ತೆಲುಗಿನಲ್ಲಿ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿರುವ ನಟ ಎಂದರೆ ವಿಜಯ್ ದೇವರಕೊಂಡ. ಯಾವುದೇ ಹಿನ್ನಲೆ ಇಲ್ಲದೆ ಟಾಲಿವುಡ್ಗೆ ಎಂಟ್ರಿ ಕೊಡುವುದರೊಂದಿಗೆ ಮಾಡಿದ ಸಿನಿಮಾಗಳೆಲ್ಲ ಹಿಟ್ ಆಗಿರುವುದು ನಿಜಕ್ಕೂ ದೇವರಕೊಂಡ ಅವರ ಪರಿಶ್ರಮಕ್ಕೆ ಸಿಕ್ಕ ಫಲ ಎನ್ನಬಹುದು.
ವಿಜಯ್ ದೇವರಕೊಂಡ ಅವರಿಗೆ ದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ. ‘ಅರ್ಜುನ್ ರೆಡ್ಡಿ’, ‘ಗೀತ ಗೋವಿಂದಂ’ ಮುಂತಾದ ಸಿನಿಮಾಗಳ ಮೂಲಕ ಅವರು ಜನಪ್ರಿಯತೆ ಪಡೆದಿದ್ದಾರೆ. ಅನೇಕ ಯುವತಿಯರಿಗೆ ವಿಜಯ್ ದೇವರಕೊಂಡ ಎಂದರೆ ಪಂಚಪ್ರಾಣ.
ವಿಜಯ್ ದೇವರಕೊಂಡ ‘ಕಾಫಿ ವಿತ್ ಕರಣ್’ ಶೋಗೆ ಎಂಟ್ರಿ ನೀಡಿದ್ದಾರೆ. ಕರಣ್ ಜೋಹರ್ ಅವರ ಈ ಶೋಗೆ ವಿಜಯ್ ದೇವರಕೊಂಡ ಯಾವಾಗ ಬರಲಿದ್ದಾರೆ ಎಂಬ ಪ್ರಶ್ನೆ ಹಲವು ದಿನಗಳಿಂದ ಕೇಳಿಬರುತ್ತಲೇ ಇತ್ತು. ಇದೀಗ ಅದಕ್ಕೆ ಉತ್ತರ ಸಿಕ್ಕಿದೆ. ‘ಕಾಫಿ ವಿತ್ ಕರಣ್’ ಸೀಸನ್ 7ರ ನಾಲ್ಕನೇ ಸಂಚಿಕೆಯಲ್ಲಿ ವಿಜಯ್ ದೇವರಕೊಂಡ ಮತ್ತು ನಟಿ ಅನನ್ಯಾ ಪಾಂಡೆ ಅತಿಥಿಯಾಗಿ ಆಗಮಿಸಿದ್ದಾರೆ.
ಅವರ ಎಪಿಸೋಡ್‌ನ ಪ್ರೋಮೋ ಕೂಡ ರಿಲೀಸ್ ಆಗಿದ್ದು, ಸಖತ್ ಬೋಲ್ಡ್ ಪ್ರಶ್ನೆಗಳನ್ನು ಸಂಚಲನ ಉಂಟು ಮಾಡಿದ್ದಾರೆ ಕರಣ್ ಜೋಹರ್! ನೇರ ಪ್ರಶ್ನೆಗಳಿಂದಲೇ ‘ಕಾಫಿ ವಿತ್ ಕರಣ್’ ಶೋ ಫೇಮಸ್ ಆಗಿದೆ. ಸೆಲೆಬ್ರಿಟಿಗಳ ಖಾಸಗಿ ಬದುಕಿನ ಬಗ್ಗೆ ಕರಣ್ ಜೋಹರ್ ಅವರು ಪ್ರಶ್ನೆ ಕೇಳುತ್ತಾರೆ.
ಅವುಗಳಿಗೆ ಉತ್ತರಿಸಲು ನಟ-ನಟಿಯರು ಕೆಲವೊಮ್ಮೆ ಹಿಂದೇಟು ಹಾಕುತ್ತಾರೆ. ಇನ್ನೂ ಕೆಲವರು ತುಂಬ ಜಾಣತನದಿಂದ ಉತ್ತರಿಸಿ ಗಮನ ಸೆಳೆಯುತ್ತಾರೆ. ಈಗ ಕರಣ್ ಜೋಹರ್ ಕೇಳಿದ ಅನೇಕ ಡೈರೆಕ್ಟ್ ಪ್ರಶ್ನೆಗಳಿಗೆ ವಿಜಯ್ ದೇವರಕೊಂಡ ಅವರು ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ್ದಾರೆ.
ವಿಜಯ್ ದೇವರಕೊಂಡ ಇತ್ತೀಚೆಗೆ ಕಾಫಿ ವಿತ್ ಕರಣ್ ಶೋನಲ್ಲಿ ಭಾಗವಹಿಸಿದ್ದರು. ಇದರಲ್ಲಿ ಕರಣ್ ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಮುಕ್ತವಾಗಿ ಉತ್ತರಿಸಿದ್ದಾರೆ. ಪಬ್ಲಿಕ್ ಸೆಕ್ಸ್ ಬಗ್ಗೆ ಕೇಳಿದಾಗ, ಕಾರಿನಲ್ಲಿ ಎಂದು ನೇರವಾಗಿ ಹೇಳಿದ ರೌಡಿ ಸ್ಟಾರ್, ತಮ್ಮ ಪ್ರೇಮ ಪ್ರಕರಣದ ಬಗ್ಗೆ ಸಹ ಪ್ರತಿಕ್ರಿಯಿಸಿದ್ದಾರೆ.
ಇನ್ನು ಪ್ರೀತಿಯ ವಿಚಾರ ಕೇಳಿದಾಗ ಆ ರೀತಿ ಏನು ಇಲ್ಲ. ನಾನು ಮದುವೆಯಾದಾಗ ಹೇಳುತ್ತೇನೆ. ಈಗ ನನ್ನ ಇಷ್ಟಪಡುವ ಹುಡುಗಿಯರ ಹಾರ್ಟ್ ಬ್ರೇಕ್ ಮಾಡಲು ಇಷ್ಟವಿಲ್ಲ ಎಂದಿದ್ದಾರೆ. ವಿಜಯ್ ದೇವರಕೊಂಡ ಪ್ರಸ್ತುತ ಡ್ಯಾಶಿಂಗ್ ಡೈರೆಕ್ಟರ್ ಪೂರಿ ಜಗನ್ನಾಥ್ ಅವರ ನಿರ್ದೇಶನದಲ್ಲಿ ಲೈಗರ್ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.
ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಭಾಗವಹಿಸಿದ್ದ ಈ ಕಾಫಿ ವಿತ್ ಕರಣ್ ಶೋ ಪೂರ್ಣ ಸಂಚಿಕೆ ಜುಲೈ 28 ರಂದು ಸಂಜೆ 7 ರಿಂದ ಪ್ರಸಾರವಾಗಿದೆ. ಡಿಸ್ನಿ ಪ್ಲಸ್ ಹಾಟ್ ಸ್ಟಾರ್‌ನಲ್ಲಿ ಪ್ರಸಾರವಾಗಲಿರುವ ಈ ಸಂಚಿಕೆಗಾಗಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದರು.
ಕೆಳಗೆ ಕಾಣುವ ಲೈಕ್ ಬಟನ್ ಒತ್ತಿ.