ಟಿಕ್ ಟಾಕ್ ಹಾಗೂ ಸೋಷಿಯಲ್ ಮಿಡಿಯಾದಲ್ಲಿ ಬಹಳ ಖ್ಯಾತಿ ಪಡೆದ ಸೋನು ಶ್ರೀನಿವಾಸ್ ಗೌಡ ಅವರು ಬಿಗ್ ಬಾಸ್ ಓಟಿಟಿ ಕನ್ನಡ ಸೀಸನ್ 1ಗೆ ಎಂಟ್ರಿ ನೀಡಿದ್ದಾರೆ. ಸೋನು ಶ್ರೀನಿವಾಸ್ ಗೌಡ ಅವರ ಎಂಟ್ರಿ ಬಗ್ಗೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ.
ಕೆಲವರು ಸೋನು ಶ್ರೀನಿವಾಸ್ ಗೌಡ ಅವರ ಎಂಟ್ರಿ ಬಗ್ಗೆ ಅಪಸ್ಪರ ಎತ್ತಿದ್ದಾರೆ. ಅವರು ಮೊದಲ ವಾರವೇ ಹೊರ ಬೀಳಲಿದ್ದಾರೆ ಎನ್ನುವ ಮಾತುಗಳನ್ನು ಕೆಲವರು ಆಡುತ್ತಿದ್ದಾರೆ. ಈಗ ಸೋನು ಶ್ರೀನಿವಾಸ್ ಗೌಡ ಅವರು ನೇರ ಮಾತಿನಿಂದ ಬಿಗ್ ಬಾಸ್ ಮನೆಯಲ್ಲಿ ಘಮನ ಸೆಳೆಯುತ್ತಿದ್ದಾರೆ.
ಬಿಗ್ ಬಾಸ್ ಓಟಿಟಿ ಎರಡನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟವರು ಸೋನು ಶ್ರೀನಿವಾಸ್ ಗೌಡ. ಸೋಷಿಯಲ್ ಮಿಡಿಯಾದಲ್ಲಿ ಸಕತ್ ಆಕ್ಟಿವ್ ಆಗಿರುವ ಇವರ ಇನ್ಸ್ಟಾಗ್ರಾಮ್ ನಲ್ಲಿ ಸಾಕಷ್ಟು ಫಾಲೋವರ್ಸ್ ಅನ್ನು ಹೊಂದಿದ್ದಾರೆ.
ಇನ್ನು ಇದೀಗ ಸೋನು ಶ್ರೀನಿವಾಸ್ ಗೌಡ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡುವ ಮೂಲಕ ಸಾಕಷ್ಟು ಚರ್ಚೆ ಹುಟ್ಟುಹಾಕಿದ್ದಾರೆ. ಸೋನು ಅವರ ಕಾಸಗಿ ಫೋಟೋಗಳು ಈ ಮೊದಲು ಲೀಕ್ ಆಗಿದ್ದವು, ಆ ಫೋಟೋಗಳು ತಮ್ಮದಲ್ಲ ಎಂದೇ ಸೋನು ಅವರು ಹೇಳುತ್ತಾ ಬಂದಿದ್ದಾರೆ.
ಇದೀಗ ಸೋನು ಶ್ರೀನಿವಾಸ್ ಗೌಡ ಬಿಗ್ ಬಾಸ್ ಓಟಿಟಿ ಮನೆಯಲ್ಲಿ ತಮ್ಮ ನೇರ ಮಾತಿನ ಮೂಲಕ ಘಮನ ಸೆಳೆಯುತ್ತಿದ್ದಾರೆ. ಹೌದು ಬಿಗ್ ಬಾಸ್ ಮನೆಯಲ್ಲಿ ಸ್ಮೋಕಿಂಗ್ ವಿಚಾರದ ಬಗ್ಗೆ ಮಾತುಗಳು ಶುರುವಾದವು, ಬಿಗ್ ಬಾಸ್ ಮನೆಯ ಸ್ಪರ್ಧಿಯಾದ ನಟ ರೂಪೇಶ್ ಅವರು ನಾನು ಸ್ಮೋಕ್ ಮಾಡಲ್ಲ ಎಂದರು.
ಇದಕ್ಕೆ ಸೋನು ಶ್ರೀನಿವಾಸ್ ಗೌಡ, ನೀವು ಸ್ಮೋಕ್ ಮಾಡೋದಿಲ್ವಾ, ನಾನ್ ಮಾಡ್ತೀನಿ. ನೀವು ಸಿಗರೇಟ್ ಸೆಧ್ತ್ತೀರಾ ಎಂದು ಆಶ್ಚರ್ಯ ರೀತಿಯಲ್ಲಿ ಕೇಳಿದರು ನಟ ರೂಪೇಶ್. ನಾನು ಸಿಗರೇಟ್ ಸೆಧ್ತ್ತೇನೆ ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನೆ ಮಾಡಿದ್ದಾರೆ ಸೋನು ಶ್ರೀನಿವಾಸ್ ಗೌಡ.
ಈ ಬಾರಿ ಬಿಗ್ ಬಾಸ್ ಸೀಸನ್ ಅನ್ನ ಓಟಿಟಿಯಲ್ಲಿ ಮಾತ್ರ ವೀಕ್ಷಿಸಬಹುದು, ವೂಟ್ ಆಪ್ ನ ಚಂದದಾರರಾಗಿದರೆ ಮಾತ್ರ ಬಿಗ್ ಬಾಸ್ ಓಟಿಟಿ ವೀಕ್ಷಣೆ ಸದ್ಯ ಇಲ್ಲವಾದರೆ, ನೀವು ಬಿಗ್ ಬಾಸ್ ನೋಡಲು ಆಗುವುದಿಲ್ಲ.
ದಿನದ 24 ಗಂಟೆ ವೂಟ್ ಆಪ್ ನಲ್ಲಿ ಲೈವ್ ವೀಕ್ಷಣೆ ಮಾಡಬಹುದು. ಇದರ ಜೊತೆಗೆ ನಿತ್ಯ ಏನೇನು ಆಯ್ತು ಎಂಬುದನ್ನ ಒಂದು ಅಥವಾ ಒಂದೂವರೆ ಗಂಟೆ ಸಂಚಿಕೆ ಮೂಲಕ ಪ್ರೇಕ್ಷಕರ ಎದುರು ಇಡಲಾಗುತ್ತದೆ. ಈ ಸಂಚಿಕೆ ಪ್ರಸಾರದ ಸಮಯ ಇನ್ನಷ್ಟೇ ನಿಗಡಿಯಾಗಬೇಕಿದೆ. ಇನ್ನು ಸೋನು ಶ್ರೀನಿವಾಸ್ ಗೌಡ ಅವರು ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟಿರುವುದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.