ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್ 10 ನೇ ತರಗತಿ ಪರೀಕ್ಷೆಯಲ್ಲಿ ಏಷ್ಟು ಅಂಕ ಪಡೆದಿದ್ದರು ಗೊತ್ತಾ?… ನೋಡಿ

Entertainment

ಕನ್ನಡ ಚಿತ್ರರಂಗ ಕಂಡ ಅದ್ಭುತ ನಟಿಯರ ಪೈಕಿ ನಟಿ ರಚಿತಾ ರಾಮ್ ಕೂಡ ಒಬ್ಬರು. ನಟಿ ರಚಿತಾ ರಾಮ್ ತಮ್ಮ ಅದ್ಭುತ ಅಭಿನಯ ಹಾಗೂ ಗ್ಲಾಮರ್ ಗೆ ಅದೆಷ್ಟೋ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂದ್ದಾರೆ. ಇನ್ನು ಕನ್ನಡದ ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿ ರಚಿತಾ ರಾಮ್ ಅಭಿನಯಿಸಿದ್ದು, ನಟಿ ರಚಿತಾ ರಾಮ್ ಇದೀಗ,

ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟಿಯರ ಪೈಕಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಮೊದಮೊದಲು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅರಸಿ ಧಾರಾವಾಹಿಯಲ್ಲಿ ನಟಿ ರಚಿತಾ ರಾಮ್ ಅವರು ಖಳನಾಯಕೀ ಪಾತ್ರದಲ್ಲಿ ಕಾಣಿಸಿಕೊಂಡು, ಸಾಕಷ್ಟು ಜನರ ಮನ ಗೆಲ್ಲುವಲ್ಲಿ ನಟಿ ಯಶಸ್ವಿಯಾಗಿದ್ದರು.

ಇನ್ನು ಈ ಧಾರಾವಾಹಿಯ ಮೂಲಕ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡ ನಟಿ ರಚಿತಾ ರಾಮ್ ನಂತರ ದಿನಗಳಲ್ಲಿ ದರ್ಶನ್ ಅವರ ಅಭಿನಯದ ಬುಲ್ ಬುಲ್ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾದರು. ಇನ್ನು ಬುಲ್ ಬುಲ್ ಸಿನಿಮಾದಲ್ಲಿ ನಟಿ ರಚಿತಾ ರಾಮ್ ಬಹಳ ಅದ್ಭುತವಾಗಿ ನಟಿಸಿ, ಈ ಸಿನಿಮಾದ ನಂತರ ನಟಿ ರಚಿತಾ ರಾಮ್ ಆವರಿಗೆ ಸಾಲು ಸಾಲು ಆಫರ್ ಗಳು ಬರಲು ಶುರುವಾದವೂ.

ಇನ್ನು ಇದೆ ರೀತಿ ತಮ್ಮ ನಟನೆಯ ಮೂಲಕ ನಟಿ ರಚಿತಾ ರಾಮ್ ಅವರ ಅಭಿಮಾನಿ ಬಳಗ ದಿನೇ ದಿನೇ ಹೆಚ್ಚಾಗುತ್ತಾ ಹೋಯಿತು. ಇನ್ನು ಕನ್ನಡದ ಅನೇಕ ಸ್ಟಾರ್ ನಟರ ಜೊತೆಗೆ ನಟಿ ರಚಿತಾ ರಾಮ್ ಸ್ಕ್ರೀನ್ ಶೇರ್ ಮಾಡಿದ್ದಾರೆ. ಡಿ ಬಾಸ್ ದರ್ಶನ್ ಸೇರಿದಂತೆ, ಗೋಲ್ಡನ್ ಸ್ಟಾರ್ ಗಣೇಶ್, ಪುನೀತ್ ರಾಜ್ ಕುಮಾರ್,

ಕಿಚ್ಚ ಸುದೀಪ್, ಉಪೇಂದ್ರ ನಂತಹ ಅದ್ಭುತ ಕಲಾವಿದರ ಜೊತೆಗೆ ನಾಯಕಿಯಾಗಿ ನಟಿ ರಚಿತಾ ರಾಮ್ ನಟಿಸಿದ್ದಾರೆ. ಜೊತೆಗೆ ನಟಿ ರಚಿತಾ ರಾಮ್ ಒಂದಲ್ಲಾ ಎರಡಲ್ಲ ಹಲವಾರು ಪ್ರಶಸ್ತಿಗಳನ್ನು ಸಹ ಪಡೆದುಕೊಂಡಿದ್ದಾರೆ. ಇನ್ನು ನಟಿ ರಚಿತಾ ರಾಮ್ ಅವರು ಸಿನಿಮಾರಂಗಕ್ಕೆ ಬಂದು ಇದೀಗ 10 ವರ್ಷಗಳನ್ನು ಪೂರೈಸಿದ್ದಾರೆ.

ಇನ್ನು ನಟಿ ರಚಿತಾ ರಾಮ್ ಹಾಗೂ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾ ಇದೀಗ ಬಿಡುಗಡೆಯಾಗಿ ದೊಡ್ಡಮಟ್ಟದಲ್ಲಿ ಹೆಸರು ಮಾಡುತ್ತಿದೆ. ಇನ್ನು ನಟಿ ರಚಿತಾ ರಾಮ್ ಅವರು ಶಿಕ್ಷಣದ ಬಗ್ಗೆ ಮಾತನಾಡುವುದಾದರೆ, ನಟಿ ರಚಿತಾ ರಾಮ್ ಬೆಂಗಳೂರಿನ ಗವಿಪುರಂನ ನಿವೇದಿತಾ ಬಾಲಕಿಯರ ಪ್ರೌಢಶಾಲೆಯಲ್ಲಿ ತಮ್ಮ ಹತ್ತನೇ ತರಗತಿ ಮುಗಿಸಿದ್ದಾರೆ.

ಇನ್ನು ನಟಿ ರಚಿತಾ ರಾಮ್ ಅವರು ತಮ್ಮ 10ನೇ ತರಗತಿ ಪರೀಕ್ಷೆಯಲ್ಲಿ 625 ಅಂಕಗಳಿಗೆ 601 ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ. ಸದ್ಯ ನಟಿ ರಚಿತಾ ರಾಮ್ ಅವರ ಹತ್ತನೇ ತರಗತಿಯ ಮಾರ್ಕ್ಸ್ ಕಾರ್ಡ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇನ್ನು ಈ ಕುರಿತು ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…

Leave a Reply

Your email address will not be published. Required fields are marked *