ಪುನೀತ್ ರಾಜಕುಮಾರ್ ಅಭಿಮಾನಿಗಳ ಆಕ್ರೋಶಕ್ಕೆ ತಮ್ಮ ತಪ್ಪಿನ ಕ್ಷಮೆ ಕೋರಿದ ಚಕ್ರವರ್ತಿ ಸೂಲಿಬೆಲೆ

curious

ನಟ ಪುನೀತ್ ರಾಜಕುಮಾರ್ ಅವರು ಕಳೆದ ವರ್ಷ ಇಡೀ ದೇಶವೇ ಶಾಕ್ ಆಗುವಂತಹ ರೀತಿಯಲ್ಲಿ ತೀವ್ರವಾದ ಹೃದಯಾಘಾತದಿಂದ ಇಹಲೋಕವನ್ನ ತ್ಯಜಿಸಿದರು. ಜನರು ಇಂದಿಗೂ ಕೂಡ ನಟ ಪುನೀತ್ ರಾಜಕುಮಾರ್ ಅವರ ಕೆಲಸಗಳನ್ನ ನೆನೆಯುತ್ತಾರೆ ಮತ್ತು ದಿನಕ್ಕೆ ಸಾವಿರಾರು ಜನರು ಪುನೀತ್ ರಾಜಕುಮಾರ್ ಅವರ ಸಮಾಧಿಯ ಮುಂದೆ ಅವರಿಗೆ ನಮನವನ್ನ ಸಲ್ಲಿಸುತ್ತಾರೆ.

ನಟ ಪುನೀತ್ ರಾಜಕುಮಾರ್ ಕನ್ನಡ ಚಿತ್ರರಂಗ ಹೆಮ್ಮೆಯ ನಟ. ಇಂದು ನಮ್ಮ ಜೊತೆ ನಟ ಪುನೀತ್ ರಾಜಕುಮಾರ್ ಇಲ್ಲದೆ ಇರಬಹುದು, ಆದರೆ ಅವರ ನೆನಪುಗಳು ನಮ್ಮ ಜೊತೆ ಯಾವತ್ತೂ ಇರುತ್ತದೆ. ಅದೆಷ್ಟೋ ಅನಾಥ ಆಶ್ರಮ, ಅದೆಷ್ಟೋ ವೃದ್ದಾಶ್ರಮ, ಹಲವು ಗೋಶಾಲೆಗಳು, ಅದೆಷ್ಟೋ ಮಕ್ಕಳ ವಿದ್ಯಾಭ್ಯಾಸ ಹೀಗೆ ಹಲವು ಸಾಮಾಜಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದ ನಟ ಪುನೀತ್ ರಾಜಕುಮಾರ್ ಅವರು ದೇವರ ರೂಪದ ಮನುಷ್ಯನಾಗಿದ್ದರು.

ಬಿಜೆಪಿ ಸರಕಾರ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಟೀಕಿಸುವ ಭರದಲ್ಲಿ ಪುನೀತ್ ರಾಜ್ ಕುಮಾರ್ ನಿಧನವನ್ನು ಅಣಕಿಸುವ ರೀತಿಯಲ್ಲಿ ಟ್ವಿಟ್ ಮಾಡಿದ್ದಾರೆ ಎಂದು ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಚಿಂತಕ ಚಕ್ರವತಿ ಸೂಲಿಬೆಲೆ ವಿರುದ್ಧ ಗರಂ ಆಗಿದ್ದಾರೆ. ಪುನೀತ್ ನಿಧನರಾದಾಗ ಮುಖ್ಯಮಂತ್ರಿಗಳು ಮೂರು ದಿನಗಳ ಸಮಯವನ್ನು ಅವರಿಗಾಗಿ ವ್ಯಯಿಸಿದರು ಎಂದು ಲೇವಡಿ ರೂಪದಲ್ಲಿ ಸೂಲಿಬೆಲೆ ಟ್ವಿಟ್ ಮಾಡಿದ್ದಾರೆ ಎಂದು ಅಭಿಮಾನಿಗಳು ಆರೋಪಿಸಿದ್ದರು.

ಮಂಗಳೂರಿನಲ್ಲಿ ಪ್ರವೀಣ್​ನನ್ನು ಹತ್ಯೆ ಮಾಡಲಾಗಿದೆ. ಈ ವಿಚಾರಕ್ಕೆ ಟ್ವೀಟ್ ಮಾಡಿರುವ ಚಕ್ರವರ್ತಿ ಸುಲಿಬೆಲೆ, ನಮ್ಮ ಶಾಸಕರು ಸಿಎಂಗೆ ಟೈಮ್​ ಸಿಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಫೈಲ್​ಗಳಿಗೆ ಸಹಿ ಮಾಡಲು ಸಿಎಂಗೆ ಸಮಯವಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ, ಸಿಎಂ ಬೊಮ್ಮಾಯಿ ಅವರು ಎಲ್ಲಾ ಸಿನಿಮಾಗಳ ಪ್ರೀಮಿಯರ್​​ ಶೋ ನೋಡಲು ಹೋಗುತ್ತಿದ್ದಾರೆ. ಹಾಗೂ ಸಿನಿಮಾ ನಟ ಮೃತ್ತಪಟ್ಟಾಗ ಮೂರು ಮೂರು ದಿನ ಅಲ್ಲೇ ಇರಲು ಸಮಯವಿದೆ.

