ಬಿಗ್ಬಾಸ್ ಶೋ ಜನರಲ್ಲಿ ಒಂದು ವಿಶೇಷ ಸ್ಥಾನವನ್ನು ಹೊಂದಿದೆ. ಜನರು ಈ ಶೋ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಸದ್ಯ ಬಿಗ್ಬಾಸ್ ಅಭಿಮಾನಿಗಳ ಕಾತುರಕ್ಕೆ ತೆರೆ ಬಿದ್ದಿದ್ದು ಇದೇ ಆಗಸ್ಟ್ 6 ರಿಂದ ಬಿಗ್ಬಾಸ್ ಓಟಿಟಿ ಶೋ ಆರಂಭವಾಗಲಿದೆ. ಈ ವಿಚಾರ ಎಲ್ಲರಿಗೂ ಗೊತ್ತಿದೆ. ಈ ಕಾರ್ಯಕ್ರಮಕ್ಕೆ ಸಂಬಂಧಪಟ್ಟಂತೆ ಕಲರ್ಸ್ ಕನ್ನಡ ಸುದ್ದಿಗೋಷ್ಠಿ ನಡೆಸಿದ್ದು, ಕಿಚ್ಚ ಸುದೀಪ್ ಮತ್ತು ಕಲರ್ಸ್ ಕನ್ನಡದ ಪ್ರೋಗ್ರಾಮಿಂಗ್ ಹೆಡ್ ಪರಮೇಶ್ವರ ಗುಂಡ್ಕಲ್ ಭಾಗವಹಿಸಿದ್ದು, ಬಿಗ್ಬಾಸ್ ಕುರಿತಂತೆ ಹೆಚ್ಚಿನ ಮಾಹಿತಿ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುದೀಪ್ ಬಿಗ್ ಬಾಸ್‌ಗೆ ಕಳಿಸಿ ಅಂತ ನನ್ನ ಬಳಿ ತುಂಬ ಜನ ಕೇಳ್ತಾರೆ. ಆದರೆ ಈ ವಿಚಾರದ ಬಗ್ಗೆ ನನ್ನ ಹತ್ತಿರ ಬರಬೇಡಿ ಅಂತ ನಾನು ಎಲ್ಲರಿಗೂ ಮನವಿ ಮಾಡಿದ್ದುಂಟು. ನಮಗೆ ಬೇಕಾದ ಸ್ಪರ್ಧಿಗಳನ್ನು ಈ ಶೋನಲ್ಲಿ ಭಾಗವಹಿಸುವ ಅವಕಾಶ ಕೊಟ್ಟರೆ ಶೋಗೆ ನ್ಯಾಯ ಒದಗಿಸಲು ಆಗೋದಿಲ್ಲ. ಶೋನಲ್ಲಿ ನಾವು ಸ್ಪರ್ಧಿಯಾಗಬೇಕು ಎಂದು ಪ್ರಯತ್ನ ಮಾಡೋದು ತಪ್ಪಲ್ಲ ಎಂದಿದ್ದಾರೆ.
ಆತ್ಮವಿಮರ್ಶೆ ಮಾಡಿಕೊಳ್ಳೋಕೆ, ನಮ್ಮ ಮೇಲೆ ಹೊರಗಡೆ ಇರುವ ನೆಗೆಟಿವ್ ಅಭಿಪ್ರಾಯವನ್ನು ಸರಿ ಮಾಡಿಕೊಳ್ಳುವುದಕ್ಕೆ, ಕ್ಯಾಚ್ ಹಾಕಿಕೊಳ್ಳೋದಿಕ್ಕೆ ಕೆಲವರು ಬಿಗ್ ಬಾಸ್‌ಗೆ ಬರಬೇಕು ಎಂದುಕೊಳ್ಳುತ್ತಾರೆ. ಸೆಲೆಬ್ರಿಟಿಗಳ ಆಯ್ಕೆಯನ್ನು ಮಾಡುವುದು, ಅವರು ಒಂದೇ ವಾರಕ್ಕೆ ಮನೆಯಿಂದ ಹೊರಗಡೆ ಬರುವುದು, ಆಮೇಲೆ ವರ್ಷಪೂರ್ತಿ ಅವರ ನಿಷ್ಠೂರ ಕಟ್ಟಿಕೊಳ್ಳೋದು ಬೇಡ ಎಂದಿದ್ದಾರೆ.
ನೀವು ಹೇಳಿದ್ರಿ ಅಂತ ಬಿಗ್ ಬಾಸ್ ಮನೆಯೊಳಗಡೆ ಹೋಗಿ ಆಮೇಲೆ ನಮ್ಮ ವಿರುದ್ಧ ಮಾತನಾಡುತ್ತೀರಿ ಅಂತ ಮಾತು ಬರತ್ತೆ. ನಾವು ಏನು ಮಾಡಬೇಕು? ಎಷ್ಟು ಸಂಭಾವನೆ ಬರಬೇಕು? ಅಂತ ಲಿಮಿಟ್ ಅಲ್ಲಿರೋದು ಒಳ್ಳೆಯದು. ನನ್ನನ್ನು ಬಿಗ್ಬಾಸ್ ಮನೆಗೆ ಕಳಿಸಿ ಅಂತ ಕೇಳ್ತಾರೆ, ಆದರೆ ನಾನು ಒಪ್ಪುವುದಿಲ್ಲ. ಒತ್ತಾಯ ಮಾಡಿದ್ರೆ ಬೀಪ್ ಬರೋ ಹಾಗೆ ಬಯ್ಯಿಸಿಕೊಳ್ತಾರೆ ಎಂದಿದ್ದಾರೆ.
ಬಿಗ್ಬಾಸ್ ಓಟಿಟಿ ಮೊದಲ ಸೀಸನ್ ಗೆ ಕೌಂಟ್ ಡೌನ್ ಶುರುವಾಗಿದ್ದು, ಈ ಬಗ್ಗೆ ಕಿಚ್ಚ ಸುದೀಪ್ ಮಾತನಾಡಿದ್ದಾರೆ. ನನಗೆ ಸಿನಿಮಾ ಬೇರೆ ಅಲ್ಲ ಬಿಗ್ ಬಾಸ್ ಬೇರೆ ಅಲ್ಲ. ನನಗೆ ಬಿಗ್ ಬಾಸ್ ಅರಂಭವಷ್ಟೇ ಗೊತ್ತು ಉಳಿದಿದ್ದೆಲ್ಲ ಸ್ಪರ್ಧಿಗಳೇ ನೋಡಿಕೊಳ್ತಾರೆ. ಬಿಗ್ಬಾಸ್ ಕೆಲವು ಸೀಸನ್ ಆದ ಮೇಲೆ ನನಗೆ ಬಿಗ್ಬಾಸ್ ಸಾಕು ಅನಿಸಿದೆ ಆದರೆ ಬಿಗ್ಬಾಸ್ ಹಾಗೂ ನನಗೂ ಒಂದು ಭಾಂದವ್ಯ ಇದೆ ಎಂದಿದ್ದಾರೆ.
ಸುದೀಪ್ ಈ ಎರಡು ಬಿಗ್ಬಾಸ್ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ. ಮಿನಿ ಬಿಗ್ಬಾಸ್ಗೆ ಬಹಳ ವಿಶೇಷ ಅತಿಥಿಗಳು ಇರುತ್ತಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ವಾಹಿನಿ ಇನ್ನೂ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಕಳೆದ ಬಾರಿ ಬಿಗ್ಬಾಸ್ 8 ಕೊರೊನಾ ಕಾರಣದಿಂದ ಅರ್ಧಕ್ಕೆ ನಿಂತು ಮತ್ತೆ ಆರಂಭವಾಗಿತ್ತು.
ಕನ್ನಡದಲ್ಲಿ 8 ಬಿಗ್ ಬಾಸ್ ಸೀಸನ್‌ಗಳನ್ನು ಯಶಸ್ವಿಯಾಗಿ ನಿರೂಪಿಸಿರುವ ಸುದೀಪ್ ಅವರಿಗೂ ಕೆಲವೊಮ್ಮೆ ಸಮಸ್ಯೆಗಳು ಎದುರಾಗಿವೆಯಂತೆ. ಆ ಬಗ್ಗೆ ಮಾತನಾಡುತ್ತಾ, “ಕೆಲವೊಮ್ಮೆ 90 ಡಿಗ್ರಿ ಸೆಲ್ಸಿಯಸ್ ಜ್ವರ ಇದ್ರೂ ನಾನು ಕಾರ್ಯಕ್ರಮ ನಡೆಸಿಕೊಟ್ಟಿದ್ದೀನಿ. ಕೆಲವೊಮ್ಮೆ ನಾನು ಬೇರೆ ಊರಲ್ಲಿದ್ದರೂ ಎರಡೆರಡು ವಿಮಾನ ಮಾಡಿಕೊಂಡು ಬಂದು ಕಾರ್ಯಕ್ರಮ ನಡೆಸಿಕೊಟ್ಟಿದ್ದಿದೆ. ಯಾಕಂದ್ರೆ ನನ್ನ ಜೀವನದಲ್ಲಿ ಇದು ವಿಶೇಷ ಕಾರ್ಯಕ್ರಮ. ಈ ವಿಚಾರದಲ್ಲಿ ನನಗೂ ಸಾಕಷ್ಟು ಬಾರಿ ಪರಮೇಶ್ ಜೊತೆ ಸಣ್ಣ ಪುಟ್ಟ ಮನಸ್ತಾಪಗಳಾಗಿವೆ” ಎಂದು ಹಳೆಯ ಘಟನೆಗಳನ್ನು ಮೆಲುಕು ಹಾಕಿದರು.
ಕೆಳಗೆ ಕಾಣುವ ಲೈಕ್ ಬಟನ್ ಒತ್ತಿ.