ನೆನ್ನೆ ತಾನೆ ಅಶ್ವಿನಿ ಪುನೀತ್ ಅವರ ಹುಟ್ಟುಹಬ್ಬ ಜರಗಿತ್ತು. ಇನ್ನು ಅಪ್ಪು ಅವರು ಬದುಕಿದ್ದರೆ ಅಶ್ವಿನಿ ಅವರ ಹುಟ್ಟುಹಬ್ಬವನ್ನು ಎಲ್ಲರೂ ಅದ್ದೂರಿಯಾಗಿ ಆಚರಿಸುತ್ತಿದ್ದರು. ಆದರೆ ಅಪ್ಪು ಅವರು ಇಲ್ಲದ ಕಾರಣ ಅಶ್ವಿನಿ ಅವರು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿಲ್ಲ.
ಅಲ್ಲದೆ ಅಶ್ವಿನಿ ಅವರು ನಿನ್ನೆ ತಮ್ಮ ಮದುವೆಯ ಆಮಂತ್ರಣ ಪತ್ರವನ್ನು ಕೈಯಲ್ಲಿ ಹಿಡಿದು ಕಣ್ಣೀರು ಹಾಕಿದ್ದಾರೆ. ಹೌದು ಅಶ್ವಿನಿ ಅವರಿಗೆ ತಮ್ಮ ಮದುವೆ ಆಮಂತ್ರಣ ಪತ್ರ ದೊರಕಿದ್ದು ಅದನ್ನು ನೋಡಿ ಹಳೆಯ ಎಲ್ಲಾ ನೆನಪುಗಳನ್ನು ಮೆಲಕು ಹಾಕುತ್ತಾ ಅಶ್ವಿನಿ ಪುನೀತ್ ಅವರು ಕಣ್ಣೀರು ಹಾಕಿದ್ದಾರೆ.
ಪುನೀತ್ ರಾಜಕುಮಾರ್ ಹಾಗೂ ಅಶ್ವಿನಿ ಅವರು ಡಿಸೆಂಬರ್ 1 1999 ರಲ್ಲಿ, ತಮ್ಮ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ, ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಪುನೀತ್ ರಾಜಕುಮಾರ್ ಹಾಗೂ ಅಶ್ವಿನಿ ಅವರು ಮೊದಲು ಸ್ನೇಹಿತರಾಗಿ ಪರಿಚಯರಾದರು. ನಂತರ ಇವರ ಸ್ನೇಹ ಪ್ರೀತಿಗೆ ತಿರುಗಿ ಇವರಿಬ್ಬರು ತಮ್ಮ ಮನೆಯವರನ್ನು ಒಪ್ಪಿಸಿ ಮದುವೆಯಾದರು.
ಮೊದಮೊದಲು ಪುನೀತ್ ರಾಜಕುಮಾರ್ ಅವರಿಗೆ ತಮ್ಮ ತಂದೆ ರಾಜ್ ಕುಮಾರ್ ಅವರ ಬಳಿ ತಮ್ಮ ಪ್ರೀತಿಯ ವಿಚಾರವನ್ನು ಹೇಳಿಕೊಳ್ಳಲು ಭಯವಾಗುತ್ತಿತ್ತಂತೆ. ಇನ್ನು ಈ ಕಾರಣದಿಂದ ಪುನೀತ್ ಅವರು ಈ ಬಗ್ಗೆ ತಮ್ಮ ಅಣ್ಣಂದಿರಾದ ರಾಘಣ್ಣ ಹಾಗೂ ಶಿವಣ್ಣ ಅವರ ಬಳಿ ಹೇಳಿಕೊಂಡಿದ್ದರಂತೆ.
ಇವರೆಲ್ಲರೂ ಹೋಗಿ ತಮ್ಮ ತಂದೆಗೆ ತಿಳಿಸಿದ ನಂತರ ಅಣ್ಣಾವ್ರು ಸಹ ಈ ಮದುವೆಗೆ ಒಪ್ಪಿಕೊಂಡಿದ್ದರಂತೆ. ಇನ್ನು ಅಶ್ವಿನಿ ಅವರ ಮನೆಯಲ್ಲಿ ಸಹ ಮದುವೆಗೆ ಒಪ್ಪಿಕೊಳ್ಳಲು ಮೊದಮೊದಲು ಹಿಂಜರಿಯುತ್ತಿದ್ದರಂತೆ. ನಂತರ ಅಶ್ವಿನಿ ಅವರ ಮನೆಯಲ್ಲಿ ಪುನೀತ್ ರಾಜಕುಮಾರ್ ಅವರು ಮಾತನಾಡಿ ಅವರ ಪೋಷಕರನ್ನು ಮದುವೆಗೆ ಒಪ್ಪಿಸಿದ್ದರಂತೆ.
ನಂತರ ಪುನೀತ್ ರಾಜಕುಮಾರ್ ಹಾಗೂ ಅಶ್ವಿನಿ ಅವರು ಡಿಸೆಂಬರ್ 1 1999 ರಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯಾಗಿ ವರ್ಷಗಳು ಕಳೆದರೆ ಸಹ ಅಶ್ವಿನಿ ಹಾಗೂ ಪುನೀತ್ ಅವರ ನಡುವಿನ ಪ್ರೀತಿ ಹಾಗೂ ಅನ್ಯೋನ್ಯತೆ ಕಂಚವೂ ಕೂಡ ಕಡಿಮೆಯಾಗಿಲ್ಲ.
ಇನ್ನು ಅಪ್ಪು ಹಾಗೂ ಅಶ್ವಿನಿ ಅವರ ಮದುವೆಯ ಆಮಂತ್ರಣ ಪತ್ರ ನೋಡಲು ಬಹಳ ಸಿಂಪಲ್ ಆಗಿತ್ತು ಇದು ಒಬ್ಬ ಸೆಲೆಬ್ರಿಟಿಯ ಮದುವೆನಾ ಎನ್ನುವ ಪ್ರಶ್ನೆ ಮೂಡುತ್ತದೆ. ಇನ್ನು ಇದೀಗ ಅಪ್ಪು ಅವರನ್ನು ಕಳೆದುಕೊಂಡ ಅಶ್ವಿನಿ ಅವರು ತಮ್ಮ ಮದುವೆಯ ಆಮಂತ್ರಣ ಪತ್ರ ಹಿಡಿದು ತಮ್ಮ ರೂಮ್ನಲ್ಲಿ ಕಣ್ಣೀರು ಹಾಕುತ್ತಿದ್ದಾರೆ. ಈ ನೋವಿನಿಂದ ಹೊರಬರಲು ಆ ದೇವರು ಅಶ್ವಿನಿಯವರಿಗೆ ಸಹಾಯ ಮಾಡಲಿ ಎಂದು ನೀವು ಸಹ ಕಾಮೆಂಟ್ ಮಾಡುವ ಮೂಲಕ ನಿಮ್ಮ ಅನಿಸಿಕೆಗಳನ್ನು ತಿಳಿಸಿ…