ಬಿಗ್ ಬಾಸ್ ಓಟಿಟಿ ಸೀಸನ್ ಒಂದರ ಮೊದಲ ಅಭ್ಯರ್ಥಿಯಾಗಿ ಆರ್ಯವರ್ಧನ್ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಿದ್ದಾರೆ. ದಕ್ಷಿಣ ಭಾರತ ಮೊದಲ ಬಿಗ್ ಬಾಸ್ ಓಟಿಟಿ ಸೀಸನ್ ಗೆ ಸಂಖ್ಯಾ ಶಾಸ್ತ್ರಜ್ಞ ಆರ್ಯವರ್ಧನ್ ಎಂಟ್ರಿ ಕೊಟ್ಟಿದ್ದು, ಮನೆಯನ್ನು ಒಂದು ಸುತ್ತು ರೌಂಡ್ ಹಾಕುತ್ತಿದ್ದಾರೆ.
ಬಿಗ್ ಬಾಸ್ ಆರಂಭ ಆಗುವುದಕ್ಕೂ ಮುನ್ನವೇ ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಭವಿಷ್ಯ ನುಡಿದಿದ್ದಾರೆ. ಇನ್ನು ಮೊದಲ ಸ್ಪರ್ಧಿಯಾಗಿ ವೇದಿಕೆಗೆ ಎಂಟ್ರಿ ಕೊಟ್ಟ ಆರ್ಯವರ್ಧನ್ ಅವರಿಗೆ ನಿರೂಪಕ ಕಿಚ್ಚ ಸುದೀಪ್ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಕಿಚ್ಚ ಸುದೀಪ್ ಕೇಳಿದ ಪ್ರಶ್ನೆಗೆ ಆರ್ಯವರ್ಧನ್ ಮನ ಬಿಚ್ಚಿ ಮಾತನಾಡಿದ್ದಾರೆ.
ಕಿಚ್ಚ ಸುದೀಪ್ ಬಳಿ ಮಾತನಾಡುತ್ತಾ ಆರ್ಯವರ್ಧನ್ ಗುರೂಜಿ ತಮ್ಮ ಕೆಲವು ಸೀಕ್ರೆಟ್ ಗಳನ್ನು ಸ್ಟೇಜ್ ಮೇಲೆ ಬಿಟ್ಟುಕೊಟ್ಟಿದ್ದಾರೆ. ಇನ್ನು ಮನೆಯೊಳಗೆ ಎಂಟ್ರಿ ಕೊಡುವ ಮುನ್ನ ಈ ಬಾರಿ ಯಾವ ಸ್ಪರ್ಧಿ ಯಾವ ನಂಬರ್ ಮೇಲೆ ಒಳಗೆ ಎಂಟ್ರಿ ಕೊಡುತ್ತಾರೋ ಅವರೇ ಈ ಬಾರಿಯ ಬಿಗ್ ಬಾಸ್ ಓಟಿಟಿ ವಿನ್ನರ್ ಆಗುತ್ತಾರೆ ಎಂದು ಆರ್ಯವರ್ಧನ್ ಗುರೂಜಿ ಭವಿಷ್ಯ ನುಡಿದ್ದಿದ್ದಾರೆ.
ಆರ್ಯವರ್ಧನ್ ಗುರೂಜಿ 3 ಸಂಖ್ಯೆಗಳನ್ನು ನೀಡಿದ್ದಾರೆ, ಈ ಮೂರು ಸಂಖ್ಯೆಗಳಲ್ಲಿ ಯಾವ ಸ್ಪರ್ಧಿ ಮನೆಗೆ ಎಂಟ್ರಿ ಕೊಡುತ್ತಾರೋ ಅವರೇ ಈ ಬಾರಿಯ ಬಿಗ್ ಬಾಸ್ ಸೀಸನ್ ಗೆಲ್ಲುತ್ತಾರೆ ಎಂದಿದ್ದಾರೆ. ಆ ಮೂರು ಸಂಖ್ಯೆಗಳಲ್ಲಿ ಅವರದ್ದೇ ಹೆಸರು ಕೊಟ್ಟಿದ್ದಾರೆ. ಆದರೆ ಅದಕ್ಕೆ ನಂಬರ್ ಕೊಟ್ಟಿಲ್ಲ.
ನಂಬರ್ ಎಂದರೆ ನಾನು, ನಾನು ಎಂದರೆ ನಂಬರ್ ಎನ್ನುತ್ತಿದ್ದ ಆರ್ಯವರ್ಧನ್ ಮೊದಲ ಹೆಜ್ಜೆಯಲ್ಲೇ ಹಿನ್ನೆಡೆ ಆಯ್ತು ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. ಆರ್ಯವರ್ಧನ್ ಕೊಟ್ಟ ಆ ಮೂರು ನಂಬರ್ ಗಳೆಂದರೆ, ಮೂರು, ಐದು ಮತ್ತು ಆರು. ಈ ಮೂರು ಕ್ರಮದಲ್ಲಿ ವೇದಿಕೆ ಮೇಲೆ ಏರುವವರು, ಈ ಬಾರಿ ಬಿಗ್ ಬಾಸ್ ಓಟಿಟಿ ಸೀಸನ್ ಗೆಲ್ಲುತ್ತಾರೆ ಎಂದು ಆರ್ಯವರ್ಧನ್ ಭವಿಷ್ಯ ನುಡಿದ್ದಿದ್ದಾರೆ.
ಇನ್ನು ಮೂರನೇ ಸಂಖ್ಯೆಯಲ್ಲಿ ವೇದಿಕೆ ಏರಿದ ಸ್ಪರ್ಧಿ ರೂಪೇಶ್ ಶೆಟ್ಟಿ, ಇವರು ತುಳು ಸಿನಿಮಾಗಳಲ್ಲಿ ನಟಿಸಿದ್ದಾರೆ, ಅಲ್ಲದೆ ಆರ್ ಜೆಯಾಗಿ ಕೂಡ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಐದನೇ ಅಭ್ಯರ್ಥಿಯಾಗಿ ಸಾನಿಯಾ ಗೌಡ ದೊಡ್ಮನೆ ಪ್ರವೇಶಿಸಿದ್ದಾರೆ. ಆರನೇ ಅಭ್ಯರ್ಥಿಯಾಗಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಕಾಮಿಡಿಯನ್ ಲೋಕೇಶ್ ಈ ಬಾರಿಯ ಬಿಗ್ ಬಾಸ್ ಓಟಿಟಿ ಮನೆಗೆ ಪ್ರವೇಶ ಮಾಡಿದ್ದಾರೆ.
ಇನ್ನು ಆರ್ಯವರ್ಧನ್ ಕೊಟ್ಟಿರುವ ಈ ಮಾಹಿತಿ ಪ್ರಕಾರ, ರೂಪೇಶ್ ಶೆಟ್ಟಿ, ಸಾನಿಯಾ ಗೌಡ, ಹಾಗೂ ಲೋಕೇಶ್ ಈ ಮೂವರಲ್ಲಿ ಒಬ್ಬರು ಈ ಬಾರಿಯ ಬಿಗ್ ಬಾಸ್ ಓಟಿಟಿ ಗೆಲ್ಲುತ್ತಾರೆ ಎನ್ನಲಾಗಿದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ. ಹಾಗೂ ನಿಮ್ಮ ಫೇವರೇಟ್ ಕಂಟೆಸ್ಟೆಂಟ್ ಯಾರು ಎನ್ನುವುದನ್ನು ಕಾಮೆಂಟ್ ಮಾಡಿ.