ಟಿಕ್ ಟಾಕ್ ಮತ್ತು ರೀಲ್ಸ್ ಮೂಲಕ ಫ್ಹೇಮಸ್ ಆದ ಸೋನು ಶ್ರೀನಿವಾಸ್ ಗೌಡ ಅಲಿಯಾಸ್ ಶಾಂಭವಿ ಅವರು ಇದೀಗ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಮಿಂಚುತ್ತಿದ್ದಾರೆ. ಅವರ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ಪರ ವಿರೋಧದ ಚರ್ಚೆ ನಡೆಯುತ್ತಿದೆ.
ಬಿಗ್ ಬಾಸ್ ಕನ್ನಡ ಷೋನಲ್ಲಿ ಸ್ಪರ್ಧಿಗಳು ತಮ್ಮ ಕಾಸಗಿ ಬದುಕಿನ ಅನೇಕ ವಿವರಗಳನ್ನು ತೆರೆದಿಡುತ್ತಿದ್ದಾರೆ. ಸೋನು ಶ್ರೀನಿವಾಸ್ ಗೌಡ ಅವರ ಕಾಸಗಿ ವಿಡಿಯೋ ಲೀಕ್ ಆಗಿತ್ತು ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಆ ಬಗ್ಗೆ ಸ್ವತಃ ಸೋನು ಅವರೇ ಇದೀಗ ದೊಡ್ಮನೆಯಲ್ಲಿ ಒಪ್ಪಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ ತಮ್ಮದು ಇನ್ನೊಂದು ವಿಡಿಯೋ ಸಹ ಇದೆ ಎಂದು ಸೋನು ಹೇಳಿದ್ದಾರೆ. ತಮ್ಮಗೆ ಗೊತ್ತಿರುವ ವ್ಯಕ್ತಿ ತಮ್ಮ ಜೊತೆ ಮೂರು ವರ್ಷಗಳ ಕಾಲ ಇದ್ದ. ಅವನು ಎಂಎಸ್ಸಿ ಮುಗುಸಿದ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋದ. ನಂತರ ಪ್ರಪೋಸ್ ಮಾಡಿದ ನಾನು ಸಹ ಒಪ್ಪಿಕೊಂಡೆ, ನಂತರ ನಮ್ಮ ಪ್ರೀತಿ ನಿಜವಾಗಿದ್ದರೆ ವಿಡಿಯೋ ಕಾಲ್ ಮಾಡು ಅಂತ ಹೇಳಿದ.
ನಾನು ನೇರವಾಗಿ ವಿಡಿಯೋ ಕಾಲ್ ಮಾಡಿದೆ, ಎಲ್ಲಾ ಹುಡುಗಿರ ಲೈಫ್ ನಲ್ಲಿ ಇದು ಕಾಮನ್ ಆದರೆ ಅವನು ಇದನ್ನೆಲ್ಲಾ ರೆಕಾರ್ಡ್ ಮಾಡಿಕೊಂಡ ಎಂದು ಸೋನು ಶ್ರೀನಿವಾಸ್ ಗೌಡ ಹೇಳಿದ್ದಾರೆ. ನೀನು ನನ್ನನ್ನು ಬಿಟ್ಟು ಬೇರೆ ಯಾರನ್ನು ಮದುವೆಯಾಗಲು ಆಗುವುದಿಲ್ಲ ಎಂದು ಆತ ನನ್ನನ್ನು ಬ್ಲಾಕ್ ಮೇಲ್ ಮಾಡಲು ಶುರು ಮಾಡಿದ.
ನನಗೆ ಆ ವೀಡಿಯೊವನ್ನು ಕಳುಹಿಸಿದ, ಆ ವಿಡಿಯೋ ನೋಡಿದ ಒಂದೇ ಕ್ಷಣದಲ್ಲಿ ನಾನು ನಮ್ಮ ಮನೆಯ ಮಾನ ಮರ್ಯಾದೆ ತೆಗೆದುಹಾಕಿದೆ. ನಾನು ಹುಡುಗಿಯಾಗಿ ಹುಟ್ಟಿರುವುದೇ ತಪ್ಪಾ ಎಂದು ಅಳಲು ಶುರು ಮಾಡಿದೆ. ಕುಟುಂಬದವರು ಮತ್ತು ಸಂಭಂದಿಕರೆಲ್ಲಾ ನನಗೆ ಬೈದ್ರು ಎಂದು ಆ ಕಹಿ ಘಟನೆಯನ್ನ ನೆನಪು ಮಾಡಿಕೊಂಡು ಸೋನು ಕಣ್ಣೀರು ಹಾಕಿದ್ದಾರೆ.
ಶಾಕಿಂಗ್ ಸಂಗತಿ ಏನೆಂದರೆ ಆ ವ್ಯಕ್ತಿಯ ಬಳಿ ಸೋನು ಗೌಡ ಅವರ ಇನ್ನೊಂದು ವೀಡಿಯೋ ಇದೆಯಂತೆ. ವಿಡಿಯೋ ಲೀಕ್ ಆದ ಬಳಿಕ ನಾನು ಅಪ್ಪನ ಮನೆಗೆ ಒಮ್ಮೆಯೂ ಹೋಗಲಿಲ್ಲ. ಏಕೆಂದರೆ ನನಗೆ ಮುಖ ತೋರಿಸಲು ಆಗುತ್ತಿಲ್ಲ, ತಪ್ಪು ಮಾಡಿದ್ದೀನಿ ಅದನ್ನು ಒಪ್ಪಿಕೊಳ್ಳುತ್ತೆನೆ.
ಹುಡುಗಿಯರು ಸ್ಟ್ರಾಂಗ್ ಆಗಿರಿ ಒಮ್ಮೆ ಮಾಡಿದ ತಪ್ಪನ್ನು ಮತ್ತೆ ಮಾಡಬೇಡಿ , ಅವನ ಬಳಿ ಇದಿದ್ದು ಎರಡು ವಿಡಿಯೋ ಒಂದು ವಿಡಿಯೋ ಲೀಕ್ ಮಾಡಿದ್ದಾನೆ, ಅವನ ಹತ್ತಿರ ಇನ್ನೊಂದು ವಿಡಿಯೋ ಇದೆ ಅದನ್ನು ಯಾವಾಗ ಬಿಡುತ್ತಾನೋ ನನಗೆ ನಿಜವಾಗಿಯೂ ಗೊತ್ತಿಲ್ಲ.
ನನಗೆ ಆದ ಹಾಗೆ ಬೇರೆ ಯಾರಿಗೂ ಆಗಬಾರದು ಎಂದು ಸೋನು ಶ್ರೀನಿವಾಸ್ ಗೌಡ ಹೇಳಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮಕ್ಕೆ ಬಂದ ಬಳಿಕ ಸೋನು ಅವರನ್ನು ಹೆಚ್ಚು ಟ್ರೋಲ್ ಮಾಡಲಾಗುತ್ತಿದೆ. ಟ್ರೋಲರ್ಸ್ ನಿಂದ ನಾನು ಬೆಳೆದಿದ್ದೇನೆ ಎಂದು ಜನ ಹೇಳ್ತಾರೆ ಆದರೆ ಅದು ನಿಜ ಅಲ್ಲ. ನನ್ನಿಂದಾಗಿ ಅವರು ಲೈಕ್ಸ್ ಮತ್ತು ಫ್ಹಾಲೊವರ್ಸ್ ಪಡೆಯುತ್ತಿದ್ದಾರೆ ಎಂದು ಸೋನು ಹೇಳಿದ್ದಾರೆ.