ಅಗ್ನಿಸಾಕ್ಷಿ ಧಾರಾವಾಹಿಯ ಚಂದ್ರಿಕಾ ಪಾತ್ರದ ಮೂಲಕ ಸಣ್ಣ ಪರದೆಯ ಪ್ರೇಕ್ಷಕರ ಹೃದಯದಲ್ಲಿ ಸ್ಥಾನ ಪಡೆದ ಪ್ರಿಯಾಂಕಾ ಶಿವಣ್ಣ ಅವರು ನಂತರ ಬಿಗ್ಬಾಸ್ ಮೂಲಕ ಇನ್ನಷ್ಟು ಖ್ಯಾತಿ ಪಡೆದರು. ಇದೀಗ ಅವರು ಬೆಳ್ಳಿತೆರೆಯ ಮೇಲೂ ಮೋಡಿ ಮಾಡಲು ರೆಡಿ ಆಗಿದ್ದಾರೆ. ಫ್ಯಾಂಟಸಿ ಎಂಬ ಚಿತ್ರದ ಮೂಲಕ ಅವರು ತೆರೆ ಮೇಲೆ ಬರಲಿದ್ದಾರೆ. ಮತ್ತು ಇದು ಸೈಕಲಾಜಿಕಲ್ ಥ್ರಿಲ್ಲರ್ ಎಂದು ಹೇಳಲಾಗುತ್ತದೆ ಮತ್ತು ಇದು ಕೊಲೆ ರಹಸ್ಯದ ಸುತ್ತ ಸುತ್ತುತ್ತದೆ.
ನಿನ್ನೆ ಅಷ್ಟೇ ಚಿತ್ರದ ಟ್ರೈಲರ್ ಬಿಡುಗಡೆ ಆಗಿದೆ. ಹೀಗಾಗಿ ಚಿತ್ರತಂಡ ಪ್ರೆಸ್ ಮೀಟ್ ಆಯೋಜಿಸಿತ್ತು. ಚಿತ್ರದ ಕುರಿತು ಮಾತನಾಡಿದ ಪ್ರಿಯಾಂಕ ಒಂದೊಳ್ಳೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ವೀಕ್ಷಕರ ಇಷ್ಟ ಪಡುವ ಸಾಕಷ್ಟು ಅಂಶಗಳು ಚಿತ್ರದಲ್ಲಿವೆ ಎಂದರು. ತಮ್ಮ ಪಾತ್ರದ ಬಗ್ಗೆ ಮಾತನಾಡುವ ಪ್ರಿಯಾಂಕಾ, ‘ಬಿಗ್ಬಾಸ್ನಲ್ಲಿ ದಿನದೂಡಿದಂತೆ ಕೊರೊನಾದಲ್ಲಿಯೂ ಸಮಯ ಕಳೆದಿದ್ದೆವು.
ಖುಷಿ ವಿಚಾರವನ್ನು ಕೇಳಿ ತುಂಬ ದಿನ ಆಗಿತ್ತು. ಆಗ ಸಿಕ್ಕ ಸಿಹಿ ಸುದ್ದಿ ಈ ‘ಫ್ಯಾಂಟಸಿ’ ಸಿನಿಮಾ. ಇದು ನನ್ನ ಮೊದಲ ಸಿನಿಮಾವಾದರೂ, ಧಾರಾವಾಹಿಯಂತೆ ಇಲ್ಲಿಯು ನೆಗೆಟಿವ್ ಪಾತ್ರ ಮಾಡಿದ್ದೇನೆ’ ಎಂದು ಹೇಳುತ್ತಾರೆ. ಚಿತ್ರ ನಿರ್ಮಾಪಕರ ಜೊತೆ ಕೆಲಸ ಮಾಡಿರುವ ಚೊಚ್ಚಲ ಚಿತ್ರ ನಿರ್ಮಾಪಕ ಪವನ್ ಕುಮಾರ್ ಆರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಪವನ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ.
ತಾರಾಗಣದಲ್ಲಿ ಮುಂಚೂಣಿಯಲ್ಲಿರುವ ಪ್ರಿಯಾಂಕಾ ಅವರು ಬೂದುಬಣ್ಣದ ಬಹು ಛಾಯೆಗಳ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಪ್ರಿಯಾಂಕಾ ನಟಿಸಲಿರುವ ಈ ಸಿನಿಮಾದ ಹೆಸರು ‘ಫ್ಯಾಂಟಸಿ’. ಸೈಕಲಾಜಿಕಲ್ ಥ್ರಿಲ್ಲರ್ ಮಾದರಿಯ ಈ ಸಿನಿಮಾವನ್ನು ನಿರ್ದೇಶನ ಮಾಡಿರುವುದು ಆರ್. ಪವನ್ ಕುಮಾರ್. ವಿಶೇಷವೆಂದರೆ, ಈ ಸಿನಿಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆಯವುದರ ಜೊತೆಗೆ ನಿರ್ಮಾಣವನ್ನೂ ಮಾಡಿದ್ದಾರೆ.
