ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ ವಿಕ್ರಾಂತ್ ರೋಣ ಸಿನಿಮಾ ವಿಶ್ವದಾದ್ಯಂತ ಬಿಡುಗಡೆ ಆಗಿದೆ. ದುಬೈನಲ್ಲಿ ಚಿತ್ರ ಪ್ರದರ್ಶನ ಆಗಿರುವುದರಿಂದ ಅಲ್ಲಿಂದ ಮೊದಲ ವಿಮರ್ಶೆ ಸಹ ಹೊರಬಿದ್ದಿದೆ. ಇದೆಲ್ಲದರ ನಡುವೆ, ಚಿತ್ರರಂಗದ ಹಿರಿಯರು ಮತ್ತು ಆಪ್ತ ಸ್ನೇಹಿತರಿಂದಲೂ ಶುಭಾಶಯಗಳ ಸುರಿಮಳೆ ಸುದೀಪ್ ಹೃದಯ ತಲುಪಿವೆ. ಟ್ವಿಟರ್ ಮೂಲಕ ವೈಯಕ್ತಿಕ ಸಂದೇಶಗಳ ಮೂಲಕ ಶುಭ ಕೋರುತ್ತಿದ್ದಾರೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ವಿಕ್ರಾಂತ್ ರೋಣ’. ಅನೂಪ್ ಭಂಡಾರಿ ನಿರ್ದೇಶನದ ‘ವಿಕ್ರಾಂತ್ ರೋಣ’ ಸಿನಿಮಾ ಇಂದು ವಿಶ್ವದಾದ್ಯಂತ ರಿಲೀಸ್ ಆಗಿದೆ. 3ಡಿಯಲ್ಲಿ ‘ವಿಕ್ರಾಂತ್ ರೋಣ’ ಸಿನಿಮಾ ಹಿಂದಿ, ಕನ್ನಡ, ತೆಲುಗು, ತಮಿಳು, ಇಂಗ್ಲೀಷ್ ಹಾಗೂ ಮಲಯಾಳಂ ಭಾಷೆಗಳಲ್ಲಿ ತೆರೆಗೆ ಬಂದಿದೆ.
ಹೊಸ ಅವತಾರದಲ್ಲಿ ತೆರೆಮೇಲೆ ಪ್ರತ್ಯಕ್ಷವಾಗಿರುವ ಕಿಚ್ಚ ಸುದೀಪ್ ಅವರಿಗೆ ತಾರೆಯರು ಶುಭಾಶಯಗಳನ್ನು ತಿಳಿಸಿದ್ದಾರೆ. ಇನ್ನು ನಟಿ ರಮ್ಯಾ ತಮ್ಮ ಟ್ವಿಟ್ಟರ್ ಮೂಲಕ ಶುಭಾಶಯ ಕೋರಿದ್ದಾರೆ. ವಿಕ್ರಾಂತ್ ರೋಣ’ ಚಿತ್ರ ವೀಕ್ಷಿಸಲು ಯಾರೆಲ್ಲಾ ಎಕ್ಸೈಟ್ ಆಗಿದ್ದೀರಾ? ತುಂಬಾ ದಿನಗಳ ಬಳಿಕ ನಿಮ್ಮ ದೊಡ್ಡ ಪರದೆಯಲ್ಲಿ ನೋಡಲು ಕಾಯುತ್ತಿದ್ದೇನೆ’’ – ರಮ್ಯಾ. ಹೀಗೆ ಚಿತ್ರ ನೋಡಲು ಯಾರೆಲ್ಲ ಕಾಯ್ತಿದೀರ, ನಾನಂತೂ ತುಂಬಾ ದಿನಗಳ ನಂತರ ಸುದೀಪ್ ಅವರನ್ನು ನೋಡಲು ಕಾಯುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಇದೀಗ ಭಾರತೀಯ ಸಿನಿಮಾ ಇಂಡಸ್ಟ್ರಿ ಕಂಡ ಖ್ಯಾತ ನಿರ್ದೇಶಕ ರಾಜಮೌಳಿ ಸಹ ಕಿಚ್ಚನಿಗೆ ವಿಶ್ ಮಾಡಿದ್ದಾರೆ
ಪ್ರಯೋಗ ಮತ್ತು ಸವಾಲುಗಳನ್ನು ತೆಗೆದುಕೊಳ್ಳುವುದರಲ್ಲಿ ಸುದೀಪ್ ಯಾವಾಗಲೂ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ವಿಕ್ರಾಂತ್ ರೋಣದಲ್ಲಿ ಅವರೇನು ಮಾಡಿದ್ದಾರೆ ಎಂಬುದನ್ನು ನೋಡಲು ಕಾತರನಾಗಿದ್ದೇನೆ.
ಚಿತ್ರದ ದೃಶ್ಯಗಳು ಗ್ರ್ಯಾಂಡ್ ಆಗಿ ಮೂಡಿಬಂದಿವೆ. ಕಿಚ್ಚ ಸುದೀಪ್‌ಗೆ ಮತ್ತು ಚಿತ್ರಕ್ಕೆ ನನ್ನ ಶುಭಾಶಯಗಳು” ಎಂದು ಬರೆದುಕೊಂಡಿದ್ದಾರೆ. ವಿಕ್ರಾಂತ್ ರೋಣ’ ಚಿತ್ರಕ್ಕೆ ಅನೂಪ್ ಭಂಡಾರಿ ಅವರು ನಿರ್ದೇಶನ ಮಾಡಿದ್ದಾರೆ. ನಿರೂಪ್ ಭಂಡಾರಿ, ನೀತಾ ಅಶೋಕ್, ಜಾಕ್ವೆಲಿನ್ ಫರ್ನಾಂಡಿಸ್ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ನಿರ್ಮಾಪಕ ಜಾಕ್ ಮಂಜು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಕೆಳಗೆ ಕಾಣುವ ಲೈಕ ಬಟನ ಒತ್ತಿ.