ಶಿವಣ್ಣ ಬರುತ್ತಿದ್ದ ಹಾಗೆ ಎದ್ದು ನಿಂತ ಉಪ್ಪಿ, ರಮೇಶ್ ಮತ್ತು ಗಣೇಶ್

ಸ್ಯಾಂಡಲವುಡ್

ಗಾಳಿಪಟ 2 ಸಿನಿಮಾ ರಿಲೀಸ್‌ಗೂ ಮೊದಲು ಕೊಡುತ್ತಿರೋ ಕಿಕ್ ಮಾತ್ರ ಆಹಾ… ಭಟ್ರ ಗಾಳಿಪಟ ಸಿನಿಮಾನ ಮರೆಯಲು ಸಾಧ್ಯ ಇಲ್ಲ. ಹಾಡುಗಳು,ಕಥೆ, ನಗು, ಅಳು, ಪಂಚಿಂಗ್  ಡೈಲಾಗ್, ಫನ್,ತುಂಟಾಟ ಎಲ್ಲಾ ಮಿಕ್ಸ್ ಆಗಿ ಬೇರೆಯದ್ದೆ ಲೋಕಕ್ಕೆ ಕರ್ಕೊಂಡ್ ಹೋದ ಸಿನಿಮಾ ಗಾಳಿಪಟ. ಇದೀಗ ಅದಕ್ಕೂ ಮೀರಿದ ಸಿನಿಮಾ ಗಾಳಿಪಟ 2 ಬೆಳ್ಳಿ ತೆರೆಯ ಮೇಲೆ ರಂಗೇರಿಸಲು ಧಾಮ್ ಧೂಮ್ ಅಂತ ರೆಡಿಯಾಗಿದೆ.

ಅಭಿಮಾನಿಗಳು ಏನ್ ಸಖತ್ ಆಗಿದೆ ಗೊತ್ತಾ ಟ್ರೇಲರ್ ಅಂತಿದ್ದಾರೆ. ಟ್ರೇಲರ್‌ನಲ್ಲಿ ಗಣೇಶ್, ದಿಗಂತ್ ಮತ್ತು ಪವನ್‌ ಪ್ರಾರಂಭದಲ್ಲಿ ನಗೋ ದೃಶ್ಯ ಎಲ್ಲರನ್ನೂ ಬಿದ್ದು ಬಿದ್ದು ನಗಿಸಿದೆ. ಇದು ಮೂವರು ಗೆಳೆಯರ ಬದುಕಿನ ಅದ್ಬುತ ಕಥೆ ಅನ್ನೋದು ಟ್ರೇಲರ್ ಮೂಲಕ ಅರಿವಾಗುತ್ತಿದೆ. ಒಂದೊಂದು ಸೀನ್‌ಗಳು ಮನಸ್ಸಿಗೆ ತುಂಬಾ ಹತ್ತಿರ ಅನಿಸುತ್ತಿದೆ.

ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಗಾಳಿಪಟ 2 ಸಿನಿಮಾದ ಟ್ರೈಲರ್ ಲಾಂಚ್‌ ಮತ್ತು ಪ್ರೀ-ರಿಲೀಸ್ ಕಾರ್ಯಕ್ರಮ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆಯಿತ್ತು. ಈ ಕಾರ್ಯಕ್ರಮದಲ್ಲಿ ಶಿವರಾಜ್‌ಕುಮಾರ್ ಮತ್ತು ರಮೇಶ್ ಅರವಿಂದ್‌, ಗಣೇಶ್, ಉಪೇಂದ್ರ, ಮತ್ತಿತರರು ಭಾಗಿಯಾಗಿದ್ದಾರೆ. ಇಡೀ ಚಿತ್ರತಂಡ ಅದ್ದೂರಿ ಟ್ರೈಲರ್ ಲಾಂಚ್ ಕಾರ್ಯಕ್ರಮ ಅಲ್ಲಿ ಭಾಗಿ ಆಗಿತ್ತು.

ಈ ಸಂದರ್ಭಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನು ಆಹ್ವಾನಿಸಲಾಗಿತ್ತು, ಅವರು ಬರುತ್ತಿದ್ದಂತೆ ಉಪೇಂದ್ರ, ರಮೇಶ್ ಅರವಿಂದ್, ಗಣೇಶ್ ಎದ್ದುನಿಂತು ಸ್ವಾಗತಿಸಿದರು. ಅಲ್ಲದೆ ಇಡೀ ಚಿತ್ರತಂಡ ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶಿವಣ್ಣ ಚಿತ್ರದ ಕುರಿತು, ಗಣೇಶ್, ನಿರ್ಮಾಪಕರು ಕುರಿತು ಮಾತನಾಡಿದರು.

