ಇಂದಿನ ಕಾಲದಲ್ಲಿ ಹೆಣ್ಣು ಮಕ್ಕಳನ್ನು ಜಾಸ್ತಿ ಓದುವುದಕ್ಕೆ ಬಿಡುತ್ತಿರಲಿಲ್ಲ. ಆಕೆ ವಯಸ್ಸಿಗೆ ಬಂದ ತಕ್ಷಣ ಆಕೆಗೆ ಹುಡುಗನನ್ನು ನೋಡಿ ಮದುವೆ ಮಾಡಿ ತಮ್ಮ ಜವಾಬ್ದಾರಿಯನ್ನು ಕಡಿಮೆ ಮಾಡಿಕೊಳ್ಳುವ ಆಲೋಚನೆಯಲ್ಲಿ ಇರುತ್ತಿದ್ದರು ಪೋಷಕರು. ಇದೀಗ ಕಾಲ ಬಹಳ ಬದಲಾಗಿದೆ.
ಮೊದಲೆಲ್ಲ ಹೆಣ್ಣು ಮಕ್ಕಳಿಗೆ ತಮ್ಮ ಜೀವನದ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಅವಕಾಶ ನೀಡುತ್ತಿರಲಿಲ್ಲ. ಆದರೆ ಇದೀಗ ಹೆಣ್ಣು ಸಹ ನಾನು ಇಷ್ಟಪಡುವಂತೆ ಬದುಕುವ ಅವಕಾಶ ಸರ್ಕಾರ ಮಾಡಿಕೊಟ್ಟಿದೆ. ಇನ್ನು ಹೆಣ್ಣು ಮಕ್ಕಳಿಗೆ ಎಲ್ಲಾ ಫೀಲ್ಡಲ್ಲಿ ಸಹ ಅವಕಾಶಗಳನ್ನು ಸರ್ಕಾರ ಮಾಡಿಕೊಟ್ಟಿದೆ.
ಇನ್ನು ಈಗಿನ ಕಾಲದ ಹೆಣ್ಣು ಮಕ್ಕಳು ಯಾವುದೇ ಕೆಲಸ ತಮಗೆ ಬರುವುದಿಲ್ಲ ಎಂದು ಹೇಳುವುದಿಲ್ಲ. ಎಲ್ಲಾ ಹುದ್ದೆಗಳನ್ನು ಸಹ ನಿಭಾಯಿಸುವ ಶಕ್ತಿ ಹೊಂದಿದ್ದಾರೆ ಹೆಣ್ಣು ಮಕ್ಕಳು. ಯಾವುದೇ ಕೆಲಸ ಕೊಟ್ಟರು ಅದನ್ನು ಚಾಚು ತಪ್ಪದೆ ಯಶಸ್ವಿಯಾಗಿ ಮಾಡಿ ಮುಗಿಸುವ ಸಾಮರ್ಥ್ಯ ಹೊಂದಿದ್ದಾರೆ.
ಹೆಣ್ಣು ಮಗಳಾಗಿ ಮಡದಿಯಾಗಿ ತಾಯಿಯಾಗಿ ಮಾತ್ರವಲ್ಲದೆ ಈಗಿನ ಕಾಲದಲ್ಲಿ ತನ್ನ ಮನೆಯಿಂದ ಹೊರಗೆ ಹೋಗಿ ದುಡಿದು ತನ್ನ ಕುಟುಂಬವನ್ನು ಸಾಕುವ ಸಾಮರ್ಥ್ಯ ಹೊಂದಿದ್ದಾಳೆ. ಟೈಲರಿಂಗ್ ಕೆಲಸದಿಂದ ಹಿಡಿದು ಪೊಲೀಸ್ ಆಗಿ ಕಳ್ಳರನ್ನು ಹಿಡಿದು ಮಟ್ಟ ಹಾಕುವವರೆಗೂ ಹೆಣ್ಣು ಎಲ್ಲದರಲ್ಲೂ ಮುಂದಿದ್ದಾಳೆ.
ಇನ್ನು ಪುರುಷರಿಗಿಂತ ಇದೀಗ ಹೆಣ್ಣು ಮಕ್ಕಳೇ ಎಲ್ಲದರಲ್ಲೂ ಮುಂದಿದ್ದಾರೆ. ಇನ್ನು ಕೆಲವು ಹೆಣ್ಣು ಮಕ್ಕಳಿಗೆ ಸೇವೆನ್ ಸರ್ವಿಸ್ ಗೆ ಸೇರುವ ಆಸೆ ಇರುತ್ತದೆ. ಇನ್ನು ಇದಕ್ಕೆ ಸೇರಲು ಪ್ರತಿಯೊಬ್ಬರು ಯುಪಿಎಸ್ಸಿ ಪರೀಕ್ಷೆಯನ್ನು ಪಾಸ್ ಮಾಡಬೇಕಾಗಿರುತ್ತದೆ. ಯುಪಿಎಸ್ಸಿ ಪರೀಕ್ಷೆ ಅಷ್ಟು ಸುಲಭವಾಗಿರುವುದಿಲ್ಲ.
ಈ ಪರೀಕ್ಷೆಯಲ್ಲಿ ಕೇಳುವ ಪ್ರಶ್ನೆಗಳು ಬಹಳ ಕಠಿಣವಾಗಿರುತ್ತದೆ. ಇನ್ನು ಇದೀಗ ಯುಪಿಎಸ್ಸಿ ಪರೀಕ್ಷೆ ವೇಳೆ ಒಬ್ಬ ಮಹಿಳೆಗೆ ಹೆಣ್ಣು ಮಕ್ಕಳ ಶರ್ಟ್ಗೆ ಪಾಕೆಟ್ ಇರುವುದಿಲ್ಲ ಏಕೆ ಎನ್ನುವ ಪ್ರಶ್ನೆಯನ್ನು ಕೇಳಲಾಗಿದೆ. ಇನ್ನು ಈ ಪ್ರಶ್ನೆ ಕೇಳಿದ ಆ ಮಹಿಳೆ ನಿಧಾನವಾಗಿ ಯೋಚಿಸಿ ಉತ್ತರ ನೀಡಿದ್ದಾಳೆ.
ಹೆಣ್ಣು ಮಕ್ಕಳ ಶರ್ಟ್ ನಲ್ಲಿ ಪಾಕೆಟ್ ಇದ್ದರೂ ಸಹ ಅದರಲ್ಲಿ ಬೇರೆ ಯಾವುದೇ ವಸ್ತು ಇಡುವಂತಿಲ್ಲ. ಇದರಿಂದ ಆಕೆಯ ಸೌಂದರ್ಯ ಹಾಳಾಗಬಹುದು ಎನ್ನುವ ಯೋಚನೆಯಿಂದ ಈ ರೀತಿ ಮಾಡಲಾಗಿದೆ ಎಂದು ಅಭ್ಯರ್ಥಿನಿ ಸಮಾಧಾನವಾಗಿ ಉತ್ತರಿಸಿದ್ದಾಳೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ..