗ್ಗೆ ಸ್ವತಃ ಷನ್ಮುಖ ಅವರೇ ಇತ್ತೀಚೆಗೆ ನೀಡಿದ ಮಾಧ್ಯಮದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ನಮ್ಮ ಮನೆಯಲ್ಲಿ ಮದುವೆಯಾದ ಮೇಲೆ ಸಿನಿಮಾರಂಗಕ್ಕೆ ಪರಿಚಯ ಮಾಡುವ ರೂಡಿ ಇದೆ. ಆ ಲೇಡಿ ಲಕ್ ನನಗೂ ಸಹ ವರ್ಕ್ ಆಗುತ್ತದೆ ಎಂದುಕೊಂಡಿದ್ದೇನೆ. ಇನ್ನು ನನಗೆ ಸಿನಿಮಾಗಳಲ್ಲಿ ಅಭಿನಯಿಸುವ ಆಸೆ ಇತ್ತು, ಇದೀಗ ಕೊನೆಗೂ ಅವಕಾಶ ದೊರಕಿದೆ ಎಂದು ತಮ್ಮ ಸಿನಿಮಾದ ಕುರಿತು ಮಾತನಾಡಿದ್ದಾರೆ.

ಇನ್ನು ಆರ್ ಅಶೋಕ್ ನಿರ್ದೇಶನದಲ್ಲಿ ಹಾಗೆ ಮಾದೇಶ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ನಿಂಬಿಯಾ ಬನಾದ ಮ್ಯಾಗೆ ಸಿನಿಮಾಗೆ ಷನ್ನುಖ ಅವರು ನಾಯಕನಟನಾಗಿ ಆಯ್ಕೆಯಾಗಿದ್ದಾರೆ. ಸದ್ಯ ಈ ಸಿನಿಮಾದ ಶೂ*ಟಿಂಗ್ ಸಹ ಪ್ರಾರಂಭವಿದೆ. ಶೀಘ್ರದಲ್ಲೇ ದೊಡ್ಮನೆಯಿಂದ ಮತ್ತೊಬ್ಬ ಕಲಾವಿದನ ಆಗಮನ ಚಿತ್ರರಂಗಕ್ಕೆ ಆಗಲಿದೆ.

ಇನ್ನು ಅವರು ಯಾವ ರೀತಿ ಅಭಿಮಾನಿಗಳನ್ನು ತಮ್ಮ ಕಡೆಗೆ ಆಕರ್ಷಿಸಿ ಕೊಳ್ಳುತ್ತಾರೆ ಎಂಬುದು ಅವರ ಟ್ಯಾಲೆಂಟ್ ಗೆ ಬಿಟ್ಟಿದ್ದು. ಸದ್ಯ ಈ ವಿಷಯ ಎಲ್ಲೆಡೆ ವೈರಲ್ ಆಗುತ್ತಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…

Leave a Reply

Your email address will not be published. Required fields are marked *