ಸೋಷಿಯಲ್ ಮಿಡಿಯಾದಲ್ಲಿ ಸಕತ್ ಸದ್ದು ಮಾಡುತ್ತಿದ್ದ ಸೋನು ಶ್ರೀನಿವಾಸ್ ಗೌಡ ಇದೀಗ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು, ಅಲ್ಲಿ ತಮ್ಮ ಕುರಿತು ಶಾಕಿಂಗ್ ವಿಷಯವನ್ನು ತಿಳಿಸಿದ್ದಾರೆ. ಹೌದು ತಮ್ಮ ಮೇಲೆ ಬಂದಿದ್ದ ಆರೋಪದ ಬಗ್ಗೆ ಸೋನು ಶ್ರೀನಿವಾಸ ಗೌಡ ಇದೀಗ ಸ್ಪಷ್ಟನೆ ನೀಡಿದ್ದಾರೆ.
ಬಿಗ್ ಬಾಸ್ ಓಟಿಟಿ ಮನೆಯಲ್ಲಿ ಸ್ಪರ್ಧಿಗಳಿಗೆ ನಾನು ಯಾರು ಎಂಬ ಟಾಸ್ಕ್ ನೀಡಲಾಗಿತ್ತು. ಈ ವೇಳೆ ಪ್ರತಿಯೊಂದು ಸ್ಪರ್ಧಿಯೂ ತಾನು ಯಾರು ಎಂಬ ವಿಷಯವನ್ನು ಎಲ್ಲರೆದುರು ಮನ ಬಿಚ್ಚಿ ಮಾತನಾಡಿದ್ದು, ಜೊತೆಗೆ ತಮ್ಮ ವೈಯಕ್ತಿಕ ವಿಚಾರಗಳನ್ನು ಸಹ ವೀಕ್ಷಕರ ಎದುರು ಶೇರ್ ಮಾಡಿಕೊಂಡಿದ್ದಾರೆ.
ಸೋನು ತಮ್ಮ ಖಾಸಗಿ ವಿಡಿಯೋ ಲೀಕ್ ಆಗಿತ್ತು ಎಂಬ ವಿಷಯವನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೆ ತಮ್ಮದು ಇನ್ನೊಂದು ವಿಡಿಯೋ ಸಹ ಇದೆ ಎಂದು ಸೋನು ಗೌಡ ಹೇಳಿದ್ದಾರೆ. ಸೋನು ಶ್ರೀನಿವಾಸ ಗೌಡ ಅವರು, ನನಗೆ ಗೊತ್ತಿರುವ ವ್ಯಕ್ತಿ ನನ್ನ ಜೊತೆ ಮೂರು ವರ್ಷ ಇದ್ದ.
ಅವನು ಎಂ ಎಸ್ ಸಿ ಮುಗಿಸಿ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋದ. ನಂತರ ಅವನು ನನಗೆ ಪ್ರಪೋಸ್ ಮಾಡಿದ ನಾನು ಇದಕ್ಕೆ ಒಪ್ಪಿಕೊಂಡೆ. ಸ್ವಲ್ಪ ದಿನ ನಮ್ಮಿಬ್ಬರ ನಡುವೆ ಎಲ್ಲಾ ಸರಿಯಾಗೇ ಇತ್ತು. ನಂತರ ಒಂದು ದಿನ ನಮ್ಮ ಪ್ರೀತಿ ನಿಜವಾಗಿದ್ದರೆ ವಿಡಿಯೋ ಕಾಲ್ ಮಾಡು ಎಂದು ಹೇಳಿದ.
ಇದಕ್ಕೆ ನಾನು ಸಹ ಒಪ್ಪಿಕೊಂಡೆ, ನಂತರ ನಾನು ವಿಡಿಯೋ ಕಾಲ್ ಮಾಡಿದೆ. ಎಲ್ಲ ಹುಡುಗುಯರ ಲೈಫ್ ನಲ್ಲಿ ಇದು ಕಾಮನ್. ಆದರೆ ಅವನು ನಾನು ವಿಡಿಯೋ ಕಾಲ್ ನಲ್ಲಿ ಇದ್ದಾಗ ಅದನ್ನು ರೆಕಾರ್ಡ್ ಮಾಡಿಕೊಂಡ ಎಂದು ಹೇಳಿದ್ದಾರೆ. ನಂತರ ಅವನು ನೀನು ನನ್ನನ್ನು ಬಿಟ್ಟು ಬೇರೆ ಯಾರನ್ನು ಸಹ ಮದುವೆಯಾಗಲು ಆಗುವುದಿಲ್ಲ ಎಂದು ಆತ ಬ್ಲಾಕ್ ಮೇಲ್ ಮಾಡಿದ.
ನಾನು ಇದೆಲ್ಲಾ ಯಾಕೆ ಹೇಳ್ತಿದ್ಯಾ ಎಂದು ಕೇಳಿದೆ, ಆಗ ಅವನು ನನಗೆ ಆ ವಿಡಿಯೋ ಕಳುಹಿಸಿದ. ಆ ವಿಡಿಯೋ ನೋಡಿದ ಒಂದು ಕ್ಷಣ ನನಗೆ ಶಾಕ್ ಆಯ್ತು. ನಾನು ನಮ್ಮ ಮನೆಯ ಮಾನ ಮರ್ಯಾದೆ ತೆಗದು ಬಿಟ್ಟೆ. ಹುಡುಗಿಯಾಗಿ ಹುಟ್ಟಿದ್ದೆ ತಪ್ಪಾಯ್ತು ಎಂದು ಅಳಲು ಶುರು ಮಾಡಿದೆ.
ಕುಟುಂಬದವರು ಹಾಗೂ ನಮ್ಮ ಸಂಭಂದಿಕರು ಎಲ್ಲರೂ ನನ್ನನ್ನು ಬೈದರು. ನನಗೆ ಈ ವಿಷಯ ನಡೆದ ಮೇಲೆ ಹಲವು ತಿಂಗಳುಗಳಿಂದ ಮನಸ್ಸು ಸರಿ ಇಲ್ಲ. ಅವನು ಇತ್ತೀಚೆಗೆ ಒಂದು ವಿಡಿಯೋ ಲೀಕ್ ಮಾಡಿದ್ದಾನೆ, ಅವನ ಬಳಿ ಇನ್ನೊಂದು ವಿಡಿಯೋ ಇದೆ. ಅದನ್ನು ಯಾವಾಗ ಲೀಕ್ ಮಾಡುತ್ತಾನೋ ನನಗೆ ಗೊತ್ತಿಲ್ಲ ಎಂದು ಸೋನು ಗೌಡ ಕಣ್ಣೀರು ಹಾಕಿದ್ದಾರೆ.
ಇನ್ನೊಂದು ಕಡೆ ಸೋನು ಗೌಡ ಪರಿಸ್ಥಿತಿ ನೋಡಿ ಮನೆಯವರೆಲ್ಲಾ ಅವರಿಗೆ ಸಮಾಧಾನ ಮಾಡಿದ್ದಾರೆ. ಇನ್ನು ಸೋಷಿಯಲ್ ಮಿಡಿಯಾದಲ್ಲಿ ಕೆಲವರು ಸೋನು ಗೌಡ ಇವೆಲ್ಲಾ ಜನರ ಮುಂದೆ ಸಿಂಪತಿಗಾಗಿ ಮಾಡುತ್ತಿದ್ದಾರೆ ಎಂದು ಟ್ರೋಲ್ ಮಾಡುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.