ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಸರ್ಜಾ ದಂಪತಿಯ ಫೋಟೋ ಮತ್ತು ವಿಡಿಯೋಗಳು ಆಗಾಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತದೆ. ಇದೀಗ ಮಗ ರಾಯನ್ ರಾಜ್ ಸರ್ಜಾ ಅವರ ಹಾರೈಕೆಯಲ್ಲಿ ಮೇಘನಾ ರಾಜ್ ಖುಷಿಯಾಗಿ ಕಾಲ ಕಳೆಯುತ್ತಿದ್ದಾರೆ.
ರಾಯನ್ ಸರ್ಜಾ ಬೆಳೆಯುತ್ತಿದ್ದಾನೆ, ಇದೀಗ ಅವನಿಗೆ ಒಂದು ವರ್ಷ ಒಂಬತ್ತು ತಿಂಗಳು ತುಂಬಿದೆ. ಮಾತು ಕಲಿಯುತ್ತಿದ್ದಾನೆ, ತೊದಲು ನುಡಿಗಳ ಮೂಲಕ ಅಮ್ಮ ಅಪ್ಪ ಎನ್ನುತ್ತಿದ್ದಾರೆ ರಾಯನ್. ಇನ್ನು ಯಾರಾದರೂ ಮಾತನಾಡಿದಾರೆ ಅದನ್ನು ಅನುಕರಿಸುವ ಪ್ರಯತ್ನ ಮಾಡುತ್ತಿದ್ದಾನೆ.
ಇನ್ನು ಈ ಬಗ್ಗೆ ಮಾತನಾಡಿದ ನಟಿ ಮೇಘನಾ ರಾಜ್ ತಾಯಿಯಾಗಿ ನನಗೆ ಈ ಹಂತ ತುಂಬಾ ಸುಂದರವಾಗಿದೆ ಎಂದು ಮೇಘನಾ ರಾಜ್ ಹೇಳಿದ್ದಾರೆ. ಇದೀಗ ನಟಿ ಮೇಘನಾ ರಾಜ್ ಮತ್ತೆ ಸಿನಿಮಾಗಳಿಗೆ ಕಮ್ ಬ್ಯಾಕ್ ಮಾಡಿದ್ದು, ಅನೇಕ ಸಿನಿಮಾ ಆಫ್ಹರ್ ಗಳನ್ನು ಒಪ್ಪಿಕೊಂಡಿದ್ದಾರೆ.
ಪುತ್ರ ರಾಯನ್ ರಾಜ್ ಸರ್ಜಾ ಅವರ ಹಾರೈಕೆಯ ಜೊತೆಗೆ ಮೇಘನಾ ರಾಜ್ ಸಿನಿಮಾ ಹಾರೈಕೆಯಲ್ಲಿ ಸಹ ಬ್ಯುಸಿಯಾಗಿದ್ದಾರೆ. ಇದೀಗ ನಟಿ ತಮ್ಮ ಪುತ್ರನ ಬಗ್ಗೆ ಒಂದಿಷ್ಟು ವಿಷಯವನ್ನು ಹಂಚಿಕೊಂಡಿದ್ದಾರೆ. ಹೌದು ನಟಿ ಮೇಘನಾ ರಾಜ್ ಚಿರುವಿನ ಅಗಲಿಕೆಯ ಬಳಿಕ ಸಾಕಷ್ಟು ಕುಗ್ಗಿ ಹೋಗಿದ್ದರು.
ಅವರೆ ಹೇಳಿದ ಪ್ರಕಾರ ನಾನು ಮತ್ತೆ ಮೊದಲಿನ ಸ್ಥಿತಿಗೆ ಬರಲು ತುಂಬಾ ಕಷ್ಟವಿದೆ, ಚಿರುವಿನ ನೆನಪು ನನಗೆ ದಿನಾ ಕಾಡುತ್ತಿದೆ, ಜೀವನವೇ ಬೇಸರ ಎನಿಸಿದೆ ಎನ್ನುವ ಮಾತು ಹೇಳಿದ್ದರು. ಇದೀಗ ಮಗ ರಾಯನ್ ಬಂದ ಬಳಿಕ ನಟಿ ಮೇಘನಾ ರಾಜ್ ಜೀವನಕ್ಕೆ ಹೊಸ ಧಾರಿ ಸಿಕ್ಕಿದೆ.
ರಾಯನ್ ಮುದ್ದಾದ ಮಾತುಗಳನ್ನು ಕೇಳುತ್ತಾ, ಅವನ ಜೊತೆ ತರ್ಲೆ ಆಟಗಳನ್ನು ಆಡುತ್ತಾ. ಚಿರುವನ್ನೇ ಹೋಲುವ ಅವರ ಪ್ರತಿಯೊಂದು ಗುಣ ಮೇಘನಾ ಅವರಿಗೆ ತುಂಬಾ ವಿಶೇಷ ಎನಿಸಿದೆಯಂತೆ. ಚಿರುವಿನಂತೆ ಉತ್ತಮ ವ್ಯಕ್ತಿಯಾಗಿ ಮಗನನ್ನು ಬೆಳೆಸುತ್ತೇನೆ ಎಂದಿದ್ದಾರೆ ನಟಿ ಮೇಘನಾ.
ಮೇಘನಾ ರಾಜ್ ಅವರು ಸಿನಿಮಾ ಶೂಟಿಂಗ್ ಗಾಗಿ ಹೋಗುವ ವೇಳೆ ರಾಯನ್ ಜವಾಬ್ದಾರಿಯನ್ನು ಅವರ ತಾಯಿ ಪ್ರಮೀಳಾ ಜೋಷಾಯಿ ಅವರಿಗೆ ವಹಿಸಿ ಹೋಗುತ್ತಾರೆ. ಅಜ್ಜಿ ತಾತನ ಜೊತೆ ರಾಯನ್ ಬೆಳೆಯುತ್ತಾನೆ. ಶೂಟಿಂಟ್ ಸಮಯದಲ್ಲಿ ಎಷ್ಟೇ ಬ್ಯುಸಿಯಾಗಿದ್ದರು ಸಹ ನಟಿ ಮೇಘನಾ ಮಗನ ಜೊತೆ ವಿಡಿಯೋ ಕಾಲ್ ಮಾಡಿ ಮಾತನಾಡುತ್ತಾರಂತೆ.