ಕನ್ನಡದ ಆಕ್ಷನ್ ಪ್ರಿನ್ಸ್ ಅಂತಲೆ ಹೆಸರು ಮಾಡಿರುವ ದ್ರುವ ಸರ್ಜಾ ಅವರ ಸಿನಿಮಾ ಮಾರ್ಟೀನ್, ಈ ಸಿನಿಮಾದ ಮೇಲೆ ಇದೀಗ ಎಲ್ಲರ ಕಣ್ಣು ಬಿದ್ದಿದೆ. ಕನ್ನಡದ ಫ್ಯಾನ್ ಇಂಡಿಯಾ ಸಿನಿಮಾ ಲಿಸ್ಟ್ ನಲ್ಲಿ ಮಾರ್ಟೀನ್ ಚಿತ್ರವೂ ಇದೆ. ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ರಿಲೀಸ್ ಆಗಬೇಕಿತ್ತು.
ಧ್ರುವ ಸರ್ಜಾ ಫ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಬೇಕಿತ್ತು. ಆದರೆ ಸಿನಿಮಾದ ತಯಾರಿಕೆ ವೇಳೆ ಆದ ಕೆಲವು ಅಡೆ ತಡೆಗಳಿಂದ ಸಿನಿಮಾ ಮುಂದೂಡಲಾಗಿದೆ. ಇನ್ನು ಮಾರ್ಟಿನ್ ಸಿನಿಮಾದ ಶೂ*ಟಿಂಗ್ ಈಗಾಗಲೇ ಶೂ*ಟಿಂಗ್ ಮುಗಿದಿದೆ. ಮತ್ತು 5 ಭಾಷೆಗಳಲ್ಲಿ ಸಿನಿಮಾದ ಟೀಸರನ್ನು ರಿಲೀಸ್ ಮಾಡಲು ಚಿತ್ರ ತಂಡ ಹಗಲು ರಾತ್ರಿ ಕೆಲಸ ಮಾಡುತ್ತಿದೆ.
ವಿಷಯ ಏನೆಂದರೆ ಇದೆ ಫೆಬ್ರವರಿಯಲ್ಲಿ ಮಾರ್ಟಿನ್ ಚಿತ್ರದ ಟೀಸರ್ ರಿಲೀಸ್ ಆಗುತ್ತದೆ ಅಂತ ಆಕ್ಷನ್ ಪ್ರಿನ್ಸ್ ದ್ರುವ ಸರ್ಜಾ ಮಾಹಿತಿ ಕೊಟ್ಟಿದಾರೆ. ಆಕ್ಷನ್ ಪ್ರಿನ್ಸ್ ಎಡಿಟಿಂಗ್ ಸ್ಟುಡಿಯೋ ಬಿಟ್ಟು ಹೋಗುತ್ತಿಲ್ಲ. ಮಾರ್ಟಿನ್ ಟೀಸರ್ ರೆಡಿ ಆಗೋವರ್ಗು ಕದಲ್ಲುತ್ತಲ್ಲೇ ಇಲ್ಲ.
ಹೀಗೆಂದು ಹೇಳುವುದಕ್ಕೆ ಅವರೇ ಶೇರ್ ಮಾಡಿದ ಫೋಟೋ ಒಂದು ಸಾಕ್ಷಿ ಆಗಿದೆ. ಇದೆ ಫೆಬ್ರವರಿ ಅಲ್ಲಿ ರಿಲೀಸ್ ಆಗುತ್ತದೆ ಅನ್ನುವುದನ್ನು ಅವರೇ ಕನ್ಫರ್ಮ್ ಮಾಡಿದ್ದಾರೆ. ಅದಕ್ಕಾಗಿಯೇ ಟೀಸರ್ ಗೆ ಬೇಕಾದ ಕೆಲಸಗಳು ಒಂದೊಂದಾಗಿ ನಡೆಯುತ್ತಿದೆ. ಅಭಿಮಾನಿಗಳು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಡೈಲಾಗ್ ಗಳು ಇರಬೇಕು,
ಅನೇಕ ರೀತಿಯ ಆಕ್ಷನ್ ಎಪಿಸೋಡ್ಗಳು ಇರಬೇಕು ಎಂದು ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಎ ಪಿ ಅರ್ಜುನ್ ಡೈರೆಕ್ಷನ್ ಅಲ್ಲಿ ಈ ಚಿತ್ರ ಸಿಕ್ಕಾಪಟ್ಟೆ ಮಾಸ್ ಫೀಲ್ ಕೊಡಲಿದೆ ಅನ್ನೋ ಮಾತು ಕೂಡ ಸಿನಿಮಾ ರಂಗದಲ್ಲಿ ಕೇಳಿ ಬರುತ್ತಿದೆ. ಈಗಾಗಲೇ ಐವತ್ತೇಳು ದಿನಗಳ ಕಾಲ ಕ್ಲೈಮಾಕ್ಸ್ ದೃಶ್ಯಗಳನ್ನು ಶೂ*ಟ್ ಮಾಡಲಾಗಿದೆ.
ಅದಲ್ಲದೆ ಕಾಶ್ಮೀರ ಸೇರಿದಂತೆ ಹಲವೆಡೆ ಶೂ*ಟಿಂಗ್ ಮಾಡಲಾಗಿದೆ ಹೀಗಾಗಿ ನಿರೀಕ್ಷೆಗಳು ಅಂದುಕೊಂಡಿದಕ್ಕಿಂತ ಹೆಚ್ಚಾಗಿಯೇ ಇದೆ. ಇನ್ನು ಧ್ರುವ ಸರ್ಜಾ ಅವರ ಸಿನಿಮಾ ಎಂದರೆ ಅದರಲ್ಲಿ ಆಕ್ಷನ್ ಸೀನ್ ಇರುವುದು ಸರ್ವೇ ಸಾಮಾನ್ಯ ಆದರೆ, ಮಾರ್ಟಿನ್ ಸಿನಿಮಾದಲ್ಲಿ ಅಭಿಮಾನಿಗಳು ಮೆಚ್ಚುವಂತಹ ಆಕ್ಷನ್ ಸೀನ್ ಗಳು ಇದೆ ಎನ್ನಲಾಗುತ್ತಿದೆ.
ಇನ್ನು ಈ ಸಿನಿಮಾಗಾಗಿ ಅಭಿಮಾನಿಗಳು ಬಹಳ ಕಾತುರದಿಂದ ಕಾಯುತ್ತಿದ್ದು, ಇದೀಗ ಅಭಿಮಾನಿಗಳಿಗೆ ಸ್ವತಃ ಧ್ರುವ ಸರ್ಜಾ ಹೊಸ ಅಪ್ಡೇಟ್ ನೀಡಿ ಸಂತೋಷ ಹಂಚಿದ್ದಾರೆ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…