ಕಿಚ್ಚನ ಬಗ್ಗೆ ಕಾರ್ ಡ್ರೈವರ್ ಅಪರೂಪದ ಮಾತು ನೋಡಿ

others

ತಮ್ಮ ನೆಚ್ಚಿನ ನಾಯಕನನ್ನು ತೆರೆ ಮೇಲೆ ಕಣ್ತುಂಬಿಕೊಳ್ಳುವ ಸರದಿ ಸುದೀಪ್‌ ಅವರ ಅಭಿಮಾನಿಗಳದ್ದು. ಅವರ ಬಹು ನಿರೀಕ್ಷೆಯ ‘ವಿಕ್ರಾಂತ್‌ ರೋಣ’ ಗುರುವಾರ ಸಾವಿರಾರು ಚಿತ್ರಮಂದಿರಗಳಲ್ಲಿ ತೆರೆ ಕಂಡಿದೆ. ಟ್ರೈಲರ್‌, ಪ್ರಚಾರದ ವೈಖರಿ ಹೀಗೆ ಹಲವು ವಿಚಾರಗಳಿಂದ ಈ ಸಿನಿಮಾ ಸುದ್ದಿ ಮಾಡುತ್ತಿದೆ. ಈ ಸಿನಿಮಾದಲ್ಲಿ ಹಲವು ಕಲಾವಿದರು ನಟಿಸಿದ್ದು, ಪ್ರತಿ ಪಾತ್ರವೂ ವಿಶಿಷ್ಟವಾಗಿದೆ.

ಅನೂಪ್‌ ಭಂಡಾರಿ ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ಹಲವು ಕಲಾವಿದರಿದ್ದಾರೆ. ಪ್ರತಿ ಕಲಾವಿದರಿಗೂ ಅವರದ್ದೆ ಆದ ಮಹತ್ವದ ಪಾತ್ರವಿದೆ. ಆ ಪಾತ್ರಗಳ ಮಹತ್ವ ಮತ್ತು ಅದರ ವಿಶೇಷತೆಗಳು ಜತೆಗೆ ಅವುಗಳ ಹೆಸರು ಸಹ ವಿಭಿನ್ನವಾಗಿದ್ದು ಒಂದು ಒಳ್ಳೆಯ ಕತೆಯನ್ನು ಬಿಗಿಯಾದ ಚಿತ್ರಕತೆಯನ್ನಾಗಿಸಿ ಅದನ್ನು ಸುದೀಪ್‌ರ ಮಾಸ್ ಇಮೇಜನ್ನು ಬಳಸಿಕೊಂಡು ಅದ್ಭುತ ದೃಶ್ಯಗಳ ಮೂಲಕ ತೆರೆಯ ಮೇಲೆ ಪ್ರೆಸೆಂಟ್ ಮಾಡಿದ್ದಾರೆ.

ಈ ಚಿತ್ರದಲ್ಲಿ ಒಂದು ಕಾನ್ಸ್ಟೇಬಲ್ ಪಾತ್ರವಿದೆ, ಅದನ್ನು ಮಾಡಿರುವುದು ವಿಶ್ವನಾಥ್ ಎಂಬ ವ್ಯಕ್ತಿ, ಇವರು ಬೇರಾರು ಅಲ್ಲ ಸುದೀಪ್ ಅವರ ಜೊತೆಗೆ ಸದಾ ಕಾಣಿಸಿಕೊಳ್ಳುವ ಅವರ ಮನೆಯಲ್ಲಿ ಒಬ್ಬರಾದ ಕೆಲಸದವರು, ಅವರ ಕಾರ್ ಡ್ರೈವರ್.ವಿಶ್ವನಾಥ್ ಹೇಳುವಂತೆ ಸುದೀಪ್ ಕೆಲಸದವರನ್ನು ಅತ್ಯಂತ ಪ್ರೀತಿಯಿಂದ ಕಾಣುತ್ತಾರೆ. ವಿಶ್ವ ಅವರು ಈ ಹಿಂದೆಯೂ ಸುದೀಪ್ ಜೊತೆಗೆ ಕೆಲವು ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

