ಈ ಬಾರಿಯ ಬಿಗ್ ಬಾಸ್ ಕನ್ನಡ ಓಟಿಟಿ ಮೊದಲ ಸೀಸನ್ ಶುರುವಾಗಿದೆ. ಈ ಕಾರ್ಯಕ್ರಮಕ್ಕೆ ಸೋಷಿಯಲ್ ಮಿಡಿಯಾದ ಕಾಂಟ್ರಾವರ್ಸಿ ಸ್ಟಾರ್ ಗಳನ್ನು ಸಹ ಸ್ಪರ್ಧಿಗಳಾಗಿ ಆಯ್ಕೆ ಮಾಡಲಾಗಿದೆ. ಬಿಗ್ ಬಾಸ್ ಓಟಿಟಿ ಪ್ರಸಾರವಾಗಿ ಜನರಿಂದ ಒಳ್ಳೆಯ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.
ಇನ್ನು ಬಿಗ್ ಬಾಸ್ ಮನೆಗೆ 14 ಮಂದಿ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದು, ಸ್ಪರ್ಧಿಗಳು ಮನೆಗೆ ಎಂಟ್ರಿ ಕೊಟ್ಟು ಇನ್ನು 1 ವಾರ ಕೂಡ ಆಗಿಲ್ಲ, ಆದರೆ ಈಗಾಗಲೇ ಮನೆಯಲ್ಲಿ ಮನಸ್ತಾಪಗಳು ಹಾಗೂ ಜಗಳಗಳು ಶುರುವಾಗಿದೆ. ಹೌದು ಸೋನು ಗೌಡ ಹಾಗೂ ನಂಬರ್ ಗುರೂಜಿ ನಡುವೆ ಇದೀಗ ಬೆಂಕಿ ಹತ್ತಿದೆ.
ಬಿಗ್ ಮನೆಯಲ್ಲಿ ಜಾಸ್ತಿ ಜಗಳ ಆಗುವುದು ಅನೇಕ ಬಾರಿ ಅಡುಗೆ ಮನೆ ವಿಚಾರಕ್ಕೆ, ಈ ಬಾರಿಯೂ ಕೂಡ ಅದು ಮುಂದುವರೆದಿದೆ, ಸೋನು ಗೌಡ ಬಿಗ್ ಮನೆಯಲ್ಲಿ ಒಂದು ಮೊಟ್ಟೆ ತಿನ್ನಲು ಬಯಸಿದ್ದಾರೆ ಆದರೆ ಮನೆಯವರು ಅದಕ್ಕೆ ಒಪ್ಪಿಗೆ ನೀಡಿಲ್ಲ, ರೇಷನ್ ನನ್ನು ಮಿತವಾಗಿ ಬಳಸುವ ಸಲುವಾಗಿ ಸೋನು ಗೌಡ ಅವರಿಗೆ ಮೊಟ್ಟೆ ತಿನ್ನಲು ಒಪ್ಪಿಗೆ ನೀಡಿಲ್ಲ.
ಇನ್ನು ಈ ವಿಚಾರವಾಗಿ ಇದೀಗ ಸೋನು ಗೌಡ ನಂಬರ್ ಗುರೂಜಿ ಮೇಲೆ ಮುನಿಸಿಕೊಂಡಿದ್ದಾರೆ. ಹೌದು ನಂಬರ್ ಗುರೂಜಿ ಸೋನು ಅವರ ಸಪೋರ್ಟ್ ಗೆ ನಿಲ್ಲಲಿಲ್ಲ ಎಂದು ಸೋನು ಗುರೂಜಿ ಮೇಲೆ ಅಪಾಧನೆ ಹೊರೆಸಿದ್ದಾರೆ. ಇದನ್ನು ನೋಡಿ ಅಲ್ಲಿ ನಿಂತಿದ್ದ ಮತ್ತೊಂದು ಸ್ಪರ್ಧಿ ಚೈತ್ರಾ ನಕ್ಕಿದ್ದಾರೆ.
