ಯಶ್ ಇಂಡಿಯಾ ಬಾಕ್ಸ್ ಆಫೀಸ್​ ಹೊಡೆದ್ರು, ನಾವು ವರ್ಲ್ಡ್​​ನ ಹೊಡಿತೀವಿ’; ‘ವಿಕ್ರಾಂತ್ ರೋಣ’ ಬಗ್ಗೆ ಉಪೇಂದ್ರ ಮಾತು ನೋಡಿ

ಸಿನಿಮಾ ಸುದ್ದಿ

ಯಶ್ ಇಂಡಿಯಾ ಬಾಕ್ಸ್ ಆಫೀಸ್​ ಹೊಡೆದ್ರು, ನಾವು ವರ್ಲ್ಡ್​​ನ ಹೊಡಿತೀವಿ’; ‘ವಿಕ್ರಾಂತ್ ರೋಣ’ ಬಗ್ಗೆ ಉಪೇಂದ್ರ ಮಾತು

ಕೆಜಿಎಫ್ 2’ ಸಿನಿಮಾ ಮಾಡಿದ ಮೋಡಿ ತುಂಬಾ ದೊಡ್ಡದು. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ದೊಡ್ಡ ಕಲೆಕ್ಷನ್ ಮಾಡಿದೆ. ಈ ಚಿತ್ರವನ್ನು ‘ವಿಕ್ರಾಂತ್ ರೋಣ’ ಸಿನಿಮಾ ಮೀರಿಸಲಿದೆ ಎಂಬರ್ಥದಲ್ಲಿ ಮಾತನಾಡಿದ್ದಾರೆ ಉಪೇಂದ್ರ. ವಿಕ್ರಾಂತ್ ರೋಣ ಜುಲೈ 28ರಂದು ತೆರೆಗೆ ಬಂದಿದೆ. ವಿಶ್ವಾದ್ಯಂತ ನಾನಾ ಭಾಷೆಗಳಲ್ಲಿ ಈ ಚಿತ್ರ ರಿಲೀಸ್ ಆಗುತ್ತಿದೆ.

ರಿಲೀಸ್​ಗೂ ಮೊದಲು ಬೆಂಗಳೂರಿನಲ್ಲಿ ಅದ್ದೂರಿಯಾಗಿ ಪ್ರೀ-ರಿಲೀಸ್ ಇವೆಂಟ್ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಉಪೇಂದ್ರ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದರು. ಅವರು ಸುದೀಪ್ ಆ್ಯಂಡ್ ಟೀಂಗೆ ಶುಭಾಶಯ ಕೋರಿದ್ದಾರೆ. ಈ ಸಿನಿಮಾ ವಿಶ್ವ ಬಾಕ್ಸ್ ಆಫೀಸ್ ಆಳಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಹಲವು ವರ್ಷಗಳ ಹಿಂದೆ ಸುದೀಪ್ ಸಿಕ್ಕಿದ್ದರು.

ಡೈರೆಕ್ಟರ್ ಆಗಬೇಕು ಅಂತ ಬಂದಿದ್ರು. ಡೈರೆಕ್ಟರ್ ಯಾಕೆ ಆಗ್ತೀರಾ? ಇಷ್ಟು ಎತ್ತರ ಇದ್ದೀರ, ಹೀರೋ ಆಗಿ ಅಂತ ಹೇಳಿದೆ. ಅವರು ಹೀರೋ ಆಗಿ, ನಂತರ ಸೂಪರ್ ಸ್ಟಾರ್ ಆದರು. ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ’ ಎಂದು ಕಿಚ್ಚನ ಬಗ್ಗೆಯ ಮೆಚ್ಚುಗೆ ಮಾತುಗಳನ್ನು ಆಡಿದರು ಉಪೇಂದ್ರ.

