ಅಪ್ಪು ಸಮಾ-ಧಿ ಮುಂದೆ ನಿಂತು ಕಣ್ಣೀರು ಹಾಕಿದ ಅಶ್ವಿನಿ ಮೇಡಂ! ಪತಿಯ ಬಗ್ಗೆ ಹೇಳಿದ್ದೇನು ನೋಡಿ ವಿಡಿಯೋ?…

curious

ನೆನ್ನೆ ಮಾರ್ಚ್ 17 ರಂದು ಪುನೀತ್ ರಾಜಕುಮಾರ್ ಅವರ ಜನ್ಮದಿನದ ಪ್ರಯುಕ್ತ ಅವರ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಅಪ್ಪು ಅವರ ಫೋಟೋ ಹಾಗು ವಿಡಿಯೋಗಳನ್ನು ಹಂಚಿಕೊಂಡು ಅವರ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿದ್ದರು. ಅಪ್ಪು ಅವರ ಅಭಿಮಾನಿಗಳ ಜೊತೆಗೆ ಕನ್ನಡ ಸಿನಿಮಾರಂಗದ ಅನೇಕ ಕಲಾವಿದರು,

ಮಾತ್ರವಲ್ಲದೆ ಬೇರೆ ಭಾಷೆಯ ಕಲಾವಿದರು ಸಹ ಅಪ್ಪು ಅವರ ಹುಟ್ಟುಹಬ್ಬಕ್ಕೆ ಸೋಶಿಯಲ್ ಮೀಡಿಯಾದ ಮುಖಾಂತರ ಶುಭಾಶಯಗಳನ್ನು ತಿಳಿಸಿದ್ದರು. ಅಪ್ಪು ಇಂದು ನಮ್ಮನ್ನೆಲ್ಲ ಬಿಟ್ಟು ಬಾರದ ಲೋಕಕ್ಕೆ ಹೋಗಿದ್ದಾರೆ ಆದರೆ ಅವರು ನಮ್ಮ ಜೊತೆಗೆ ಸಿನಿಮಾಗಳ ಮೂಲಕ ಸದಾ ನಮ್ಮ ಮನಸ್ಸಿನಲ್ಲಿ ಇರುತ್ತಾರೆ.

ಅಪ್ಪು ಎಂದ ತಕ್ಷಣ ಅವರು ಮಾಡಿರುವ ಹಲವಾರು ಸಮಾಜಿಮುಕಿ ಕಾರ್ಯಗಳು ನಮ್ಮ ಕಣ್ಣೆದುರು ಬರುತ್ತದೆ. ಅಪ್ಪು ಹೋದ ನಂತರ ಅದೆಷ್ಟೋ ಮನೆಗಳಲ್ಲಿ ಇಂದಿಗೂ ಸಹ ದೀಪ ಬೆಳಗುತ್ತಿಲ್ಲ. ಅಪ್ಪು ಹೋದ ನಂತರ ನಮ್ಮ ಮನೆಯಲ್ಲಿ ದೀಪ ಹಾರಿಹೋಯಿತು ಎಂದು ಅದೆಷ್ಟೋ ಜನರು ಕಣ್ಣೀರು ಹಾಕುತ್ತಿದ್ದಾರೆ.

ಅಭಿಮಾನಿಗಳಿಗೆ ಇಷ್ಟು ದುಃಖವಾಗುತ್ತಿದ್ದರೆ, ಇನ್ನು ಅವರನ್ನು ಪ್ರೀತಿಸಿ ಅವರ ಜೊತೆಗೆ ತಮ್ಮ ಜೀವನ ಕಳೆಯಬೇಕು ಎಂದು ಸಾಕಷ್ಟು ಆಸೆ ಇಟ್ಟುಕೊಂಡಿದ್ದ ಅಶ್ವಿನಿ ಅವರ ಪರಿಸ್ಥಿತಿ ಇನ್ನು ಹೇಗೆ ಇರಬಹುದು ಎನ್ನುವುದನ್ನು ಯೋಚಿಸಲು ಸಹ ಸಾಧ್ಯವಿಲ್ಲ. ಇಂದಿಗೂ ಸಹ ಅಶ್ವಿನಿಯವರು ಅಪ್ಪು ಅವರ ನೆನಪಿನಲ್ಲಿ ಪ್ರತಿದಿನ ಕಣ್ಣೀರು ಹಾಕುತ್ತಿದ್ದಾರೆ.

ಇನ್ನು ಇದೀಗ ಅಪ್ಪು ಅವರ ಹುಟ್ಟುಹಬ್ಬಕ್ಕೆ ರಾಜ್ಯಾದ್ಯಂತ ಅವರ ಅಭಿಮಾನಿಗಳು ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಕೈಗೊಂಡಿದ್ದಾರೆ. ಇನ್ನು ಅಪ್ಪು ಅವರ ಹುಟ್ಟುಹಬ್ಬಕ್ಕೆ ಅಶ್ವಿನಿಯವರ ತಮ್ಮ ಕುಟುಂಬಸ್ಥರ ಜೊತೆ ಸೇರಿ ಅಪ್ಪು ಅವರ ಸಮಾಧಿಯ ಬಳಿ ಬಂದು ಅವರಿಗೆ ಪೂಜೆ ಸಲ್ಲಿಸಿ ಅವರನ್ನು ನೆನೆದು ಕಣ್ಣೀರು ಹಾಕಿದ್ದಾರೆ.

ಇನ್ನು ಅಶ್ವಿನಿ ಪುನೀತ್ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಇದೀಗ ಅಪ್ಪು ಅವರ ಹುಟ್ಟುಹಬ್ಬಕ್ಕೆ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅಪ್ಪು ಅವರ ಚಿಕ್ಕ ವಯಸ್ಸಿನಿಂದ ಅವರ ಅನೇಕ ಫೋಟೋಗಳು ಒಳಗೊಂಡಿದೆ. ಸದ್ಯ ಈ ಫೋಟೋಗಳಿರುವ ವಿಡಿಯೋವನ್ನು ಅಶ್ವಿನಿ ಅವರು ಹಂಚಿಕೊಂಡಿದ್ದು,

ಅಪ್ಪು ನಮ್ಮ ಮನಸ್ಸಿನಲ್ಲಿ ಸದಾ ಇರುತ್ತಾರೆ ಎಂದು ಬರೆದುಕೊಂಡಿದ್ದಾರೆ. ಇನ್ನು ಈ ವಿಡಿಯೋ ನೋಡಿದ ಪ್ರತಿಯೊಬ್ಬರು ಸಹ ಭಾವುಕರಾಗಿದ್ದು, ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…

Leave a Reply

Your email address will not be published. Required fields are marked *