ಕಿರುತೆರೆಯ ದೊಡ್ಮನೆ ಕಾರ್ಯಕ್ರಮದ ಚಂದನದ ಗೊಂಬೆ ನಿವೇದಿತಾ ಗೌಡ ಮತ್ತೆ ಕನ್ನಡದ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಸದ್ಯ ಕಾಸಗಿ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಗಿಚ್ಚಿಗಿಲಿಗಿಲಿ ಕಾರ್ಯಕ್ರಮದಲ್ಲಿ ನಿವೇದಿತಾ ಮಾತನಾಡಿರುವ ಈ ಮಾತು ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಸಂಚಲನ ಮೂಡಿಸುತ್ತಿದೆ.
ನಿವೇದಿತಾ ಗೌಡ ಸದ್ಯ ಸಿನಿಮಾಗಳಲ್ಲಿ ನಟಿಸಲು ತೆರೆ ಮರೆಯಲ್ಲಿ ಅದಕ್ಕೆ ಬೇಕಾದ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇನ್ನೊಂದು ಕಡೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಿಚ್ಚಿಗಿಲಿಗಿಲಿ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಸಹ ಕಾಣಿಸಿಕೊಳ್ಳುತ್ತಿದ್ದಾರೆ.
ಈ ವಾರಾಂತ್ಯದಲ್ಲಿ ಪ್ರಸಾರವಾದ ಪ್ರೊಮೋ ಸದ್ಯ ನೆಟ್ಟಿಗರ ಘಮನ ಸೆಳೆಯುತ್ತಿದೆ. ಇದೀಗ ಗಿಚ್ಚಿಗಿಲಿ ಗಿಲಿ ಕಾರ್ಯಕ್ರಮಕ್ಕೆ ಚಂದನ್ ಶೆಟ್ಟಿ ಅತಿಥಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ ಕಾರ್ಯಕ್ರಮದ ನಿರೂಪಕ ನಿರಂಜನ್ ದೇಶಪಾಂಡೆ ಚಂದನ್ ಅವರಿಗೆ ನಿಮ್ಮ ಪಾದ ಪೂಜೆ ಇನ್ನು ನಡೆದಿಲ್ವಾ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಉತ್ತರಿಸಿದ ನಟ ಚಂದನ್ ಇಲ್ಲ ಇನ್ನು ಆಗಿಲ್ಲ ಎಂದಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿದ ನಟಿ ನಿವೇದಿತಾ ಮನೆಗೆ ಹೋದ ಮೇಲೆ ಭೀಮನ ಅಮಮಾಸೆ, ಅವಮಾಸೆ ಮಾಡುತ್ತೇನೆ ಎಂದು ಪದ ಬಳಿಕೆ ಮಾಡಿದ್ದಾರೆ. ಇನ್ನು ನಟಿ ಶೃತಿ ಈ ಪೂಜೆ ಆಚರಣೆಯನ್ನು ನಿನಗೆ ಕೇಳಿದ್ದಾರೆ.
ತಟ್ಟೆ ಇಟ್ಟು, ತಟ್ಟೆಯಲ್ಲಿ ಕಾಲಿಟ್ಟು ನೀರು ಹಾಕಿ ಉಜ್ಜಬೇಕು ಎಂದಿದ್ದಾರೆ ನಟಿ ಶೃತಿ. ನಿವೇದಿತಾ ಗೌಡ ಅವರ ಈ ಮಾತುಗಳು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದೆ. ಒಂದು ಕಡೆ ನಿವೇದಿತಾ ಅವರ ಮಾತನ್ನು ಕೆಲವರು ತಮಾಷೆಯಾಗಿ ತೆಗೆದುಕೊಂಡರೆ, ಇನ್ನು ಕೆಲವರು ನಿವೇದಿತಾರ ಮೇಲೆ ಗರಂ ಆಗಿದ್ದಾರೆ.
ಹೌದು ನಟಿ ನಿವೇದಿತಾ ಅವರ ಮಾತುಗಳನ್ನು ಕೇಳಿ ಕೆಲ ನೆಟ್ಟಿಗರು ನಿವೇದಿತಾರನ್ನು ಸೋಷಿಯಲ್ ಮೀಡಿಯಾದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ನಿವೇದಿತಾರನ್ನು ಮತ್ತೆ ಟ್ರೋಲ್ ಮಾಡುತ್ತಾ ಅವರ ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ ನೆಟ್ಟಿಗರು. ಇನ್ನು ಇದಕ್ಕೆ ನಿವೇದಿತಾ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾಡುನೀಡಬೇಕಿದೆ.
ನಿವೇದಿತಾ ಗೌಡ ಇತ್ತೀಚೆಗೆ ಮಿಸಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈ ಸ್ಪರ್ಧೆಗೆ ಬೇಕಾದ ಎಲ್ಲಾ ತಯಾರಿಗಳನ್ನು ನಟಿ ಮುಂಚಿತವಾಗಿಯೇ ಮಾಡಿಕೊಂಡಿದ್ದರು. ಇನ್ನು ಜನರ ಆಯ್ಕೆಯ ವಿಭಾಗದಲ್ಲಿ ನಟಿ ನಿವೇದಿತಾ ಗೌಡ ಗೆದ್ದಿದ್ದು, ಮಿಸೆಸ್ ಇಂಡಿಯಾ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಇನ್ನು ಮಿಸೆಸ್ ಇಂಡಿಯಾ ಪಟ್ಟ ಗೆದ್ದ ನಂತರ ನಟಿ ನಿವೇದಿತಾ ಅವರ ಕ್ರೇಜ್ ಇನ್ನಷ್ಟು ಹೆಚ್ಚಾಗಿದೆ. ಇದೀಗ ನಿವೇದಿತಾ ಅವರಿಗೆ ಬೇರೆ ಭಾಷೆಗಳಿಂದ ಆಫ್ಹರ್ಗಳು ಬರುತ್ತಿದ್ದು, ನಟಿ ತೆಲುಗಿನ ಒಂದು ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಲ್ಲಿದ್ದಾರೆ ಎನ್ನುವ ಮಾತುಗಳು ಸಹ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತವಾದ ಮಾಹಿತಿ ದೊರೆಕಿಲ್ಲ.