ಮಂಗಳಮುಖಿ ಎಂದ ತಕ್ಷಣ ಕೆಲವರು ಅವರು ನೋಡುವ ವಿಧಾನವೇ ಬೇರೆ ಯಾಗುತ್ತದೆ. ಹೌದು ಅವರು ನಮ್ಮ ರೀತಿ ಮನುಷ್ಯರು ಎಂಬುದನ್ನು ಜನ ಮರೆತು ಅವರನ್ನು ಬಹಳ ಕೆಟ್ಟ ದೃಷ್ಟಿಯಿಂದ ನೋಡುತ್ತಾರೆ. ಇನ್ನು ಇಂತಹವರಿಗೆ ಕೆಲಸಗಳು ಸಿಗದೆ ಅವರು ಬಿಕ್ಷಾಟನೆ ಮಾಡಿಕೊಂಡು ತಮ್ಮ ಜೀವನ ನಡೆಸಿಕೊಂಡು ಹೋಗುತ್ತಾರೆ. ಇನ್ನು ಕೆಲವರು ಹೊಟ್ಟೆ ಪಾಡಿಗಾಗಿ ವೇ*ಶ್ಯಾವಾ*ಟಿಕೆಗೆ ಸಹ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.
ಇನ್ನು ಇದೆ ರೀತಿಯ ಒಂದು ಘಟನೆಯ ಬಗ್ಗೆ ನಿಮಗೆ ಮಾಹಿತಿ ನೀಡುತ್ತೇವೆ ಬನ್ನಿ. ತಮಿಳುನಾಡಿನ ಮಧುರೈನಲ್ಲಿ, ಕವಿತಾ ಎಂಬ ಬಹಳ ಸ್ಟ್ರಿಕ್ಟ್ ಪೊಲೀಸ್ ಆಫಿಸರ್ ಇದ್ದರು. ಅವರು ಒಂದು ದಿನ ಮಧುರೈ ಸುತ್ತಾ ಮುತ್ತಾ ತಮ್ಮ ಜೀಪ್ ನಲ್ಲಿ ಸುತ್ತಾಡುತ್ತಿರುವಾಗ, ಅವರಿಗೆ ಮಧುರೈ ರೈಲ್ವೆ ನಿಲ್ದಾಣದ ಬಳಿ ಕೆಲವು ಮಂಗಳಮುಖಿಯರ ಗುಂಪನ್ನು ಕಂಡು ಅಲ್ಲಿಗೆ ಹೋಗಿದ್ದಾರೆ.
ಇನ್ನು ಪೊಲೀಸ್ ಜೀಪ್ ನ ಸದ್ದು ಕೇಳುತ್ತಲೇ ಅಲ್ಲಿದ್ದ ಎಲ್ಲಾ ಮಂಗಳಮುಖಿಯರು ಅಲ್ಲಿಂದ ಓಡಿ ಹೋಗಿದ್ದಾರೆ. ಇನ್ನು ಕವಿತಾ ಅಲ್ಲಿಗೆ ಬಂದರೂ ಸಹ ಒಬ್ಬ ಮಂಗಳಮುಖಿ ಮಾತ್ರ ಅಲ್ಲಿಂದ ಓದಿ ಹೋಗದೆ ಅಲ್ಲೇ ನಿಂತಿದ್ದಳು. ಇನ್ನು ಕವಿತಾ ಅವರು ಆ ಮಂಗಳಮುಖಿಯನ್ನು ನೋಡಿ ಆಕೆಯನ್ನು ವಿಚಾರಣೆಗೆ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ.
ಇನ್ನು ಆಕೆಯನ್ನು ವಿಚಾರಣೆ ನಡೆಸಿದಾಗ ಆ ಮಂಗಳಮುಖಿ ಕವಿತಾ ಅವರು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಸಹ ಇಂಗ್ಲೀಷ್ ನಲ್ಲಿ ಬಹಳ ಸರಳವಾಗಿ ಉತ್ತರಿಸಿದ್ದಾರೆ. ಇನ್ನು ಕವಿತಾ ಅವರು ಆಕೆಯನ್ನು ನೋಡಿ ಆಶ್ಚರ್ಯ ಪಟ್ಟು, ಆ ಮಂಗಳಮುಖಿಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬೇಕು ಎಂದು ಆಕೆಯನ್ನು ತನ್ನ ಬಗ್ಗೆ ಎಲ್ಲವನ್ನೂ ಹೇಳುವಂತೆ ಕೇಳಿದ್ದಾರೆ.
ಇನ್ನು ಮಾತು ಮುಂದುವರೆಸಿದ ಮಂಗಳಮುಖಿ, ನನ್ನ ಹೆಸರು ಮಹೇಶ್ವರನ್ ನಾನು ಎಂಬಿಬಿಎಸ್ ಪದವಿ ಮುಗಿಸಿ ಒಂದು ಪ್ರೈವೇಟ್ ಆಸ್ಪತ್ರೆಯಲ್ಲಿ ವೈದ್ಯ ವೃತ್ತಿ ಮಾಡುತ್ತಿದೆ. ಇದೇ ವೇಳೆ ನನ್ನ ದೇಹದಲ್ಲಿ ಬದಲಾವಣೆಗಳು ಆಗಲು ಶುರುವಾದವು ನಾನು ಗಂಡು ದೇಹದಲ್ಲಿರುವ ಹೆಣ್ಣು ಎಂದು ಅರಿತುಕೊಂಡೆ. ಇನ್ನು ತಡ ಮಾಡದೆ ನಾನು ಒಂದು ಆಸ್ಪತ್ರೆಯಲ್ಲಿ ನನ್ನ ಲಿಂ*ಗ ಬದಲಾವಣೆ ಮಾಡಿಸಿಕೊಂಡೆ.
ನನ್ನ ಲಿಂಗ ಬದಲಾವಣೆ ಬಗ್ಗೆ ನಾನು ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲಿ ತಿಳಿದು ಅವರು ನನ್ನನ್ನು ಕೆಲಸದಿಂದ ತೆಗೆದು ಹಾಕಿದರು. ಇನ್ನು ನಾನು ಬೇರೆ ಕಡೆ ಕೆಲಸ ಹುಡುಕಲು ಹಾಗೂ ಇರಲು ಮನೆ ಹುಡುಕಲು ಪ್ರಯತ್ನಿಸಿದೆ. ಆದರೆ ಯಾರು ನನಗೆ ಸಹಾಯ ಮಾಡಲಿಲ್ಲ. ಇನ್ನು ಹೊಟ್ಟೆಪಾಡಿಗಾಗಿ ನಾನು ಒಂದು ಮಂಗಳಮುಖಿಯರ ಗುಂಪಿನೊಂದಿಗೆ ಸೇರಿಕೊಂಡೆ. ಇನ್ನು ಅವರು ನನ್ನನ್ನು ರೈಲ್ವೆ ಸ್ಟೇಷನ್ ಬಳಿಗೆ ಕರೆದುಕೊಂಡು ಬಂದರು,
ಇನ್ನು ನೀವು ಬರುತ್ತಿದ್ದನ್ನು ನೋಡಿ ಅವರು ಹೆದರಿ ಓಡಿ ಹೋದರು, ಅವರು ಏಕೆ ಓಡಿ ಹೋಗುತ್ತಿದ್ದಾರೆ ಎಂದು ತಿಳಿಯದೆ ನಾನು ಅಲ್ಲೇ ನಿಂತುಕೊಂಡೆ ಎಂದಿದ್ದಾರೆ. ಇನ್ನು ಮಂಗಳ ಮುಖಿಯ ಮಾತುಗಳನ್ನು ಕೇಳಿ ಕವಿತಾ ಅವರು ಆಕೆಯ ಕಥೆಯನ್ನು ಒಂದು ಎಂಜಿಯೋಗೆ ತಿಳಿಸಿದ್ದಾರೆ. ಇನ್ನು ಎಂಜಿಯೋ ಸಹಾಯದಿಂದ ಮಹೇಶ್ವರನ್ ಗೆ ಕವಿತಾ ಅವರು ಮತ್ತೆ ತಮ್ಮ ವೃತ್ತಿಯನ್ನು ಪ್ರಾರಂಭಿಸಲು ಸಹಾಯ ಮಾಡಿದ್ದಾರೆ.