ಗಾಳಿಪಟ 2 ಟ್ರೇಲರ್ ನೋಡಿದಾಗ ಅನಿಸಿದ್ದು ಸಿನಿಮಾದಲ್ಲಿ ರಸಭರಿತ ಕಾಮಿಡಿ ಇದೆ ಅಂತ. ನಕ್ಕು ನಕ್ಕು ಸುಸ್ತಾಗಬಹುದು ಜೊತೆಗೆ ಕಣ್ಣೀರು ಹಾಕಬಹುದು. ಯಾಕಂದ್ರೆ ಟ್ರೇಲರ್ ಇದೀಗ ಈ ಹಿಂಟ್‌ಗಳನ್ನ ಬಿಟ್ಟುಕೊಟ್ಟಿದೆ. ದಿಗಂತ್ ಲುಕ್ ಯಾಕೋ ವಿಚಿತ್ರವಾಗಿ ಕಾಣಿಸುತ್ತಿದೆ. ಹಿಮಾಲಯದಲ್ಲಿ ದಿಗಂತ್ ಬೆತ್ತಲೆಯಾಗಿದ್ದಾರೆ ಅಂತೆ. ಇನ್ನು ಭೂಷಣ್ ಪಾತ್ರದಲ್ಲಿ ನಟ ಪವನ್ ಸಖತ್ ಆಗಿ ಮಿಂಚಿದ್ದಾರೆ.

ಮೂವರು ಗೆಳೆಯರ ಬದುಕಿನಲ್ಲಿ ಮೂವರು ರಾಣಿಯರ ಎಂಟ್ರಿಯಾಗುತ್ತೆ. ಆಮೇಲೆ ಏನಾಗುತ್ತೆ ಅನ್ನೋದನ್ನ ತೆರೆ ಮೇಲೆ ನೋಡಿ ಆನಂದಿಸೋಣ. ಟ್ರೇಲರ್ ನೋಡಿ ಅನಿಸಿದ್ದು ತುಂಬಾ ಟ್ವಿಸ್ಟ್ ಆಂಡ್ ಟರ್ನ್‌ಗಳು ಈ ಸಿನಿಮಾದಲ್ಲಿದೆ ಅನ್ನೋದು. ಗಣೇಶ್ ಕಣ್ಣೀರು ಯಾಕೋ ನಮ್ಮನ್ನ ಮತ್ತೇ ಅಳಿಸಿದೆ.  ನಿರ್ದೇಶಕ ಯೋಗರಾಜ್ ಭಟ್ ಎಂದರೆ ಒಂದು ರೀತಿಯ ಡಿಫರೆಂಟ್ ಎಂದು ಹೇಳಬಹುದು.

ಅವರ ನಿರ್ದೇಶನದ ಗಾಳಿಪಟ ಚಿತ್ರದ ಸೀಕ್ವೆಲ್ ಆಗಿ ಗಾಳಿಪಟ 2 ತೆರೆಕಾಣಲು ಸಿದ್ದವಾಗಿದೆ. ಈಗಾಗಲೇ ಈ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ‘ಒಂದಿಷ್ಟು ಮೊಹಬ್ಬತ್ ಜೊತೆಗೆ ಮತ್ತೊಂದಷ್ಟು ಸ್ನೇಹವನ್ನು ಹೊತ್ತು ಇದೇ ಆಗಸ್ಟ್ 12ರಂದು ನಿಮ್ಮ ಮುಂದೆ ಬರ್ತಿದ್ದೀವಿ. ಅದೇ ಹಳೆಯ ಅಕ್ಕರೆ ಮತ್ತು ಪ್ರೀತಿಯನ್ನು ಬಯಸುವ ಗಾಳಿಪಟ 2 ಚಿತ್ರತಂಡ‘ ಎಂದು ಬರೆದು ಸೋಷಿಯಲ್ ಮೀಡಿಯಾದಲ್ಲಿ ರಿಲೀಸ್​ ಡೇಟ್​ ಅನೌನ್ಸ್​  ಮಾಡಿದ್ದರು.

ಕೆಳಗೆ ಕಾಣುವ ಲೈಕ್ ಬಟನ್ ಒತ್ತಿ

Leave a Reply

Your email address will not be published. Required fields are marked *