‘ಡ್ರಾಮಾ ಜ್ಯೂನಿಯರ್ಸ್’ ಸೀಸನ್ 3ರಲ್ಲಿ ಅಂತಿಮ ಹಂತ ತಲುಪಿದ್ದ ಸ್ಪರ್ಧಿ ಅನುರಾಗ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇಡೀ ಕಥೆ ಅನುರಾಗ್ ಮತ್ತು ಪ್ರಿಯಾಂಕಾ ಅವರ ಸುತ್ತವೇ ಸಾಗಲಿದೆಯಂತೆ. ನಿರ್ದೇಶಕ ಗುರು ದೇಶಪಾಂಡೆ ಅವರ ‘ಸಂಹಾರ’ ಚಿತ್ರದ ಮೂಲಕ ಸಹಾಯಕ ನಿರ್ದೇಶಕರಾಗಿ ಚಂದನವನಕ್ಕೆ ಬಂದ ಪವನ್, ‘ಅಮ್ಮ ಐ ಲವ್ ಯೂ’, ‘ಆದ್ಯಾ’ ಸಿನಿಮಾಗಳಲ್ಲಿ ನಿರ್ದೇಶಕ ಕೆ.ಎಂ. ಚೈತನ್ಯ ಅವರೊಂದಿಗೂ ಕೆಲಸ ಮಾಡಿದ್ದಾರೆ.
‘ನಾನು ಸಿನಿಮಾರಂಗಕ್ಕೆ ಬರುವುದಕ್ಕೆ ಚಿರಂಜೀವಿ ಸರ್ಜಾ ಅವರೇ ಕಾರಣ. ನಿರ್ದೇಶನದ ಪಾಠವನ್ನು ಕೆ.ಎಂ. ಚೈತನ್ಯ ಅವರಿಂದ ಕಲಿತಿದ್ದೇನೆ. ಇಂಜಿನಿಯರಿಂಗ್ ಅರ್ಧಕ್ಕೆ ಬಿಟ್ಟು, ಸಿನಿಮಾ ಬೆನ್ನಹಿಂದೆ ಬಿದ್ದೆ. ಅಪ್ಪ-ಅಮ್ಮನಿಂದಲೂ ಸಾಥ್ ಸಿಕ್ಕಿತು. ಒಳ್ಳೇ ಕಥೆಯೂ ಸಿದ್ಧವಾಯ್ತು. ನಾನೇ ನಿರ್ಮಾಣ ಮಾಡುವ ಬಗ್ಗೆ ನಿರ್ಧರಿಸಿ ಕೆಲಸ ಆರಂಭಿಸಿದೆ’ ಎಂದು ಸಿನಿಮಾ ಶುರುವಾಗಿದ್ದರ ಬಗ್ಗೆ ಹೇಳಿಕೊಳ್ಳುತ್ತಾರೆ ಅವರು.
ಇದೊಂದು ಥ್ರಿಲ್ಲರ್ ಶೈಲಿಯ ಸಿನಿಮಾ. ಚಿತ್ರದ ಶೇ. 90 ಭಾಗ ಒಳಾಂಗಣದಲ್ಲಿ ನಡೆದರೆ, ಇನ್ನು ಶೇ. 10 ಹೊರಾಂಗಣದಲ್ಲಿ ಶೂಟ್ ಮಾಡಿದ್ದೇವೆ’ ಎನ್ನುತ್ತಾರೆ ಪವನ್. ‘ಫ್ಯಾಂಟಸಿ’ಗೆ ಛಾಯಾಗ್ರಹಣವನ್ನು ಪಿ.ಕೆ.ಎಚ್. ದಾಸ್ ಮಾಡಿದ್ದಾರೆ. ಗಣೇಶ್ ನಾರಾಯಣ್ ಸಂಗೀತ ನೀಡಿದ್ದು, ಶಶಿರಾಮ್ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ.
ಕೆಳಗೆ ಕಾಣುವ ಲೈಕ್ ಬಟನ್ ಒತ್ತಿ.