ರಾಕಿಂಗ್ ಸ್ಟಾರ್ ಯಶ್ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಟ ಯಶ್ ಅವರಿಗೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ, ಯಶ್ ಅವರನ್ನು ಆರಾಧಿಸಿ ಅವರನ್ನು ಫಾಲೋ ಮಾಡುತ್ತಾರೆ. ಅಭಿಮಾನಿಗಳು ಎಂದರೆ ಯಶ್ ಅವರಿಗೂ ಸಹ ಅಷ್ಟೇ ಪ್ರೀತಿ.
ಅಭಿಮಾನಿಗಳ ಜೊತೆ ಯಶ್ ಅವರ ಜೀವನದ ಬಹುಮುಖ್ಯ ಅಂಶ ಅವರ ಕುಟುಂಬ. ಯಶ್ ಅವರ ಒಡಹುಟ್ಟಿದ ತಂಗಿ ನಂದಿನಿ, ಅವರು ಅಣ್ಣನ ಜೊತೆ ಬಹಳ ಆತ್ಮೀಯರು. ಯಶ್ ಮತ್ತು ನಂದಿನಿ ಅವರ ಬಾಂಧವ್ಯ ಹೇಗಿದೆ ಗೊತ್ತಾ..
ಯಶ್ ಅವರದ್ದು ಬಹಳ ಸುಂದರವಾದ ಕಟುಂಬ. ತಂದೆ, ತಾಯಿ, ತಂಗಿ, ಭಾವ ತಂಗಿಯ ಇಬ್ಬರು ಮಕ್ಳಳು ಮತ್ತು ಪತ್ನಿ ಹಾಗೂ ಯಶ್ ಅವರ ಇಬ್ಬರು ಮಕ್ಕಳು. ಯಶ್ ಅವರ ಮನೆಯ ಮಹಾಲಕ್ಷ್ಮಿ ಆಗಿ ಹುಟ್ಟಿದ ಮುದ್ದಿನ ತಂಗಿಯ ಹೆಸರು ನಂದಿನಿ.
ಚಿಕ್ಕ ವಯಸ್ಸಿನಿಂದಲೂ ಯಶ್ ಅವರಿಗೆ ತಂಗಿ ಎಂದರೆ ಬಹಳ ಪ್ರೀತಿ ಮತ್ತು ಅಕ್ಕರೆ. ತಂಗಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ತಂಗಿಗೆ ಎಲ್ಲವನ್ನೂ ಕೊಡಿಸಿ ಸಂತೋಷವಾಗಿ ನೋಡಿಕೊಳ್ಳಬೇಕು ಎಂಬುದು ಯಶ್ ಅವರ ಆಸೆಯಾಗಿತ್ತು.
ತಂಗಿಯ ಮದುವೆಯನ್ನು ಅದ್ಧೂರಿಯಾಗಿ ಮಾಡಬೇಕು ಎಂಬುದು ಸಹ ಯಶ್ ಅವರ ಕನಸಾಗಿತ್ತು. ಅಂದುಕೊಂಡ ಹಾಗೆ ತಂಗಿ ನಂದಿನಿ ಅವರ ಮದುವೆಯನ್ನು ವಿಜೃಂಭಣೆಯಿಂದ ಮಾಡಿದರು ಯಶ್.
ಯಶ್ ಅವರು ಸಿನಿರಂಗಕ್ಕೆ ಎಂಟ್ರಿ ಕೊಟ್ಟು ಯಶಸ್ಸು ಪಡೆದ ನಂತರ ರಾಹುಲ್ ಅವರ ಜೊತೆ ನಂದಿನಿ ಅವರ ಮದುವೆ ನಡೆಯಿತು. ನಂದಿನಿ ಅವರ ಪತಿ ರಾಹುಲ್ ಹೈದರಾಬಾದ್ ಮೂಲದವರು ಎನ್ನುವ ಮಾಹಿತಿ ಸಿಕ್ಕಿದೆ. ನಂದಿನಿ ರಾಹುಲ್ ದಂಪತಿಗೆ ಇಬ್ಬರು ಗಂಡುಮಕ್ಕಳು.
ಮುದ್ದಿನ ಅಳಿಯಂದಿರು ಎಂದರೆ ಯಶ್ ಅವರಿಗೆ ಬಹಳ ಪ್ರೀತಿ. ನಂದಿನಿ ಅವರ ಎರಡನೇ ಮಗು 2020ರ ವರ್ಷ ಏಪ್ರಿಲ್ ತಿಂಗಳಿನಲ್ಲಿ ಹುಟ್ಟಿತು. ನಂದಿನಿ ಅವರು ಪತಿ ಮತ್ತು ಮಕ್ಕಳ ಜೊತೆ ಸಂತೋಷವಾದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಆಕ್ಟಿವ್ ಆಗಿರುವ ನಂದಿನಿ ಅವರು, ಆಗಾಗ ತಮ್ಮ ಫ್ಯಾಮಿಲಿ ಜೊತೆ ಮತ್ತು ಅಣ್ಣನ ಫ್ಯಾಮಿಲಿ ಜೊತೆ ಇರುವ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ.
ಇದೀಗ ನಟ ಯಶ್ ಅವರ ಮನೆಯಲ್ಲಿ ರಾಖಿ ಹಬ್ಬ ಅದ್ದೂರಿಯಾಗಿ ನಡೆದಿದೆ.
ಯಶ್ ಅವರ ತಂಗಿ ನಂದಿನಿ ಯಶ್ ಅವರಿಗೆ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಅಣ್ಣನಿಗೆ ರಾಖಿ ಕಟ್ಟಿ, ಅವರ ರಕ್ಷಣೆಯ ಬಗ್ಗೆ ದೇವರಲ್ಲಿ ಪ್ರಾರ್ಥಿಸಿದ್ದಾರೆ. ಇನ್ನು ರಾಖಿ ಕಟ್ಟಿದ್ದಕ್ಕೆ ಯಶ್ ಅವರ ತಂಗಿಗೆ ಭರ್ಜರಿ ಉಡುಗೊರೆಯನ್ನೇ ಗಿಫ್ಟ್ ಆಗಿ ನೀಡಿದ್ದಾರೆ. ಇನ್ನು ಈ ಫೋಟೋಗಳು ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ.