ನಮಸ್ಕಾರ ಸ್ನೇಹಿತರೆ, ಕಳೆದ ವಾರ ಬಿಡುಗಡೆಯಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹು ನಿರೀಕ್ಷಿತ ಸಿನಿಮಾ ಕ್ರಾಂತಿ ಬಿಡುಗಡೆಯಾದ ಮೊದಲ ದಿನವೇ 12 ರಿಂದ 13 ಕೋಟಿ ಕಲೆಕ್ಷನ್ ಮಾಡಿ ಭರ್ಜರಿ ಓಪನಿಂಗ್ ಪಡೆದುಕೊಂಡಿತ್ತು. ಇನ್ನು ಕ್ರಾಂತಿ ಸಿನಿಮಾ ನೋಡಿದ ಪ್ರತಿಯೊಬ್ಬರು ಸಹ ಈ ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ.
ಇನ್ನು ಕ್ರಾಂತಿ ಸಿನಿಮಾ ದಿನದಿಂದ ದಿನಕ್ಕೆ ಕಲೆಕ್ಷನ್ ಮಾಡಿ ನೂರು ಕೋಟಿ ಕ್ಲಬ್ ಸೇರಿದೆ ಎನ್ನುವ ವಿಚಾರ ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅಲ್ಲದೆ ಕ್ರಾಂತಿ ಚಿತ್ರತಂಡದವರು ಸಹ 109 ಕೋಟಿ ಕಲೆಕ್ಷನ್ ಮಾಡಿದೆ ಎನ್ನುವ ಖುಷಿಯಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದರು.
ಅಲ್ಲದೆ ಕ್ರಾಂತಿ ಸಿನಿಮಾ ಮೊದಲ ದಿನವೇ 35 ಕೋಟಿ ಕಲೆಕ್ಷನ್ ಮಾಡಿದೆ ಎಂದು ಹಲವರು ಸೋಶಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದರು, ಇನ್ನು ಅನೇಕರು ಈ ವಿಚಾರವನ್ನು ಟ್ರೋಲ್ ಸಹ ಮಾಡಿದ್ದರು. ಹೌದು, ಈ ರೀತಿಯ ತಪ್ಪು ಮಾಹಿತಿಯನ್ನು ಜನರಿಗೆ ನೀಡಬೇಡಿ ಎಂದು ಕೆಲವರು ಮಾಡಿದ್ದರು.
ಇನ್ನು ಇದೀಗ ಈ ಪೋಸ್ಟರ್ ಗೆ ಟಕ್ಕರ್ ನೀಡುವಂತಹ ಮತ್ತೊಂದು ಪೋಸ್ಟರ್ ಹೊರ ಬಿದ್ದಿದೆ. ಅದು ಇತ್ತೀಚಿಗೆ ಪ್ರಥಮ್ ನಟನೆಯ ನಟಭಯಂಕರ ಸಿನಿಮಾ ಬಿಡುಗಡೆಯಾಗಿದ್ದು, ಈ ಸಿನಿಮಾ ಮೊದಲ ದಿನವೇ ಸುಮಾರು 35 ಕೋಟಿ ಕಲೆಕ್ಷನ್ ಮಾಡಿದೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.
ಇನ್ನು ಈ ಪೋಸ್ಟರ್ ಅನ್ನು ಕ್ರಾಂತಿ ಸಿನಿಮಾದ 35 ಕೋಟಿ ಕಲೆಕ್ಷನ್ ಮಾಡಿದೆ ಎನ್ನುವ ಪೋಸ್ಟರ್ ಜೊತೆಗೆ ಹೋಲಿಸಿ ಪ್ರಥಮ್ ನಿಜವಾದ ಬಾಕ್ಸ್ ಆಫೀಸ್ ಸುಲ್ತಾನ ಎಂದು ಟ್ರೋಲ್ ಮಾಡಿದ್ದಾರೆ. ಈ ಪೋಸ್ಟರ್ ವೈರಲ್ ಆದ ಬೆನ್ನೆಲೆ ನಟ ಪ್ರಥಮ್ ಅವರು ಇದೀಗ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇದು ಸುಳ್ಳು ಸುದ್ದಿ, ನಾನು ಪೂಜೆ ಮಾಡು ಕಬ್ಬಾಳಮ್ಮನ ಸಾಕ್ಷಿ ಈ ವಿಷಯಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಇನ್ನು ಮುಖ್ಯವಾಗಿ ನಮ್ಮ ಚಿತ್ರ ಅಷ್ಟು ಕಲೆಕ್ಷನ್ ಮಾಡಿಲ್ಲ. ದರ್ಶನ್ ಸರ್ ಅವರು ತುಂಬಾ ದೊಡ್ಡವರು. ಸುಮ್ಮನೆ ಸುಳ್ಳು ಹೋಲಿಕೆ ಬೇಡ. ನಮ್ಮ ಸಿನಿಮಾ ಚೆನ್ನಾಗಿ ಓಡುತ್ತಿದೆ ಅದೇ ಸಾಕು. ಆದರೆ ಇದು ನಿಜಕ್ಕೂ ಸುಳ್ಳು ಸುದ್ದಿ.
ಈಶ್ವರನ ಸಾಕ್ಷಿಗೂ ನನಗೂ ಇದಕ್ಕೂ ಸಂಬಂಧ ಇಲ್ಲ. ಎಂದು ಪ್ರಥಮ ಅವರು ತಮ್ಮ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…