ಕನ್ನಡ ಚಿತ್ರರಂಗದ ನಟ ರಾಕ್ಷಸ ಎಂದೇ ಖ್ಯಾತಿ ಪಡೆದಿರುವ ನಟ ಡಾಲಿ ಧನಂಜಯ. ತಮ್ಮ ಅದ್ಭುತ ಅಭಿನಯ ಹಾಗೂ ತಮ್ಮ ಡೈಲಾಗ್ ಡಿಲಿವರಿ ಮೂಲಕ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ ನಟ ಧನಂಜಯ. ಇನ್ನು ಕನ್ನಡದ ಜೊತೆಗೆ ಬೇರೆ ಭಾಷೆಗಳಲ್ಲಿ ಸಹ ನಟಿಸಿ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದ್ದಾರೆ.
ಮೊದ ಮೊದಲು ಶಾರ್ಟ್ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ನಟ ಧನಂಜಯ ತಮ್ಮ ಸಿನಿ ಬದುಕನ್ನು ಶುರು ಮಾಡಿದರು. ನಂತರ ಕನ್ನಡದ ನಿರ್ದೇಶಕ ಗುರುಪ್ರಸಾದ್ ಅವರ ಡೈರೆಕ್ಟರ್ಸ್ ಸ್ಪೆಷಲ್ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ನಟ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು.
ಈ ಸಿನಿಮಾಗೆ ಒಳ್ಳೆಯ ರೆಸ್ಪಾನ್ಸ್ ಜೊತೆಗೆ ಸಾಕಷ್ಟು ನೆಗಟಿವ್ ರೆಸ್ಪಾನ್ಸ್ ಕೂಡ ದೊರೆಕಿತ್ತು. ನಂತರ ಬಾಕ್ಸರ್, ಜೆಸ್ಸಿ, ಬದ್ಮಾಷ್, ಅಲ್ಲಮ್ಮ, ಎರಡನೇಸಲ ಇನ್ನು ಮುಂತಾದ ಸಿನಿಮಾಗಳಲ್ಲಿ ನಾಯಕನಟನಾಗಿ ಅಭಿನಯಿಸಿದ್ದರು. ಈ ಎಲ್ಲಾ ಸಿನಿಮಾಗಳು ನಿರೀಕ್ಷೆ ಮಟ್ಟವನ್ನು ತಲುಪಲಿಲ್ಲ.
ಇನ್ನು ಟಗರು ಸಿನಿಮಾದಲ್ಲಿ ನಟ ಶಿವರಾಜ್ ಕುಮಾರ್ ಅವರ ಜೊತೆಗೆ ಖಳನಾಯಕನ ಪಾತ್ರದಲ್ಲಿ ಅಭಿನಯಿಸಿದ್ದರು. ಈ ಸಿನಿಮಾದಲ್ಲಿ ಡಾಲಿ ಪಾತ್ರದಲ್ಲಿ ಜೀವಿಸಿದ್ದ ನಟ ಧನಂಜಯ ಅವರನ್ನು ಇಂದಿಗೂ ಸಹ ಜನ ಡಾಲಿ ಧನಂಜಯ ಎಂದೇ ಗುರುತಿಸುತ್ತಾರೆ. ಅಷ್ಟರ ಮಟ್ಟಿಗೆ ಜನರ ಮನಸ್ಸಿನಲ್ಲಿ ನೆಲೆ ಮಾಡಿದ್ದಾರೆ ನಟ ಧನಂಜಯ.
ಇನ್ನು ನಾಯಕ ನಟನಾಗಿ ಎಂಟ್ರಿ ಕೊಟ್ಟ ಧನಂಜಯ ಹೆಚ್ಚಾಗಿ ಗುರುತಿಸಿಕೊಂಡಿದ್ದು ಖಳನಾಯಕನ ಪಾತ್ರದಲ್ಲಿ. ಇನ್ನು ಕನ್ನಡದ ಜೊತೆಗೆ ತೆಲುಗು ಹಾಗೂ ಇನ್ನು ಬೇರೆ ಭಾಷೆಗಳಲ್ಲಿ ಖಳನಾಯಕನ ಪಾತ್ರದಲ್ಲಿ ನಟ ಧನಂಜಯ ಮಿಂಚಿದ್ದಾರೆ. ಈ ಮೂಲಕ ನಟ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ.
ಇನ್ನು ನಟ ಧನಂಜಯ ಅವರ ಇತ್ತೀಚೆಗೆ ಬಿಡುಗಡೆಯಾದ ರತ್ನನ್ ಪ್ರಪಂಚ ಹಾಗೂ ಬಡವ ರಾಸ್ಕಲ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಇದೀಗ ನಟ ಧನಂಜಯ ಮಾನ್ಸೂನ್ ಕಥೆಗಳು ಎಂಬ ಸಿನಿಮಾದಲ್ಲಿ ನಟಿ ರಚಿತಾ ರಾಮ್ ಜೊತೆಗೆ ಸ್ಕ್ರೀನ್ ಶೇರ್ ಮಾಡಿದ್ದಾರೆ.
ಈ ಸಿನಿಮಾದ ಶೂಟಿಂಗ್ ವೇಳೆ ಒಂದು ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಕತ್ ಸದ್ದು ಮಾಡುತ್ತಿದೆ. ಹೌದು ಈ ವಿಡಿಯೋದಲ್ಲಿ ನಟ ಧನಂಜಯ ರಚಿತಾ ರಾಮ್ ಅವರ ಕೆನ್ನೆ ಹಿಡಿದು ರೋಮ್ಯಾನ್ಸ್ ಮಾಡುತ್ತಿದ್ದಾರೆ ಇದೀಗ ಈ ವಿಡಿಯೋ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಇನ್ನು ಈ ಇಬ್ಬರ ಆನ್ ಸ್ಕ್ರೀನ್ ಜೋಡಿ ತುಂಬಾ ಚೆನ್ನಾಗಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಅಲ್ಲದೆ ಮಾನ್ಸೂನ್ ರಾಗ ಸಿನಿಮಾದ ಟ್ರೇಲರ್ ನೋಡಿ ಎಲ್ಲರೂ ಫಿದಾ ಆಗಿದ್ದಾರೆ. ಇದೆ ಆಗಸ್ಟ್ 12 ಕ್ಕೆ ಈ ಸಿನಿಮಾ ಬಿಡುಗಡೆಯಾಗುತ್ತಿದ್ದು, ಈ ಸಿನಿಮಾ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.