ಬಿಗ್ ಬಾಸ್ ರಿಯಾಲಿಟಿ ಶೋನಿಂದ ಗಮನ ಸೆಳೆದು ಅಪಾರ ಅಭಿಮಾನಿಗಳ ಮನಗೆದ್ದಿರುವ ನಿವೇದಿತಾ ಗೌಡ ಸದ್ಯ ವೈಯಕ್ತಿಕ ಜೀವನ, ನಟನೆ ಅಂತಾ ಫುಲ್ ಬ್ಯುಸಿಯಾಗಿದ್ದಾರೆ. ಈಗ ತಮ್ಮ ಅಭಿಮಾನಿಗಳಿಗೆ ನಿವೇದಿತಾ, ಗುಡ್ ನ್ಯೂಸ್ ಕೊಟ್ಟಿದ್ದಾರೆ.
ರಿಯಾಲಿಟಿ ಶೋ ಕಾರ್ಯಕ್ರಮದ ಮೂಲಕ ಪರಿಚಿತವಾದ ನಟಿ ನಿವೇದಿತಾ ಗೌಡ ಮೊದಲಿನಿಂದಲೂ ಕೂಡ ಕಿರುತೆರೆಯಲ್ಲಿ ಸಕ್ರಿಯವಾಗಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಕೂಡ ನಿವೇದಿತಾ ಗೌಡ ಹೆಚ್ಚು ಸಕ್ರಿಯವಾಗಿ ಇರುವುದರ ಜೊತೆಗೆ, ಆದರೆ ಈಗ ನಿವೇದಿತಾ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುವ ಸಮಯ ಬಂದಾಯ್ತು.
ಕನ್ನಡ ಕಿರುತೆರೆಯ ದೊಡ್ಮನೆ ಶೋ ಮೂಲಕ ಸಿಕ್ಕಾಪಟ್ಟೆ ನೇಮು ಫೇಮು ಗಿಟ್ಟಿಸಿಕೊಂಡಿರುವ ನಿವಿ, ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಸೋಷಿಯಲ್ ಮೀಡಿಯಾದಲ್ಲಿ ಮಿಲಿಯನ್‌ಗಟ್ಟಲೇ ಫಾಲೋವರ್ಸ್ ಇದ್ರೂ, ಇದುವರೆಗೂ ಯಾವುದೇ ಸಿನಿಮಾದಲ್ಲಿ ನಿವೇದಿತಾ ಕಾಣಿಸಿಕೊಂಡಿರಲಿಲ್ಲ. ಈಗ ಬೆಳ್ಳಿಪರದೆಯಲ್ಲಿ ಮಿಂಚಲು ಚಂದನದ ಗೊಂಬೆ ನಿವಿ ಸಜ್ಜಾಗಿದ್ದಾರೆ.
ನಿವೇದಿತಾ ಗೌಡ ಮಿಸೆಸ್ ಇಂಡಿಯಾ ಸ್ಪರ್ಧೆಗೆ ಎಂಟ್ರಿ ಕೊಟ್ಟಾಗಿನಿಂದ, ಸಾಕಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹಾಗಾಗಿ ನಿವೇದಿತಾ ಗೌಡ ಈ ಸ್ಪರ್ಧೆಯಲ್ಲಿ ವಿಜೇತರಾಗಲಿ ಎಂದು ಅಭಿಮಾನಿಗಳು ಶುಭಕೋರುತ್ತಿದ್ದರು. ಅಂತೆಯೇ ನಿವೇದಿತಾ ಗೌಡ ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ.
ಇತ್ತೀಚೆಗಷ್ಟೇ ನಿವೇದಿತಾ ಮಿಸೆಸ್ ಇಂಡಿಯಾ ಪಟ್ಟ ಮುಡಿಗೇರಿಸಿಕೊಂಡ ನಂತರ ಸಾಲು ಸಾಲು ಸಿನಿಮಾ ಅವಕಾಶಗಳು ಹರಿದು ಬರುತ್ತಿದೆ. ಕನ್ನಡ ಸೇರಿದಂತೆ ತೆಲುಗು ಮತ್ತು ತಮಿಳಿನಲ್ಲಿ ಸಿನಿಮಾ ಆಫರ್ಸ್ ಅರಿಸಿ ಬಂದಿದೆ. ಈಗಾಗಲೇ ಕಥೆ ಕೇಳಿ, ಥ್ರಿಲ್ ಆಗಿರುವ ನಿವೇದಿತಾ ಕಂಟೆಂಟ್ ಕೇಳಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ
ಪವರ್‌ಫುಲ್ ಪಾತ್ರದಲ್ಲಿ ಟಾಲಿವುಡ್ ಸಿನಿಮಾರಂಗದಲ್ಲಿ ರಂಜಿಸಲು ಸಜ್ಜಾಗಿದ್ದಾರೆ. ತಮ್ಮ ಮೊದಲ ಸಿನಿಮಾದಲ್ಲಿಯೇ ಭಿನ್ನ ಪಾತ್ರದ ಮೂಲಕ ಗಮನ ಸೆಳೆಯಲು ರೆಡಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಹೊಸ ಸಿನಿಮಾದ ಬಗ್ಗೆ ನಟಿ ನಿವೇದಿತಾ ಅವರೇ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.
ಕೆಳಗೆ ಕಾಣುವ ಲೈಕ ಬಟನ್ ಒತ್ತಿ.