ಸ್ಯಾಂಡಲ್ವುಡ್ ನಟಿ ಮೇಘನಾ ರಾಜ್ ಅವರು ಇದೀಗ ತಮ್ಮ ಮಗ ರಾಯನ್ ರಾಜ್ ಸರ್ಜಾ ಜೊತೆ ಸಂತೋಷದ ಜೀವನ ಕಳೆಯುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಸಕತ್ ಆಕ್ಟಿವ್ ಆಗಿರುವ ನಟಿ ಮೇಘನಾ ರಾಜ್ ಆಗಾಗ ತಮ್ಮ ಮಗನ ಜೊತೆಗಿನ ಫೋಟೋ ಮತ್ತು ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ.
ತಮ್ಮ ಅಭಿಮಾನಿಗಳ ಜೊತೆ ನಟಿ ಮೇಘನಾ ರಾಜ್ ಸೋಷಿಯಲ್ ಮಿಡಿಯಾದ ಮುಕಾಂತರ ಸಂಪರ್ಕದಲ್ಲಿ ಇದ್ದೆ ಇರುತ್ತಾರೆ. ಇದೀಗ ರಾಯನ್ ಗಾಗಿ ಕೇರಳದಿಂದ ವಿಶೇಷ ಉಡುಗೊರೆ ಬಂದಿದೆ. ಹಾಗಾದರೆ ಉಡುಗೊರೆ ಏನು? ತಂದಿದ್ದು ಯಾರು ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೆವೆ, ಮುಂದಕ್ಕೆ ಓದಿ..
ಇದೀಗ ನಟಿ ಮೇಘನಾ ರಾಜ್ ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಪ್ರಾಣ ಸ್ನೇಹಿತೆ ಮಲಯಾಳಂ ನ ಖ್ಯಾತ ನಟಿ ನಜ್ರಿಯಾ ನಾಜಿಮ್ ಜೊತೆ ಕ್ಲಿಕ್ಕಿಸಿಕೊಂಡಿರುವ ಸೆಲ್ಫಿ ಹಂಚಿಕೊಂಡಿದ್ದರು. ಸದ್ಯ ಈ ಫೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ.
ಮೇಘನಾ ರಾಜ್ ಹಾಗೂ ನಜ್ರಿಯಾ ನಾಜಿಮ್ ಇಬ್ಬರೂ ಬಹಳ ಕಾಲದಿಂದ ತುಂಬಾ ಒಳ್ಳೆಯ ಸ್ನೇಹಿತೆಯರು. 2020 ರಲ್ಲಿ ಮೇಘನಾ ರಾಜ್ ತಮ್ಮ ಪತಿ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡಾಗ ನಟಿ ನಜ್ರಿಯಾ ನಾಜಿಮ್ ಮೇಘನಾ ಅವರಿಗೆ ಹೆಗಲಾಗಿ ನಿಂತಿದ್ದರಂತೆ.
ಮೇಘನ 5 ತಿಂಗಳ ಗರ್ಭಿಣಿ ಪತಿಯ ಅಗಲಿಕೆಯಿಂದ ತೀವ್ರ ಆಘಾತಕ್ಕೆ ಒಳಗಾಗಿದ್ದ ಮೇಘನಾ ಅವರನ್ನು ನಟಿ ನಜ್ರಿಯಾ ನಾಜಿಮ್ ಸಂತಯಿಸಿದ್ದರಂತೆ ಅದನ್ನು ಮರೆಯಲು ಸಹಕರಿಸಿದ್ರಂತೆ ಎಂದು ಸ್ವತಃ ಮೇಘನಾ ರಾಜ್ ಹೇಳಿದ್ದಾರೆ.
ಇನ್ನು ಇವರಿಬ್ಬರೂ ಸದ್ಯ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಮೇಘನಾ ರಾಜ್ ಅಭಿನಯದ ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಚಿತ್ರ ಸಾಕಷ್ಟು ಮೆಚ್ಚುಗೆ ಗಳಿಸಿದೆ ಮೌರ್ಯ ನಿರ್ದೇಶನದ ಬುದ್ಧಿವಂತ 2 ಚಿತ್ರದಲ್ಲೂ ಮೇಘನಾ ಅಭಿನಯಿಸಿದ್ದಾರೆ.
ಪನ್ನಾಗ ಬಣ್ಣ ನಿರ್ದೇಶನದ ಥ್ರಿಲ್ಲರ್ ಮೂವಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಇತ್ತೀಚಿಗೆ ಬೆಂಗಳೂರಿನ ಮೇಘನಾ ಅವರ ಮನೆಗೆ ಬಂದ ಸ್ನೇಹಿತೆ ನಜ್ರಿಯಾ ನಾಜಿಮ್, ಮಗ ರಾಯನ್ ಗಾಗಿ ಕೇರಳದಿಂದ ವಿಶೇಷ ರೀತಿಯ ಬಣ್ಣ ಬಣ್ಣದ ಆಟಿಕೆಗಳನ್ನು ತಂದಿದ್ದಾರೆ. ರಾಯನ್ ಅವುಗಳನ್ನು ನೋಡಿ ತುಂಬಾ ಖುಷಿಪಟ್ಟಿದ್ದಾನೆ. ನಿಮಗೂ ಮೇಘನ ರಾಯನ್ ಇಷ್ಟವೆಂದು ಆದರೆ ಕಮೆಂಟ್ ಮಾಡಿ ತಿಳಿಸಿ.