ಸ್ಯಾಂಡಲ್‌ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆ ವಿಕ್ರಾಂತ್ ರೋಣ ಸಿನಿಮಾ ಇಂದು ಜಗತ್ತಿನಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಅನೂಪ್ ಭಂಡಾರಿ ನಿರ್ದೇಶ, ಜಾಕ್ ಮಂಜು ನಿರ್ಮಾಣವನ್ನು ಟೀಸರ್ ಮತ್ತು ಟ್ರೈಲರ್ ನೋಡಿಯೇ ವೀಕ್ಷಕರು ಮೆಚ್ಚಿಕೊಂಡಿದ್ದಾರೆ.
ಗುಮ್ಮಾ ಬಂತು ಗುಮ್ಮಾ ಅಂತ ಹೇಳುವ ಮೂಲಕ ಸ್ಕ್ರೀನ್ ಮೇಲೆ ಎಂಟ್ರಿ ಆಗುವ ಸುದೀಪ್‌ರನ್ನು ನೋಡಿ ವೀಕ್ಷಕರು ಸಿಳ್ಳೆ ಹೊಡೆದು ಕುಣಿದಿದ್ದಾರೆ. ಈ ನಡುವೆ ಚಿತ್ರ ವೀಕ್ಷಿಸಿದ ವಯಸಾದ ಅಭಿಮಾನಿಯೊಬ್ಬರು ಚಿತ್ರ ಕುರಿತು ಪ್ರಶಂಸೆ ವ್ಯಕ್ತಪಡಿಸಿದ್ದಾರ. ಆಗ ಅಪ್ಪು ನೆನೆದು ಅವರು ಬಿಕ್ಕಿ ಅತ್ತಿರುವ ಘಟನೆ ನಡೆದಿದೆ.
ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಅವರು ಪುನೀತ್ ಕುರಿತು ಮಾತನಾಡುತ್ತಾ ಭಾವುಕರಾಗಿ ಅತ್ತಿದ್ದಾರೆ.ಹೀಗೆ ಕಾಲ ಉರುಳುತ್ತಿದ್ದರೂ ಅಪ್ಪು ಅವರನ್ನ ಕಳೆದುಕೊಂಡ ಅವರ ಅಭಿಮಾನಿ ಬಳಗದ ನೋವು ಕರಗಿಲ್ಲ. ಇಂದಿಗೂ ಅಪ್ಪು ಫ್ಯಾನ್ಸ್ ತಮ್ಮ ನೆಚ್ಚಿನ ನಟನ ನೆನಪಲ್ಲೇ ಕೊರಗುತ್ತಿದ್ದಾರೆ.
ಪುನೀತ್ ಸಾವಿನ ನೋವಿನಿಂದ ಇಡೀ ಕರ್ನಾಟಕದ ಜನತೆ ಇನ್ನೂ ಹೊರಬಂದಿಲ್ಲ. ಹೀಗೆ ಅಭಿಮಾನಿಯೊಬ್ಬರು ಅಪ್ಪು ನೆನೆದು ದುಃಖಿಸಿದ್ದಾರೆ. ಇನ್ನು ಚಿತ್ರದ ಬಗ್ಗೆ ಹೇಳುವುದಾದರೆ ಕಿಚ್ಚ ಸುದೀಪ್ ವೃತ್ತಿ ಬದುಕಿನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ‘ವಿಕ್ರಾಂತ್ ರೋಣ’ ವಿಶ್ವದಾದ್ಯಂತ ರಿಲೀಸ್ ಆಗಿದೆ.
ಸಿನಿಪ್ರಿಯರ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ. ಸಿನಿಮಾ ಫಸ್ಟ್ ಹಾಫ್ ಮುಗಿಸಿ ಪ್ರೇಕ್ಷಕರು ಚಿತ್ರಮಂದಿರದಿಂದ ಹೊರಬಂದಿದ್ದಾರೆ. ಸ್ಯಾಂಡಲ್‌ವುಡ್‌ನ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಹೇಗಿರಬಹುದು? ‘ವಿಕ್ರಾಂತ್ ರೋಣ’ದಲ್ಲಿ ಕಿಚ್ಚನ ಪಾತ್ರವೇನು? ‘ವಿಕ್ರಾಂತ್’ ರೋಣ 3ಡಿಯಲ್ಲಿ ಹೇಗಿರಬಹುದು? ಸಿನಿಮಾ ಕಥೆಯೇನು?