ಈ ಮಂಗಳೂರಿನಲ್ಲಿ ಕೊಲೆ ನಡೆಯದಿದ್ದರೆ ವಿಕ್ರಾಂತ್​ ರೋಣ ಸಿನಿಮಾ ಕೂಡ ನೋಡುತ್ತಿದ್ದರು ಎಂದು ಟ್ವೀಟ್ ಮಾಡಿದ್ದಾರೆ. ಬಿ.ಜೆ.ಪಿ ಸರಕಾರದ ವಿರುದ್ಧ ಅಥವಾ ಬಸವರಾಜ ಬೊಮ್ಮಾಯಿ ವಿರುದ್ಧ ಚಕ್ರವತಿ ಸೂಲಿಬೆಲೆ ಅವರು ಏನಾದರೂ ಕಾಮೆಂಟ್ ಮಾಡಲಿ. ಅಪ್ಪು ನಿಧನವನ್ನು ಇಂದಿಗೂ ನಮ್ಮಿಂದ ಅರಗಿಸಿಕೊಳ್ಳಲು ಆಗುತ್ತಿಲ್ಲ. ನಿಧನರಾದಾಗ ಯಾರೂ ಬರದೇ ಇದ್ದರೂ, ಅಭಿಮಾನಿಗಳು ಮೂರು ದಿನವಲ್ಲ, ನೂರು ದಿನವಾದರೂ ಅವರಿಗೆ ಗೌರವ ಸೂಚಿಸಿ ಕಳುಹಿಸಿ ಕೊಡುತ್ತಿದ್ದೆವು ಎಂದಿದ್ದಾರೆ.

ಈ ರೀತಿಯಲ್ಲಿ ಅವಮಾನ ಮಾತುಗಳನ್ನು ಕೇಳುವುದಕ್ಕೆ ಸಾಧ್ಯವಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಅನೇಕ ಅಭಿಮಾನಿಗಳು ಸೂಲಿಬೆಲೆಗೆ ಕಾಮೆಂಟ್ ಮಾಡಿದ್ದರು. ಕೂಡಲೇ ಎಚ್ಚೆತ್ತುಕೊಂಡ ಸೂಲಿಬೆಲೆ ಅವರು ಕ್ಷಮೆ ಕೇಳಿದ್ದಾರೆ. ಈ ಟ್ವೀಟ್ ಪುನೀತ್ ಅವರನ್ನು ಅಗೌರವಿಸಿದ್ದು ಎಂದು ಅನೇಕರು ಭಾವಿಸಿದ್ದರೆ ನಾನು ಕ್ಷಮೆಯಾಚಿಸುತ್ತೇನೆ.

ಅವರ ಬಗ್ಗೆ ನನಗೆ ಅಪಾರವಾದ ಗೌರವವಿದೆ. ದಯವಿಟ್ಟು ಈ ಟ್ವೀಟ್‌ಅನ್ನು ಅನ್ಯಥಾ ಭಾವಿಸಬೇಡಿ. ಅಭಿಮಾನಿಗಳಿಗೆ ನೋವಾಗಿದ್ದರೆ ನಿಸ್ಸಂಶಯವಾಗಿ ಕ್ಷಮೆ ಯಾಚಿಸುತ್ತೇನೆ. ಪುನೀತ್ ಅವರ ಅಭಿಮಾನಿಯಾಗಿ ಇದು ನನ್ನ ಕರ್ತವ್ಯವೂ ಹೌದು’’ ಎಂದು ಚಕ್ರವರ್ತಿ ಸೂಲಿಬೆಲೆ ಟ್ವೀಟ್ ಮಾಡಿದ್ದಾರೆ. ಆ ಮೂಲಕ ಅಪ್ಪು ಅಭಿಮಾನಿಗಳಿಗೆ ಚಕ್ರವರ್ತಿ ಸೂಲಿಬೆಲೆ ಕ್ಷಮೆ ಕೇಳಿದ್ದಾರೆ.

ಕೆಳಗೆ ಕಾಣುತ್ತಿರುವ ಲೈಕ್ ಬಟನ್ ಒತ್ತಿ

Leave a Reply

Your email address will not be published. Required fields are marked *