ಪ್ರಿಯಾ ಸುದೀಪ್ ಕಣ್ಣೀರಿನ ಬಗ್ಗೆ ಕಿಚ್ಚ ಹೇಳಿದ್ದೇನು, ಈ ವಿಡಿಯೋ ನೋಡಿ

ಸಿನಿಮಾ ಸುದ್ದಿ

ಬೆಂಗಳೂರಿನ ಹೃದಯ ಭಾಗದಲ್ಲಿರುವ ಊರ್ವಶಿ ಥಿಯೇಟರ್‌ನಲ್ಲಿ ‘ವಿಕ್ರಾಂತ್‌ ರೋಣ’ ಚಿತ್ರದ ಫಸ್ಟ್‌ ಶೋ ನೋಡಿದ ಪ್ರಿಯಾ ಸುದೀಪ್‌, ‘ತಾವು ಅಭಿಮಾನಿಯಾಗಿ ಸಿನಿಮಾ ನೋಡಲು ಬಂದಿರುವೆ. ಜಗತ್ತಿನಾದ್ಯಂತ ‘ವಿಕ್ರಾಂತ್‌ ರೋಣ’ ಹೊಸ ಇತಿಹಾಸ ಸೃಷ್ಟಿಸೋದು ಪಕ್ಕಾ’ ಎಂದರು. ಇನ್ನೂ ಸಿನಿಮಾದ ಪ್ರತಿಯೊಂದು ದೃಶ್ಯವನ್ನೂ ಭಾವನಾತ್ಮಕವಾಗಿ ಕಣ್ತುಂಬಿಕೊಂಡರು ಪ್ರಿಯಾ ಸುದೀಪ್.‌

ಚಿತ್ರದ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರಿಯಾ ಸುದೀಪ್, ತುಂಬ ಚೆನ್ನಾಗಿ ಸಿನಿಮಾ ಮಾಡಿದ್ದಾರೆ. ನಾನು ಪ್ರತಿ ಸಿನಿಮಾವನ್ನ ಪ್ಯಾನ್ಸ್ ಜೊತೆಗೆ ನೋಡಿರೋದು.ಮೊದಲ ದಿನ, ಮೊದಲ ಶೋ ನೋಡ್ತಿನಿ. ಪ್ರತಿ ಸೀನ್ ತುಂಬಾ ಚೆನ್ನಾಗಿ ಬಂದಿದೆ. ಸುದೀಪ್ ಪ್ರತಿ ಸಿನಿಮಾದಲ್ಲೂ ನನ್ನ ಸರ್ಪ್ರೈಸ್ ಮಾಡಿದ್ದಾರೆ ಎಂದು ಗಂಡನ ಅಭಿನಯಕ್ಕೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.

ನಾನು ಅವರ ಪ್ರತಿ ಚಿತ್ರವನ್ನೂ ಫ್ಯಾನ್ಸ್ ಜೊತೆಗೆ ಫಸ್ಟ್ ಡೇ ಫಸ್ಟ್ ಶೋ ನೋಡ್ತೀನಿ. ಇವತ್ತು ತುಂಬಾ ಎಮೋಷನಲ್ ಆಗಿದ್ದೀನಿ. ತುಂಬಾನೇ ಚೆನ್ನಾಗಿ ಮಾಡಿದ್ದಾರೆ. ಪ್ರತಿಯೊಂದು ಸೀನ್‌, ಪ್ರತಿಯೊಂದು ಫ್ರೇಮ್ ನೋಡಿ ನನಗೆ ತುಂಬಾ ಖುಷಿ ಆಯ್ತು. ಮ್ಯೂಸಿಕ್ ಬ್ರಿಲ್ಲಿಯೆಂಟ್ ಆಗಿದೆ. ಛಾಯಾಗ್ರಹಣದ ಬಗ್ಗೆ ಹೇಳುವ ಹಾಗೇ ಇಲ್ಲ.. ಅಷ್ಟು ಚೆನ್ನಾಗಿದೆ ಎಂದಿದ್ದಾರೆ.

ಅಲ್ಲದೇ, ಅನೂಪ್ ಭಂಡಾರಿಗೆ ದೊಡ್ಡ ಥ್ಯಾಂಕ್ಸ್ ಹೇಳಬೇಕು. ಈ ಸಿನಿಮಾ ತುಂಬ ಡಿಫರೆಂಟ್ ಆಗಿದೆ. ಎಲ್ಲರೂ ನೋಡಬೇಕು. ನಾನು ಒಳಗಡೆ ಕಣ್ಣೀರು ಹಾಕಿದ್ದೀನಿ. ಹಾಗೆಯೇ ಅವರು ನೋಡೊಕೆ ತುಂಬ ಚೆನ್ನಾಗಿ ಕಾಣ್ತಾರೆ ಎಂದು ಸಿನಿಮಾವನ್ನು ಹಾಡಿ ಹೊಗಳಿದ್ದಾರೆ. ಹೀಗೆ ಚಿತ್ರದ ಕುರಿತು ಭಾವನಾತ್ಮಕ ಆಗಿ ಅತ್ತಿರುವ ಕುರಿತು ಸುದೀಪ್ ಪ್ರತಿಕ್ರಿಯಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಿಚ್ಚ ಸುದೀಪ್ ಚಿತ್ರ ಇಷ್ಟವಾಗಿರುವುದಕ್ಕೆ ಅವರು ಅತ್ತಿದ್ದಾರೆ. ನನ್ನ ಕುಟುಂಬದಲ್ಲಿ ಯಾರೂ ಕೂಡ ನಾನು ಸಿನಿಮಾ ಚೆನ್ನಾಗಿ ಮಾಡದಿದ್ದಾರು ಹೋಗಳುವವರು ಇಲ್ಲ. ಚಿತ್ರ ಚೆನಾಗಿಲ್ಲ ಎಂದರೆ ಹೇಳುತ್ತಾರೆ, ಚೆನ್ನಾಗಿದ್ದರೆ ಖುಷಿ ಪಡುತ್ತಾರೆ ಆ ಕಾರಣಕ್ಕೆ ನಾನು ಲಕ್ಕಿ ಎಂದು ಪ್ರತಿಕ್ರಿಯಿಸಿದ್ದಾರೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ವಿಕ್ರಾಂತ್ ರೋಣ’ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಹಲವು ಥಿಯೇಟರ್‌ಗಳಲ್ಲಿ ‘ವಿಕ್ರಾಂತ್ ರೋಣ’ ಸಿನಿಮಾಗೆ ಹೌಸ್‌ಫುಲ್ ಬೋರ್ಡ್ ಬಿದ್ದಿದೆ. ‘ವಿಕ್ರಾಂತ್ ರೋಣ’ ಚಿತ್ರದ ಸೆಟ್‌, ವಿಎಫ್‌ಎಕ್ಸ್, ಕ್ಯಾಮರಾ ವರ್ಕ್‌ ಬಗ್ಗೆ ಅನೇಕರು ಕೊಂಡಾಡಿದ್ದಾರೆ.

ಕೆಳಗೆ ಕಾಣುವ ಲೈಕ್ ಬಟನ್ ಒತ್ತಿ

Leave a Reply

Your email address will not be published. Required fields are marked *