ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ತಮ್ಮ ಅಭಿಮಾನಿಗಳ ಜೊತೆ ಕ್ರಾಂತಿ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ ನಟ ದರ್ಶನ್. ಇದೆ ಸಂದರ್ಶನದಲ್ಲಿ ನಟ ದರ್ಶನ್ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳ ಬಗ್ಗೆಯೂ ಮತನಾಡಿದ್ದಾರೆ.
ಇದೆ ವೇಳೆ ನಟ ದರ್ಶನ್ ಪುನೀತ್ ಅವರ ಹೆಸರನ್ನು ಪ್ರಸ್ತಾಪ ಮಾಡಿದ್ದಾರೆ, ಹೀಗೆ ಪುನೀತ್ ಅವರ ಹೆಸರನ್ನು ಪ್ರಸ್ತಾಪ ಮಾಡಿರುವುದು, ಅಪ್ಪು ಅವರ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ಅಪ್ಪು ಅಭಿಮಾನಿಗಳು, ಅಪ್ಪು ಅವರಿಗೆ ಕೊಟ್ಟ ಗೌರವ ಹಾಗೂ ದೊಡ್ಮನೆಯ ಮೇಲೆ ದರ್ಶನ್ ಅವರಿಗೆ ಇರುವ ಗೌರವದ ಬಗ್ಗೆ ಮಾತನಾಡಿದ್ದಾರೆ.
ಹೀಗೆ ಸಂದರ್ಶನದಲ್ಲಿ ತಮ್ಮ ಅಭಿಮಾನಿಗಳ ಬಗ್ಗೆ ಮಾತನಾಡುತ್ತಾ ದರ್ಶನ್, ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಬಗ್ಗೆಯೂ ಮಾತನಾಡಿದ್ದಾರೆ. ಸಹಜವಾಗಿ ನಾನು ಸತ್ತ ಮೇಲೆ ನೋಡಿದ್ದೇವೆ, ಫ್ಯಾನ್ಸ್ ಗಳು ಎಂದರೆ ಹೇಗೆ ಎಂದು. ಪುನೀತ್ ರಾಜ್ ಕುಮಾರ್ ಅವರದ್ದು ಒಬ್ಬರದ್ದೇ ಸಾಕು. ಆದರೆ ನಾನು ಬದುಕಿರುವಾಗಲೆ ನನ್ನ ಫ್ಯಾನ್ಸ್ ತೋರಿಸಿ ಬಿಟ್ಟರಲ್ಲಾ ನನಗೆ ಅಷ್ಟೇ ಸಾಕು ಎಂದು ದರ್ಶನ್ ಹೇಳಿದ್ದಾರೆ.
ಇಲ್ಲಿ ಅಭಿಮಾನಿಗಳ ಶಕ್ತಿ ಎಂತದ್ದು ಎನ್ನುವ ಬಗ್ಗೆ ದರ್ಶನ್ ಮಾತನಾಡಿದ್ದಾರೆ. ಇನ್ನು ಅಪ್ಪು ಅಭಿಮಾನಿಗಳು ದರ್ಶನ್ ಹೇಳಿಕೆಯ ಬಗ್ಗೆ ವಿಡಿಯೋಗಳನ್ನು ಮಾಡುತ್ತಿದ್ದಾರೆ. ದರ್ಶನ್ ಅವರಿಗೆ ಅಪ್ಪು ಅಭಿಮಾನಿಗಳು ಕ್ಷಮೆ ಕೇಳುವಂತೆ ಹೇಳುತ್ತಿದ್ದಾರೆ.
ಆದರೆ ಇನ್ನೊಂದು ಕಡೆ ದರ್ಶನ್ ಫ್ಯಾನ್ಸ್ ದರ್ಶನ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ದರ್ಶನ್ ಅಭಿಮಾನಿಗಳು ಇದು ಬೇಕಂತಲ್ಲೇ ಮಾಡುತ್ತಿರುವ ಹುನ್ನಾರ ಎನ್ನುತ್ತಿದ್ದಾರೆ. ಪುನೀತ್ ಅವರ ಅಭಿಮಾನಿಗಳನ್ನು ಕೆಲವು ಕಿಡಿಗೇಡಿಗಳು ಬೇಕಂತಲ್ಲೇ ಎತ್ತುಕಟ್ಟಿದ್ದಾರೆ.
ದರ್ಶನ್ ಅವರ ಹೇಳಿಕೆಯ ಪೂರ್ತಿ ವಿಡಿಯೋವನ್ನು ನೋಡದೆ, ಸಣ್ಣದೊಂದು ಕ್ಲಿಪ್ ಹಾಕಿ ಅದನ್ನು ವೈರಲ್ ಮಾಡುತ್ತಿದ್ದಾರೆ. ಇನ್ನು ಕ್ರಾಂತಿ ಸಿನಿಮಾವನ್ನು ಬ್ಯಾನ್ ಮಾಡಿತ್ತೇವೆ ಎಂದು ಹಲವಾರು ಕಡೆ ಅಪ್ಪು ಅಭಿಮಾನಿಗಳು ಹೇಳುತ್ತಿದ್ದಾರೆ.
ಅಗಾಗಿ ಇದು ಕ್ರಾಂತಿ ಚಿತ್ರದ ಮೇಲೆ ಪರಿಣಾಮ ಬೀರಬಹುದು, ಇದು ಕ್ರಾಂತಿ ಚಿತ್ರಕ್ಕೆ ತೊಂದರೆ ಕೊಡಲು, ಹಾಗೂ ದರ್ಶನ್ ವಿರುದ್ಧ ಅಪ್ಪು ಅಭಿಮಾನಿಗಳನ್ನು ಎತ್ತಿ ಕಟ್ಟಲು ಹುನ್ನಾರ ಮಾಡಲಾಗಿದೆ ಎಂದು ದರ್ಶನ್ ಅಭಿಮಾನಿಗಳು ಮಾತನಾಡುತ್ತಿದ್ದಾರೆ.