ಕನ್ನಡದ ಮಾಸ್ ಹೀರೋಯಿನ್ ಎಂದೇ ಖ್ಯಾತಿ ಪಡೆದಿರುವ ನಟಿ ಮಾಲಾಶ್ರೀ. ಮೊದ ಮೊದಲು ಫ್ಯಾಮಿಲಿ ಎಮೋಷನಲ್ ಹಾಗೂ ಕಮರ್ಷಿಯಲ್ ಸಿನಿಮಾಗಳಲ್ಲಿ ಕಾಣಿಸಿಕೊಂಡು ಅದೆಷ್ಟೋ ಜನರ ಕನಸ್ಸಿನ ರಾಣಿಯಾಗಿ ಗುರುತಿಸಿಕೊಂಡಿದ್ದ ನಟಿ ಮಾಲಾಶ್ರೀ ನಂತರ ಮಾಸ್ ಹೀರೋಯಿನ್ ಆಗಿ ಬದಲಾದರು.
ತಮ್ಮ ಅದ್ಭುತ ಅಭಿನಯ ಹಾಗೂ ಗ್ಲಾಮರ್ ನ ಮೂಲಕ ನಟಿ ಮಾಲಾಶ್ರೀ ಸ್ಯಾಂಡಲ್ವುಡ್ ನ ಕನಸ್ಸಿನ ರಾಣಿ ಎಂದೇ ಖ್ಯಾತಿ ಗಳಿಸಿದ್ದಾರೆ. ಯಾವುದೇ ಪಾತ್ರವಾದರೂ ಸಹ ಅದಕ್ಕೆ ತಕ್ಕಂತೆ ನಟಿಸಿ, ಆ ಪಾತ್ರಕ್ಕೆ ಜೀವ ತುಂಬುವ ಕೆಲಸ ಮಾಡಿದ್ದಾರೆ ನಟಿ ಮಾಲಾಶ್ರೀ.
ಇನ್ನು ಇತ್ತೀಚೆಗೆ ನಟಿ ಮಾಲಾಶ್ರೀ ಅವರ ಪತಿ ಕೋಟಿ ರಾಮು ಆರೋಗ್ಯದಲ್ಲಿ ಏರುಪೆರಾಗಿ ನಮ್ಮನ್ನೆಲ್ಲಾ ಬಿಟ್ಟುಹೋದರು. ಇನ್ನು ಈ ದುಃಖದಿಂದ ಹೊರ ಬರಲು ನಟಿ ಮಾಲಾಶ್ರೀ ತಮ್ಮ ಕೈಯಲ್ಲಿ ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇನ್ನು ತಮ್ಮ ಪತಿಯ ಆಸೆಯಂತೆ ನಟಿ ಮತ್ತೆ ಸಿನಿಮಾರಂಗಕ್ಕೆ ಕಮ್ ಬ್ಯಾಕ್ ಮಾಡಿ ಅವರ ಅಭಿಮಾನಿಗಳಿಗೆ ಸಂತಸ ತಂದುಕೊಟ್ಟಿದ್ದಾರೆ.
ಕನ್ನಡ ಚಿತ್ರರಂಗದ ಕನಸ್ಸಿನ ರಾಣಿ ಎಂದೇ ಪ್ರಖ್ಯಾತಿ ಆಗಿರುವ ನಟಿ ಮಾಲಾಶ್ರೀ ಅವರು ತಮ್ಮ ಪತಿ ಕೋಟಿ ರಾಮು ನಿಧನದ ಬಳಿಕ ತಮ್ಮ ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ತಾವೇ ವಹಿಸಿಕೊಂಡು, ಇಬ್ಬರ ಮಕ್ಕಳ ಜೀವನದ ಬಗ್ಗೆ ತುಂಬಾನೇ ಕನಸ್ಸು ಕಂಡಿದ್ದರು.
ಇನ್ನು ಇಂದು ಮಾಲಾಶ್ರೀ ಅವರ ಹುಟ್ಟುಹಬ್ಬ, ಮಾಲಾಶ್ರೀ ಅವರ ಹುಟ್ಟುಹಬ್ಬದ ದಿನ ನಟ ದರ್ಶನ್ ಮಾಲಾಶ್ರೀ ಅವರ ಮನೆಗೆ ಬಂದು ಎಂತಹ ಸರ್ಪ್ರೈಸ್ ಕೊಟ್ಟಿದ್ದಾರೆ ಗೊತ್ತಾ? ಇನ್ನು ನಟ ದರ್ಶನ್ ಅವರನ್ನು ಕಂಡು ಮಾಲಾಶ್ರೀ ಹಾಗೂ ಅವರ ಮಕ್ಕಳು ಶಾಕ್ ಆಗಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೆವೆ ಮುಂದಕ್ಕೆ ಓದಿ..
ಮೊನ್ನೆ ತಾನೆ ಮಾಲಾಶ್ರೀ ತಮ್ಮ ಮಗಳು ಅನನ್ಯ ವಿಷಯದಲ್ಲಿ ಗುಡ್ ನ್ಯೂಸ್ ಹಂಚಿಕೊಂಡಿದ್ದರು. ಹೌದು ನಟ ದರ್ಶನ್ ಅವರ ಡಿ56 ಸಿನಿಮಾದಲ್ಲಿ ನಟಿ ಮಾಲಾಶ್ರೀ ಮಗಳು ನಾಯಕಿಯಾಗಿರುವ ವಿಷಯ ಕೇಳಿ ಇಡೀ ಚಿತ್ರರಂಗವೇ ಆಶ್ಚರ್ಯ ಪಟ್ಟಿತು.
ರಾಮು ಅವರು ಇದ್ದಾಗಿನಿಂದಲೂ ದರ್ಶನ್ ಹಾಗೂ ಮಾಲಾಶ್ರೀ ಕುಟುಂಬದ ನಡುವೆ ಒಳ್ಳೆಯ ಒಡನಾಟ ವಿದೆ. ಇನ್ನು ಮಾಲಾಶ್ರೀ ಅವರಿಗೆ ದರ್ಶನ್ ಗೆ ತುಂಬಾ ಗೌರವವಿದೆ. ಇನ್ನು ಇಂದು ಮಾಲಾಶ್ರೀ ಅವರ ಹುಟ್ಟುಹಬ್ಬ ಎಂದು ತಿಳಿದ ಕೂಡಲೇ ಡಿ ಬಾಸ್ ನೇರವಾಗಿ ಮಾಲಾಶ್ರೀ ಅವರ ಮನೆಗೆ ಭೇಟಿ ನೀಡಿ, ವಿಶೇಷವಾದ ಹೂವಿನ ಬೊಕ್ಕೆ ಕೊಟ್ಟು ಮಾಲಾಶ್ರೀ ಅವರಿಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ.