ಈ ಭೂಮಿಯ ಮೇಲೆ ಸೂರ್ಯ ಹಾಗೂ ಚಂದ್ರ ಇರುವ ತನಕ ಅಪ್ಪು ಹೆಸರು ಅಮರ. ಅಪ್ಪು ಅವರು ಕೇವಲ ಒಬ್ಬ ಅದ್ಭುತ ನಟ ಮಾತ್ರ ಆಗಿರಲಿಲ್ಲ ಒಬ್ಬ ಕಲಾವಿದ ಕೇವಲ ತೆರೆ ಮೇಲೆ ಮಾತ್ರ ಹೀರೋ ಆಗಲು ಸಾಧ್ಯ ಆದರೆ ನಮ್ಮ ಅಪ್ಪು ತೆರೆ ಹಿಂದೆ ಕೂಡ ನಿಜ ಜೀವನದಲ್ಲೂ ಸಹ ಒಬ್ಬ ಹೀರೋ ಎಂದರೆ ತಪ್ಪಾಗುವುದಿಲ್ಲ.
ಸಾವಿರಾರು ಜನರ ಕಷ್ಟಗಳಿಗೆ ಸ್ಪಂದಿಸಿ ಅವರ ನೆರವಿಗೆ ದೇವರಂತೆ ಬಂದ ಅಪ್ಪು ಇಂದು ಆ ದೇವರ ಬಳಿ ಇದ್ದಾರೆ. ದೇವರು ಒಳ್ಳೆಯವರನ್ನು ತುಂಬಾ ದಿನಗಳ ಕಾಲ ಭೂಮಿಯ ಮೇಲೆ ಇರಿಸುವುದಿಲ್ಲ ಏಕೆಂದರೆ ಅಂತಹ ಒಳ್ಳೆಯವರು ನನ್ನ ಜೊತೆ ಇರಲಿ ಎಂದು ಆ ದೇವರಿಗೂ ಸಹ ಆಸೆ ಆದ್ದರಿಂದ ನಮ್ಮ ನಿಮ್ಮೆಲ್ಲರ ಪ್ರೀತಿಯ ಅಪ್ಪು ಅವರನ್ನು ಅವರು ಇಷ್ಟು ಬೇಗ ಕರೆದುಕೊಂಡು ಬಿಟ್ಟರು.
ಅಪ್ಪು ಅವರು ಸಮಾಜಕ್ಕೆ ಮಾಡಿರುವ ಕೆಲಸಗಳ ಪಟ್ಟಿ ನಮ್ಮಿಂದ ಎಣಿಸಲು ಸಾಧ್ಯವಿಲ್ಲ. ಅದೆಷ್ಟು ಜನರಿಗೆ ನೆರವಾಗಿದ್ದ ಅಪ್ಪು ಇಂದು ನಮ್ಮ ಜೊತೆಗಿಲ್ಲ ಎಂದು ಊಹಿಸಲು ಸಹ ಮನಸ್ಸಿಗೆ ಬಹಳ ಕಷ್ಟವಾಗುತ್ತಿದೆ. ಅಪೂರ್ವವರು ನಮ್ಮನ್ನು ಬಿಟ್ಟು ಹೋದ ದಿನದಿಂದ ಎಂದಿಗೂ ಅದೆಷ್ಟೋ ಜನರ ಕಣ್ಣು ಇನ್ನೂ ಒದ್ದೆಯಾಗಿದೆ.
ಇನ್ನು ನಿನ್ನೆ ಮ್ಯಾಚ್ 17 ಅಪ್ಪು ಅವರ ಜನ್ಮದಿನದ ಪ್ರಯುಕ್ತ ಅವರ ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಅವರ ಸ-ಮಾ-ಧಿಯ ಬಳಿ ಹೋಗಿ ಅವರ ದರ್ಶನ ಪಡೆದುಕೊಂಡು ಅವರ ಹುಟ್ಟುಹಬ್ಬವನ್ನು ಆಚರಿಸುತ್ತಾರೆ. ಅಪ್ಪು ಅವರು ನಮ್ಮ ಜೊತೆಗೆ ಇಲ್ಲವಾದರೂ ಅವರ ಹುಟ್ಟುಹಬ್ಬ ಆಚರಿಸುವಲ್ಲಿ ಯಾವುದೇ ಕೊರತೆ ಮಾಡಿಲ್ಲ ಅವರ ಅಭಿಮಾನಿಗಳು.