ಕೆಜಿಎಫ್ 2’ ಸಿನಿಮಾ ಮಾಡಿದ ಮೋಡಿ ತುಂಬಾ ದೊಡ್ಡದು. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ದೊಡ್ಡ ಕಲೆಕ್ಷನ್ ಮಾಡಿದೆ. ಈ ಚಿತ್ರವನ್ನು ‘ವಿಕ್ರಾಂತ್ ರೋಣ’ ಸಿನಿಮಾ ಮೀರಿಸಲಿದೆ ಎಂಬರ್ಥದಲ್ಲಿ ಮಾತನಾಡಿದ್ದಾರೆ ಉಪೇಂದ್ರ. ‘ಇದು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ, ಪ್ಯಾನ್ ವರ್ಲ್ಡ್​ ಸಿನಿಮಾ. ಕನ್ನಡಿಗರು ಯಾರಿಗೂ ಕಡಿಮೆ ಇಲ್ಲ ಎಂದು ಯಶ್ ಇಂಡಿಯಾದ ಬಾಕ್ಸ್ ಆಫೀಸ್​ ಹೊಡೆದರು.

ನಾವು ವಿಶ್ವನ (ವರ್ಲ್ಡ್​ ಬಾಕ್ಸ್ ಆಫೀಸ್​) ಹೊಡಿತೀವಿ’ ಎಂದರು ಉಪೇಂದ್ರ. ಕಾರ್ಯಕ್ರಮದಲ್ಲಿ ಮಾತನಾಡಿದ ಕಿಚ್ಚ ಸುದೀಪ್​ ಅಭಿಮಾನಿಗಳ ಸೌಂಡ್​ಗೆ ಇದು ಸೌಂಡ್​ ಅಂದ್ರೆ ಎಂದು ನೆರೆದವರಿಗೆ ಉತ್ತೇಜಿಸಿದರು. ಇದಾದ ಬಳಿಕ ಸಿನಿಮಾದ ಕುರಿತು ಮಾತನಾಡಿದ ಅವರು, ‘ಈ ಸಿನಿಮಾ ನನ್ನೋಬ್ಬನ ಕನಸಲ್ಲ. ಸಾಕಷ್ಟು ಜನ ಕೆಲಸ ಮಾಡಿದ್ದಾರೆ.

ಇದು ಎಲ್ಲರ ಕನಸು. ಅಲ್ಲದೇ ವಿಕ್ರಾಂತ್ ರೋಣ ಹಾಗೂ ನನಗೆ ಯಾವುದೇ ವ್ಯತ್ಯಾಸ ಇಲ್ಲ ಅವನೇ ನಾನು ನಾನೇ ಅವನು‘ ಎಂದು ಹೇಳಿದ್ದಾರೆ. ವೇದಿಕೆ ಮೇಲೆ ‘ವಿಕ್ರಾಂತ್ ರೋಣ’ ಚಿತ್ರಕ್ಕೆ ವಿಶೇಷ ಅರ್ಥ ನೀಡಿದರು ಉಪೇಂದ್ರ. ‘ಇದು ವಿಕ್ರಾಂತ್ ರೋಣ ಅಲ್ಲ, ವಿಕ್ಟರಿ ರೋಣ. ಬೇಗ ಪಾರ್ಟಿ ಕೊಡಿ’ ಎಂದು ನಿರ್ಮಾಪಕ ಜಾಕ್ ಮಂಜು ಬಳಿ ಹೇಳಿದರು ಉಪೇಂದ್ರ.

ಈ ಮೂಲಕ ಚಿತ್ರಕ್ಕೆ ಗೆಲುವು ಪಕ್ಕಾ ಎಂದರು. ಬೆಂಗಳೂರಿನ ಲುಲು ಮಾಲ್​ನಲ್ಲಿ ಪ್ರೀ-ರಿಲೀಸ್ ಕಾರ್ಯಕ್ರಮ ನಡೆದಿದೆ. ಈ ಇವೆಂಟ್​ಗೆ ಫ್ಯಾನ್ಸ್ ಕಿಕ್ಕಿರಿದು ನೆರೆದಿದ್ದರು. ಈ ಬಗ್ಗೆ ಉಪೇಂದ್ರ ಮಾತನಾಡಿ, ‘ಎಲ್ಲ ಕಾರ್ಯಕ್ರಮಕ್ಕೂ ಈ ಕಳೆ ಬರಲ್ಲ’ ಎಂದು ಸಂತಸ ಹೊರಹಾಕಿದರು. ಈ ಕೆಳಗೆ ವಿಡಿಯೋ ನೋಡಿ ಲೈಕ ಕೊಟ್ಟು ಶೇರ್ ಮಾಡಿ.

 

 

Leave a Reply

Your email address will not be published. Required fields are marked *