ಕಲರ್ಸ್ ಕನ್ನಡ ವಾಹಿನಿಯಲ್ಲಿ ತನ್ನ 8 ಸೀಸನ್ ಗಳನ್ನು ಅದ್ದೂರಿಯಾಗಿ ಬಿಗ್ ಬಾಸ್ ಮುಗಿಸಿದೆ. ಈ ಎಲ್ಲಾ ಸೀಸನ್ ಗಳಿಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡಿದ್ದಾರೆ. ಇನ್ನು ಈ ಎಲ್ಲಾ ಸೀಸನ್ ಗಳು ಸಹ ಟಿ ಆರ್ ಪಿ ವಿಷಯದಲ್ಲಿ ಧಾಖಲೆ ಬರೆದಿದೆ. ಇನ್ನು ಅಭಿಮಾನಿಗಳು ಬಿಗ್ ಬಾಸ್ ಹೊಸ ಸೀಸನ್ ಗಾಗಿ ಕಾತುರಾಗಿದ್ದರು.
ಇದೀಗ ಕೊನೆಗೂ ಬಿಗ್ ಬಾಸ್ ಈ ಬಾರಿ ಹೊಸ ರೀತಿಯಲ್ಲಿ ಶುರುವಾಗಿದೆ. ಬಿಗ್ ಬಾಸ್ ಓಟಿಟಿ ಮೊದಲು ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಪ್ರಸಾರವಾಗುತ್ತಿದ್ದು, ಇನ್ನು ಈ ಸೀಸನ್ 45 ದಿನಗಳ ಕಾಲ ನಡೆಯುತ್ತದೆ. ನಂತರ ಬಿಗ್ ಬಾಸ್ ಸೀಸನ್ 9 ಎಂದಿನಂತೆ ಟಿವಿಯಲ್ಲಿ ಪ್ರಸಾರವಾಗುತ್ತದೆ.
ಇದೀಗ ಬಿಗ್ ಬಾಸ್ ಶುರುವಾಗಿ ಕೇವಲ 2 ದಿನಗಳು ಕಳೆದಿದೆ ಆದರೆ ಬಿಗ್ ಮನೆಯಲ್ಲಿ ಆಗಲೇ ಜಗಳ ಶುರುವಾಗಿದೆ. ಹೌದು ಬಿಗ್ ಮನೆಯಲ್ಲಿ ಎರಡನೇ ದಿನಕ್ಕೆ ಕಿರಿಕ್ ಶುರುವಾಗಿದ್ದು, ಇದೀಗ ಎರಡು ಮಹಿಳಾ ಸ್ಪರ್ಧಿಗಳು ಒಡೆದಾಡಿರುವ ಘಟನೆ ನಡೆದಿದೆ. ಹಾಗಾದರೆ ಏನಿದು ಘಟನೆ ಏನಿದು ಸುದ್ದಿ, ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೆವೆ ಮುಂದಕ್ಕೆ ಓದಿ..
ಬಿಗ್ ಬಾಸ್ ಮನೆಯಂದಮೇಲೆ ಅಲ್ಲಿ ಎಲ್ಲರೂ ಒಟ್ಟಾಗಿ ಇದ್ದರೂ ಪ್ರೀತಿಗಿಂತಲೂ ದ್ವೇಷ ಈ ಮನೆಯಲ್ಲಿ ಹೆಚ್ಚಾಗಿ ಸದ್ದು ಮಾಡುತ್ತದೆ. ಇನ್ನು ಈ ಬಾರಿಯ ಸೀಸನ್ ನಲ್ಲಿ ಯಾರೆಲ್ಲಾ ಜಗಳ ಆಡುತ್ತಾರೋ ಎಂದುಕೊಳ್ಳುವಷ್ಟರಲ್ಲೇ ಜಗಳ ಶುರುವಾಗಿ ಬಿಟ್ಟಿದೆ.