ಇನ್ನು ಇದೀಗ ನಟ ಶಿವರಾಜ್ ಕುಮಾರ್ ತಮ್ಮ ಸಹೋದರ ಅಪ್ಪು ಅವರನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಅಪ್ಪು ಹಬ್ಬಕ್ಕೆ ಸೋಶಿಯಲ್ ಮೀಡಿಯಾದ ಮುಖಾಂತರ ಶುಭಕೋರಿದ ಶಿವಣ್ಣ, ಅಪ್ಪು ಕುರಿತು ಭಾವನಾತ್ಮಕ ಪತ್ರ ಒಂದನ್ನು ಬರೆದಿದ್ದಾರೆ. ಹಾಗಾದರೆ ಆ ಪತ್ರದಲ್ಲಿ ಏನಿದೆ ತಿಳಿಯೋಣ ಬನ್ನಿ..
ಅಪ್ಪು ನೀನು ಹುಟ್ಟಿದಾಗ ನಮ್ಮ ಮನೆಯಲ್ಲಿ ಉಲ್ಲಾಸ ಉಕ್ಕಿ ಹರಿಯುತ್ತಿತ್ತು, ನಿನ್ನ ಕಣ್ಣಲ್ಲಿದ್ದ ಹೊಳಪು ನೀನು ಪವರ್ ಸ್ಟಾರ್ ಆಗುವುದನ್ನು ಆವಾಗಲೇ ಸಾರಿ ಹೇಳುತ್ತಿತ್ತು, ನೀನು ನಕ್ಕರೆ ಎಲ್ಲರೂ ನಗುತ್ತಾ ಇದ್ದರು, ನೀನು ಕುಣಿದರೆ ಎಲ್ಲರೂ ರೋಮಾಂಚನದಿಂದ ನೋಡುತ್ತಾ ಇದ್ದರು, ಮನೆಗೆ ಬಂದ ಅತಿಥಿ ನೆಂಟರುಗಳಿಗೆಲ್ಲ ನೀನೇ ಬೇಕು, ಆ ಪುಟ್ಟ ಅಪ್ಪು ಮಿಂಚಿನಂತೆ ತೆರೆಯ ಮೇಲೆ ಬಂದು, ಹೆಮ್ಮರವಾಗಿ, ಕೋಟ್ಯಂತರ ಜನರಿಗೆ ನೆರಳಾಗಿದ್ದನ್ನು ಹತ್ತಿರದಿಂದ ನೋಡಿದ ನಾನೇ ಪುನೀತ. ನಿನ್ನನ್ನು ಎತ್ತಿ ಆಡಿಸಿದ ಅಣ್ಣನಾಗಿ, ನಿನ್ನ ಜೊತೆ ಕೂಡಿ ಆಡಿದ ಸ್ನೇಹಿತನಾಗಿ,
ನಿನ್ನ ಕೆಲಸವನ್ನು ಮೆಚ್ಚಿ ಅಪ್ಪಿಕೊಂಡ ಕನ್ನಡಿಗನಾಗಿ, ಹಬ್ಬ ಯಾವುದೇ ಇದ್ದರೂ ನಿನ್ನ ಹೆಸರಿನಲ್ಲಿ ಪಟಾಕಿ ಹಚ್ಚುವ ನಿನ್ನ ಅಭಿಮಾನಿಗಳಲ್ಲಿ ಒಬ್ಬನಾಗಿ ಹೇಳುತ್ತಾ ಇದ್ದೀನಿ, ನೀನು ಹುಟ್ಟಿದ್ದೆ ಒಂದು ಉತ್ಸವ ನೀನು ಬೆಳೆದದ್ದು ಇತಿಹಾಸ, ನಿನ್ನ ಜೀವನ ಒಂದು ದಂತಕಥೆ, ನಿನ್ನ ನೆನಪುಗಳು ಎಂದಿಗೂ ಅಮರ ಹುಟ್ಟುಹಬ್ಬದ ಶುಭಾಶಯಗಳು ಅಪ್ಪು ಎಂದು ಶಿವಣ್ಣ ಅವರು ಬರೆದುಕೊಂಡಿದ್ದಾರೆ.