ಗುರೂಜಿ ನೀವು ಎಲ್ಲರಿಗೂ ಇಷ್ಟ ಇದ್ರೆ ಮಾತ್ರ ಅದನ್ನು ಮಾಡಬೇಕು. ರಾತ್ರಿ ನೀವು ಹೇಗೆ ಬೇರೆಯವರ ಮಾತಿಗೆ ತಲೆ ಕುಣಿಸಿದ್ರಿ, ಅದೇ ರೀತಿ ಇದೀಗ ನನ್ನ ಮಾತಿಗೂ ಸಹ ತಲೆ ಕುಣಿಸಬೇಕು. ಗುರೂಜಿ ನೀವು ರಾತ್ರಿ ನನ್ನ ಪರ ಮಾತನಾಡಬಹುದಿತ್ತು ಆದರೆ ನೀವು ಮಾತನಾಡಲಿಲ್ಲ ಎಂದಿದ್ದಾರೆ ಸೋನು.
ಮೊದಲ ದಿನವೇ ಎಷ್ಟೋ ಮೊಟ್ಟೆಗಳನ್ನು ವೆಸ್ಟ್ ಮಾಡಿದ್ದರು. ನಾನು ರಾತ್ರಿ ಕೇವಲ ಒಂದು ಮೊಟ್ಟೆ ಬೇಕು ಎಂದು ಕೇಳಿದ್ದಕ್ಕೆ ನನ್ನ ಮೇಲೆ ಎಲ್ಲರೂ ಒಟ್ಟಾಗಿ ಜೋರ್ ಮಾಡಿದರು. ಒಂದೇ ಒಂದು ಮೊಟ್ಟೆ ನನಗೆ ಕೊಟ್ಟಿದರೆ ಏನಾಗುತ್ತಿತ್ತು ಎಂದು ಸೋನು ಗೌಡ, ನಟಿ ಚೈತ್ರ ಬಳಿ ಪ್ರಶ್ನೆ ಕೇಳಿದ್ದಾರೆ.
ಇಲ್ಲಿ ಒಬ್ಬರಿಗೆ ಒಂದೊಂದು ರೀತಿ ಪಾರ್ಷ್ಯಲಿಟಿ ಮಾಡುತ್ತಾರೆ, ಬಂದಾಗಿದಲೂ ಇದೆ ರೀತಿ ನಡೆಯುತ್ತಿದೆ. ಮೊದಲ ದಿನದಿಂದಲೂ ಪಾರ್ಷ್ಯಲಿಟಿ ನಡೆಯುತ್ತಿದೆ ನಿಮದೆ ಇದು ಅರ್ಥ ಆಗದೆ ಇರಬಹುದು ಆದರೆ ಇದು ಬಿಗ್ ಬಾಸ್ ಗೆ ಅರ್ಥ ಆಗುತ್ತದೆ ಎಂದಿದ್ದಾರೆ ಸೋನು ಗೌಡ.
ಈ ಮಾತನ್ನು ಕೇಳಿ ಚಿತ್ರಾ ಅವರು ಎನ್ ಹೇಳ್ತಿದ್ಯಾ ಸೋನು, ಯಾವತ್ತು ಯಾರಿಗೂ ಪಾರ್ಷ್ಯಲಿಟಿ ಮಾಡಿಲ್ಲ. ಇನ್ನು ಮಾತು ಮುಂದುವರೆಸಿದ ಸೋನು ಮಾತುಗಳನ್ನು ಕೇಳಿ ಚಿತ್ರಾ ನಕ್ಕಿದ್ದಾರೆ. ಇದೀಗ ಈ ವಿಡಿಯೋ ನೋಡಿ ನೆಟ್ಟಿಗರು ಸೋನು ಗೌಡ ಅವರನ್ನು ಇನ್ನಷ್ಟು ಟ್ರೋಲ್ ಮಾಡುತ್ತಿದ್ದಾರೆ.