‘ವಿಕ್ರಾಂತ್ ರೋಣ’ ಸಿನಿಮಾದ ನಿರ್ದೇಶಕ ಅನುಪ್ ಭಂಡಾರಿ.ಕಮರೊಟ್ಟು ಎಂಬ ಸುಂದರವಾದ ಊರು, ಆ ಊರಿನಲ್ಲಿ ಸರಣಿ ಕೊಲೆಗಳು, ಎಲ್ಲ ಕೊಲೆಗಳಿಗೂ ಸಾಮ್ಯತೆ, ತನಿಖೆಗೆ ಬಂದ ಪೊಲೀಸ್ ಅಧಿಕಾರಿಯ ಮಂಡೆಯನ್ನೇ ಕೊಯ್ದೊಯ್ದಿದ್ದಾರೆ. ಭಯವೇ ತುಂಬಿರುವ ಆ ಊರಿಗೆ ಭಯವೇ ಗೊತ್ತಿಲ್ಲದ ಪೊಲೀಸ್ ಅಧಿಕಾರಿ ಬರುತ್ತಾನೆ ಅವನೇ ವಿಕ್ರಾಂತ್ ರೋಣ ಅಲಿಯಾಸ್ ಡೆವಿಲ್.

ಇನ್‌ಪೆಕ್ಟರ್ ವಿಕ್ರಾಂತ್ ರೋಣ ಚಾಲಾಕಿ, ಶಕ್ತಿಶಾಲಿ ಆದರೆ ಆ ಕೊಲೆಗಾರನನ್ನು ಹುಡುಕುವುದು ಸುಲಭ ಸಾಧ್ಯವಲ್ಲ.ಸಿನಿಮಾ ಆರಂಭವಾಗುತ್ತಿದ್ದಂತೆ ಕೊಲೆಗಳ ತನಿಖೆಗೆ ಇಳಿದು ಬಿಡುತ್ತಾನೆ ವಿಕ್ರಾಂತ್ ರೋಣ, ಯೂನಿಫಾರ್ಮ್ ಧರಿಸದ, ಹೋದಲೆಲ್ಲ ತನ್ನ ಮುದ್ದಾದ ಮಗಳನ್ನು ಜೊತೆಗೆ ಕರೆದುಕೊಂಡು ಹೋಗುವ ಇನ್ಸ್‌ಪೆಕ್ಟರ್‌ಗೆ ಈ ಸರಣಿ ಕೊಲೆಗಳ ಕೇಸುಗಳ ಮೇಲೆ ಬಹಳ ಆಸಕ್ತಿ. ತೀರಾ ವೈಯಕ್ತಿಕ ಆಸಕ್ತಿ ಸಹ.

ವಿಕ್ರಾಂತ್ ರೋಣನ ತನಿಖೆ ಮುಂದುವರೆದಂತೆ ಸರಣಿ ಕೊಲೆಗಳ ಒಂದೊಂದೆ ಮಾಹಿತಿ ಹೊರಬೀಳುತ್ತಾ ಹೋಗುತ್ತದೆ, ಆ ಕತೆಯ ಮುಖ್ಯ ಪಾತ್ರಗಳ ಪರಿಚಯವೂ ಪ್ರೇಕ್ಷಕನಿಗೆ ಆಗುತ್ತಾ ಸಾಗುತ್ತದೆ. ಕಿಚ್ಚ ಸುದೀಪ್ ಅವರ ‘ವಿಕ್ರಾಂತ್ ರೋಣ’ ಸಿನಿಮಾ ಜುಲೈ 28ರಂದು ತೆರೆಗೆ ಬಂತು. ಮೊದಲ ವಾರದಲ್ಲೇ ಸಿನಿಮಾ 100 ಕೋಟಿ ರೂಪಾಯಿ ಬಾಚಿಕೊಂಡ ಬಗ್ಗೆ ವರದಿ ಆಗಿದೆ. ಈ ಮೂಲಕ ಸಿನಿಮಾ ಹೊಸ ದಾಖಲೆ ಬರೆದಿದೆ.


ಕೆಳಗೆ ಕಾಣುತ್ತಿರುವ ಲೈಕ್ ಬಟನ್ ಒತ್ತಿ

Leave a Reply

Your email address will not be published. Required fields are marked *