ಹೀಗೆ ಬಿಡುಗಡೆಗೂ ಮುನ್ನ ಹುಟ್ಟಿಕೊಂಡಿದ್ದ ನೂರಾರು ಪ್ರಶ್ನೆಗಳಿಗೆ ‘ವಿಕ್ರಾಂತ್ ರೋಣ’ ಕೊನೆಗೂ ಕೊಟ್ಟಿದೆ. ವಿಕ್ರಾಂತ್ ರೋಣ’ ಸಿನಿಮಾ ನೋಡಿದವರಿಗೆ ಇದೊಂದು ಥ್ರಿಲ್ಲರ್, ಸಸ್ಪೆನ್ಸ್ ಸಿನಿಮಾ ಅನ್ನೋದು ಗೊತ್ತಾಗಿತ್ತು. ಆ ನಿರೀಕ್ಷೆಯನ್ನಿಟ್ಟುಕೊಂಡು ಥಿಯೇಟರ್‌ಗೆ ಎಂಟ್ರಿ ಕೊಟ್ಟವರಿಗೆ ‘ವಿಕ್ರಾಂತ್ ರೋಣ’ ಥ್ರಿಲ್ ಕೊಡುತ್ತಿದೆ.
ಒಂದು ಸುಂದರ ಊರು. ಅಲ್ಲಿ ನಡೆಯುತ್ತಿರುವ ಸರಣಿ ಕೊಲೆಗಳ ರಾಶಿಯನ್ನು ಭೇದಿಸಲು ವಿಕ್ರಾಂತ್ ರೋಣ ತನಿಖೆ ಆರಂಭಿಸುತ್ತಾನೆ. ಈ ವೇಳೆ ಸರಣಿ ಕೊಲೆಗಳು ಹಲವರ ಮೇಲೆ ಅನುಮಾನ ಮೂಡಿಸುವಂತೆ ಮಾಡಿವೆ. ಇದೂವರೆಗೂ ಬರುವ ಹಲವು ಪಾತ್ರಗಳ ಮೇಲೆ ಅನುಮಾನ ಮೂಡುವಂತೆ ಮಾಡುತ್ತೆ.
ನಿರ್ದೇಶಕ ಅನುಪ್ ಭಂಡಾರಿ ಹೆಣೆದಿರೋ ಸಸ್ಪೆನ್ಸ್ ಸ್ಟೋರಿ ಕಿಕ್ ಕೊಡೋದು ಗ್ಯಾರಂಟಿ. ಮೊದಲಾರ್ಧ ಕಿಚ್ಚ ಸುದೀಪ್ ಬಿಲ್ಡಪ್‌ನಿಂದ ಶುರುವಾಗಿ ಕಥೆಗೆಯೊಳಗೆ ಇಳಿದು ಪ್ರೇಕ್ಷಕರನ್ನು ಹಿಡಿದಿಡುತ್ತೆ. ಈ ವೇಳೆಗಾಗಲೇ ಹಲವು ಪಾತ್ರಗಳ ಪರಿಚಯನೂ ಆಗುತ್ತೆ. ಇನ್ನೇನು ಇಂಟರ್‌ವಲ್ ಬರುತ್ತಿದೆ ಎನ್ನುವಾಗಲೇ ತಲೆ ತಿರುಗಿ ಹೋಗುವಂತಹ ಟ್ವಿಸ್ಟ್ ಅನ್ನು ಇಟ್ಟಿದ್ದಾರೆ ನಿರ್ದೇಶಕರು.
ಹೀಗಾಗಿ ಪ್ರೇಕ್ಷಕರು ದ್ವೀಯಾರ್ಧವನ್ನು ತಲೆಕೆಡಿಸಿಕೊಂಡು ವೀಕ್ಷಿಸಲೇಬೇಕಾದ ಅನುವಾರ್ಯತೆ ಇದೆ. ವಿಕ್ರಾಂತ್ ರೋಣ’ ಸಿನಿಮಾದಲ್ಲಿ ಹೆದರಿ ಕಣ್ಮುಚ್ಚುವಂತೆ ಮಾಡುವ ಕೆಲವು ದೃಶ್ಯಗಳು ಇವೆ. ಸಿನಿಮಾದ ಬಹುತೇಕ ದೃಶ್ಯಗಳು ಕತ್ತಲಲ್ಲೇ ನಡೆಯುತ್ತಿವೆ.
ಹೀಗಾಗಿ ಥ್ರಿಲ್ಲರ್ ಸಿನಿಮಾವನ್ನುಇಷ್ಟಪಡುವವರಿಗೆ ‘ವಿಕ್ರಾಂತ್ ರೋಣ’ ಫಸ್ಟ್ ಹಾಫ್ ರೋಚಕ ಅನಿಸುವುದರಲ್ಲಿ ಅನುಮಾನವಿಲ್ಲ. ಅಸಲಿಗೆ ಇಂಟರ್‌ವಲ್ ವೇಳೆಗೆ ಇಷ್ಟೆಲ್ಲಾ ಕೊಲೆಗಳಿಗೆ ಕಾರಣ ಯಾರು? ಯಾರೋ ನಿಗೂಢ ವ್ಯಕ್ತಿನಾ, ದೆವ್ವವಾ? ಅಥವಾ ಸ್ವತಃ ವಿಕ್ರಾಂತ್ ರೋಣನಾ? ಅನ್ನೋದು ಮಧ್ಯಂತರದ ಬಳಿಕ ತಿಳಿಯಲಿದೆ.
ಲೈಕ ಕೊಟ್ಟು ಶೇರ್ ಮಾಡಿ.