ಹೌದು ಬಿಗ್ ಮನೆಯಲ್ಲಿ ಮೊದಲ ಜಗಳ ಶುರುವಾಗಿ ಬಿಟ್ಟಿದೆ. ಸೋನು ಗೌಡ ಹಾಗೂ ಸ್ಫೂರ್ತಿ ಗೌಡ ಇಬ್ಬರೂ ಮಾತನಾಡುತ್ತಲೇ ಜಗಳ ಮಾಡಿಕೊಂಡಿದ್ದಾರೆ. ಇದು ಈ ಬಾರಿ ಬಿಗ್ ಬಾಸ್ ಓಟಿಟಿ ಸೀಸನ್ ನ ಮೊದಲ ಜಗಳವಾಗಿದೆ. ಬಿಗ್ ಬಾಸ್ ಮನೆಯಲ್ಲಿ ಮೊದಲ್ಲೆರದು ದಿನ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಮೂರನೇ ದಿನಕ್ಕೆ ಕಾಲಿಡುತ್ತಿದ್ದಂತೆ ಜಗಳ, ಅಸಮಾಧಾನ ಶುರುವಾಗಿಬಿಟ್ಟಿದೆ.
ಚೆನ್ನಾಗಿ ಇದ್ದ ಸೋನು ಗೌಡ ಹಾಗೂ ಸ್ಫೂರ್ತಿ ಗೌಡ ನಡುವೆ ಜಗಳ ಶುರುವಾಗಿದೆ. ಇದಕ್ಕೆ ಸ್ಫೂರ್ತಿ ಗೌಡ ಇದ್ದಕಿದ್ದಹಾಗೆ ಕೋಪ ಮಾಡಿಕ್ಕೊಂಡಿದ್ದೆ ಕಾರಣವಾಗಿದೆ. ಸ್ಫೂರ್ತಿ ಗೌಡ ಮೇಕಪ್ ಮಾಡಿಕೊಳ್ಳುತ್ತಿರುವುದನ್ನು ಕಂಡ ಸೋನು ಗೌಡ ಮೇಕಪ್ ಬಗ್ಗೆ ಒಂದಿಷ್ಟು ಪ್ರಶ್ನೆ ಮಾಡುತ್ತಾರೆ.
ಮೇಕಪ್ ಬಗ್ಗೆ ಮಾತನಾಡುತ್ತಾ ಮೇಕಪ್ ಗೊತ್ತಿಲ್ಲ ಎಂದ ಸ್ಫೂರ್ತಿ ಗೌಡ ಅವರಿಗೆ ಸೋನು ಗೌಡ, ಡವ್ ರಾಣಿ, ಎಲ್ಲಾ ಗೊತ್ತಿದ್ದು ಏನು ಗೊತ್ತಿಲ್ಲ ಎಂದಹಾಫ್ ಡವ್ ಮಾಡ್ತಿಯ ಎನ್ನುತ್ತಾರೆ. ಇದೆ ಮಾತುಗಳು ಇದೀಗ ಇವರ ಜಗಳಕ್ಕೆ ಕಾರಣವಾಗಿದೆ. ಡವ್ ರಾಣಿ ಎಂದಿದ್ದಕ್ಕೆ ಸ್ಫೂರ್ತಿ ಗೌಡ ಸಿಟ್ಟಾಗುತ್ತಾರೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ದೊಡ್ಡ ಜಗಳವೇ ನಡೆದು ಹೋಗಿದೆ.
ಇನ್ನು ಈ ಇಬ್ಬರ ಜಗಳವನ್ನು ಮನೆಯವರೆಲ್ಲ ಸೇರಿ ಬಿಡಿಸಿದ್ದಾರೆ, ಈಡಿಗ ಇಬ್ಬರೂ ಒಬ್ಬರ ಮೇಲೆ ಇನ್ನೊಬ್ಬರು ಮುನಿಸಿಕೊಂಡಿದ್ದಾರೆ. ಇದೀಗ ಇಬ್ಬರೂ ಒಬ್ಬರನೊಬ್ಬರು ಮಾತನಾಡುತ್ತಿಲ್ಲ, ಈ ಜಗಳ ಎಲ್ಲಿ ಹೋಗಿ ಮುಟ್ಟುತ್ತದೆಯೋ ಕಾಡುನೋಡಬೇಕಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.