ಬಿಗ್ ಬಾಸ್ ಕನ್ನಡ ಓಟಿಟಿ ಕಾರ್ಯಕ್ರಮ ಪ್ರಾರಂಭವಾಗಿದೆ. ಮೊದಲ ದಿನವೇ ಸ್ಪರ್ಧಿಗಳು ತಮ್ಮ ಜೀವನದ ಕಹಿ ಸತ್ಯಗಳನ್ನು ಬಾಯಿ ಬಿಟ್ಟಿದ್ದಾರೆ. ಅದರಲ್ಲೂ ಪುಟ್ಟಗೌರಿ ಮದುವೆ ಖ್ಯಾತಿಯ ಸಾನಿಯಾ ಕಣ್ಣೀರಿಟ್ಟಿದ್ದಾರೆ. ತಮ್ಮ ಜೀವನದ ಕರಾಳ ಸತ್ಯವನ್ನು ಸಾನಿಯಾ ಎಲ್ಲರೆದುರು ತೆರೆದಿಟ್ಟಿದ್ದಾರೆ.
ಸ್ಪರ್ಧಿಗಳ ಜೀವನವನ್ನು ಪರಿಚಯಿಸಲು ಬಿಗ್ ಬಾಸ್ ಚಟುವಟಿಕೆ ಒಂದನ್ನ ನೀಡಿದ್ದರು. ಇದರ ಅನುಸಾರ ಸ್ಪರ್ಧಿಗಳು ತಮ್ಮ ತಮ್ಮ ಜೀವನ ಕುರಿತು ಮಾತನಾಡಬೇಕಿತ್ತು, ಈ ಟಾಸ್ಕ್ ನಲ್ಲಿ ಸಾನಿಯಾ ಐಯರ್ ತಮ್ಮ ಜೀವನದಲ್ಲಿ ತಮಗೆ ಎದುರಾದ ಸಂಕಷ್ಟದ ಬಗ್ಗೆ ಮನ ಬಿಚ್ಚಿ ಮಾತನಾಡಿದರು.
ಅಮ್ಮ ಚಿಕ್ಕಮ್ಮ ನನ್ನನ್ನು ಕ್ಷಮಿಸಿ, ನಾನು ನಿಮ್ಮಿಬ್ಬರ ಬಗ್ಗೆ ಒಂದು ಬ್ಯಾಕ್ ಸ್ಟೋರಿ ಹೇಳಲೇ ಬೇಕಾಗುತ್ತದೆ. ನಮ್ಮ ಚಿಕ್ಕಮ್ಮನದು ಅಬ್ಯುಸಿವ್ ಮ್ಯಾರೇಜ್, ನನ್ನ ಕಣ್ಣಮುಂದೆಯೇ ನನ್ನ ಚಿಕ್ಕಮ್ಮ ಅವರ ಗಂಡನ ಕೈಯಲ್ಲಿ ಏಟು ತಿನ್ನುತ್ತಿದ್ದರು. ಇದು ನನಗೆ ಮಾನಸಿಕವಾಗಿ ಪರಿಣಾಮ ಬೀರಿತು.
ರಿಲೇಷನ್ ಶಿಪ್ ಎಂದರೆ ಹೀಗೆ ಅಂತ ನಾನು ಎಂದುಕೊಂಡಿದೆ, ನಾನು ಕೂಡ ಒಂದು ರಿಲೇಷನ್ ಶಿಪ್ ನಲ್ಲಿದೆ, ಅದು ಕೂಡ ಅಬ್ಯುಸಿವ್ ಆಗಿತ್ತು. ನಾನು ಅವನಿಗಾಗಿ ವೃತ್ತಿ ಜೀವನ ಬಿಡಲು ರೆಡಿಯಾಗಿದ್ದೆ. ನನ್ನ ರಿಲೇಷನ್ ಶಿಪ್ ನ ಉಳಿಸಿಕೊಳ್ಳಬೇಕು ಎನ್ನುವ ಕಾರಣಕ್ಕೆ ನಾನು ಎಲ್ಲಾ ತ್ಯಾಗ ಮಾಡಲು ರೆಡಿಯಾಗಿದೆ.
ಆದರೆ ಆ ಸಂಬಂಧ ಬಹಳ ದಿನ ಉಳಿಯಲಿಲ್ಲ. ನನ್ನ ನಂಬಿಕೆಗೆ ಮೋಸ ಆಗಿದ್ದು, ನನ್ನ ಮಲತಂದೆಯಿಂದ, ನನ್ನಮ್ಮ ಡಬಲ್ ಡಿವೋರ್ಸಿ, ನನ್ನ ತಾಯಿ ಎರಡು ಬಾರಿ ಮದುವೆಯಾಗಿದ್ದರು, ಒಬ್ಬರು ನನಗೆ ಜನ್ಮ ನೀಡಿದ ತಂದೆ, ಇನ್ನೊಬ್ಬರು ನನ್ನ ಮಲತಂದೆ.
ನನ್ನ ಸ್ವಂತ ತಂದೆಗಿಂತಲೂ ನನ್ನ ಸಂಬಂಧ ನನ್ನ ಮಲತಂದೆಯ ಜೊತೆ ತುಂಬಾ ಚೆನ್ನಾಗಿತ್ತು. ನನ್ನ ಅಮ್ಮನಿಗೆ ಅವರು ಫ್ರೆಂಡ್ ಆಗಿದ್ದಿನಿಂದಲೂ ನನಗೆ ಅವರು ಗೊತ್ತು. ನನ್ನ ಅಮ್ಮ ಅವರ ಜೊತೆ ಮದುವೆಯಾದ ಮೇಲೆ ಅವರಿಗೆ ಗೊತ್ತಾಯ್ತು, ಅದು ಅವರ ತಪ್ಪಾದ ನಿರ್ಧಾರ.
ಮಲತಂದೆ ನನ್ನ ತಾಯಿಯ ಜೊತೆ ಸಂಬಂಧ ಕಳೆದುಕೊಳ್ಳಬಾರದು ಎನ್ನುವ ಕಾರಣಕ್ಕೆ ನನ್ನ ಹೆಸರು ಹಾಳು ಮಾಡಲು ಮುಂದಾಗುತ್ತಾರೆ. ಹೇಗೆ ಎಂದರೆ ನನ್ನ ಬಾಯ್ ಫ್ರೆಂಡ್ ಜೊತೆ ನಾನಿದ್ದ ವಿಡಿಯೋವನ್ನು ರೆಕಾರ್ಡ್ ಮಾಡುತ್ತಾರೆ. ನನ್ನ ಅಮ್ಮನನ್ನು ಉಳಿಸಿಕೊಳ್ಳಬೇಕು ಎನ್ನುವ ಕಾರಣಕ್ಕೆ ಆ ವೀಡಿಯೋವನ್ನು ನನ್ನ ಅಜ್ಜಿಗೆ, ಚಿಕ್ಕಮ್ಮನಿಗೆ ತೋರಿಸುತ್ತಾರೆ.
ಆ ವಿಡಿಯೋದಲ್ಲಿ ಏನು ಇರಲಿಲ್ಲ ಆದರೂ ಸಹ ಅವಮಾನ ಮಾಡುತ್ತಾರೆ. ನನಗೆ ತಂದೆ ಪ್ರೀತಿ ಸಿಕ್ಕಿರಲಿಲ್ಲ ಆ ಪ್ರೀತಿಯನ್ನು ನಾನು ಇನ್ನೊಬ್ಬರ ಬಳಿ ನಿರೀಕ್ಷೆ ಮಾಡುತ್ತಿದೆ. ಈಗ ನಾನು ಹಾಗೆ ಮಾಡುವುದಿಲ್ಲ ನಾನು ಸ್ವಾವಲಂಬಿ ಆಗಿರುತ್ತೇನೆ. ಹೀಗೆಲ್ಲಾ ಆಗಿದ್ದಕ್ಕೆ ನಾನು ಕ್ಷಮೆ ಕೇಳುತ್ತೇನೆ ಎಂದು ಸಾನಿಯಾ ಐಯರ್ ಕಣ್ಣೀರು ಹಾಕಿದ್ದಾರೆ.