ಕೆಲವು ಧಾರಾವಾಹಿಗಳು ವೀಕ್ಷಕರ ಮನಸ್ಸಿನಲಿ ಸದಾ ಕಾಲ ಉಳಿದು ಬಿಡುತ್ತದೆ. ಆ ಧಾರವಾಹಿಯ ಕಥೆ ಹಾಗೂ ಆ ಧಾರವಾಹಿಯ ಪಾತ್ರಗಳು ಎಲ್ಲವೂ ವೀಕ್ಷಕರನ್ನು ರಂಜಿಸಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿರುತ್ತದೆ. ಇನ್ನು ಎಲ್ಲಾ ವಾಹಿನಿಗಳು ಒಂದು ಸೂಪರ್ ಹಿಟ್ ಧಾರವಾಹಿಯನ್ನು ವೀಕ್ಷಕರ ಮುಂದಿಟ್ಟು, ತಮ್ಮ ಟಿ ಆರ್ ಪಿ ರೇಟಿಂಗ್ ಹೆಚ್ಚಿಸಿಕೊಳ್ಳುವ ಎಲ್ಲಾ ಪ್ರಯತ್ನ ಮಾಡುತ್ತಿರುತ್ತದೆ.
ನಿಮ್ಮೆಲ್ಲರಿಗೂ ನೆನಪಿದೆಯಾ ಅಗ್ನಿಸಾಕ್ಷಿ ಧಾರವಾಹಿ ಈ ಧಾರಾವಾಹಿಯ ಮೂಲಕ ಸಾಕಷ್ಟು ಕಲಾವಿದರು ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು. ಸಿದ್ದಾರ್ಥ್ ಹಾಗೂ ಸನ್ನಿಧಿ ಪಾತ್ರ ಇಂದಿಗೂ ಅದೆಷ್ಟೋ ಜನರ ಫೇವರೇಟ್. ಈ ಇಬ್ಬರ ನಡುವಿನ ಪ್ರೀತಿ ದೃಶ್ಯಗಳಲಿಗಾಗಿ ಅಭಿಮಾನಿಗಳು ಕಾತುರಾಗುತ್ತಿದ್ದರು.
ಸನ್ನಿಧಿ ಇವರ ನಿಜವಾದ ಹೆಸರು ವೈಷ್ಣವಿ ಗೌಡ, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ದೇವಿ ಎಂಬ ಧಾರವಾಹಿಯಲ್ಲಿ ಮೊದಲು ನಟಿಸುವ ಮೂಲಕ ನಟಿ ವೈಷ್ಣವಿ ಗೌಡ ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು. ಈ ಧಾರವಾಹಿಯಲ್ಲಿ ದೇವಿಯ ಆರಾಧಕಳಾಗಿ ನಟಿ ಕಾಣಿಸಿಕೊಂಡಿದ್ದರು.
ನಂತರ ಕಲರ್ಸ್ ಕನ್ನಡದ ಅಗ್ನಿಸಾಕ್ಷಿ ಧಾರವಾಹಿಯ ಮೂಲಕ ನಟಿ ವೈಷ್ಣವಿ ಎಲ್ಲರ ಮನೆ ಮಗಳಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ಈ ಧಾರವಾಹಿ ಮುಗಿದ ಬಳಿಕ ಕಿಚ್ಚ ಸುದೀಪ್ ಅವರ ಬಿಗ್ ಬಾಸ್ ಸೀಸನ್ 8 ಕಾರ್ಯಕ್ರಮಕ್ಕೆ ಸ್ಪರ್ಧಿಯಾಗಿ ಭಾಗವಹಿಸಿದ್ದರು.
ವೈಷ್ಣವಿ ಅವರ ನೇರ ನುಡಿ ಹಾಗೂ ಸಹಜ ಸ್ವಭಾವದ ಮೂಲಕ ವೀಕ್ಷಕರ ಮನ ಗೆಲ್ಲುವಲ್ಲಿ ನಟಿ ಯಶಸ್ವಿಯಾದರು. ಕಿಚ್ಚ ಸುದೀಪ್ ಹಾಗೂ ವೈಷ್ಣವಿ ನಡುವಿನ ತುಂಟ ಮಾತುಗಳು ವೀಕ್ಷಕರಿಗೆ ಬಹಳ ಇಷ್ಟವಾಗುತ್ತಿತ್ತು. ಇನ್ನು ದೊಡ್ಮನೆಯಲ್ಲಿ ಟಾಪ್ 4ರ ಸ್ಥಾನದಲ್ಲಿ ನಟಿ ವೈಷ್ಣವಿ ಗೌಡ ತಮ್ಮ ಆಟ ಮುಗಿಸಿದ್ದರು.
ಇನ್ನು ಇದೀಗ ನಟಿ ವೈಷವಿ ಸಿನಿಮಾರಂಗಕ್ಕೆ ಕೂಡ ಎಂಟ್ರಿ ಕೊಟ್ಟಿದ್ದಾರೆ. ನಟಿ ಇದೀಗ ಸಾಲು ಸಾಲು ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ನಟಿ ವೈಷ್ಣವಿ ಹಾಗೂ ನಟ ವಿಜಯ್ ಸೂರ್ಯ ಮತ್ತೆ ಒಂದಾಗಿ ಹೊಸ ಧಾರಾವಾಹಿಯಲ್ಲಿ ಅಭಿನಯಿಸಲ್ಲಿದ್ದಾರೆ ಎಂದು ಹೇಳಲಾಗಿತ್ತು. ಶೀಘ್ರದಲ್ಲೇ ಈ ಜೋಡಿ ಮತ್ತೆ ತೆರೆ ಮೇಲೆ ಮೋಡಿ ಮಾಡಲು ರೆಡಿಯಾಗುತ್ತಿದೆ.
ಇನ್ನು ನಟಿ ವೈಷ್ಣವಿ ಅವರ ಸರಳ ಸ್ವಭಾವ ಎಲ್ಲರಿಗೂ ಸಹ ಗೊತ್ತೇ ಇದೆ. ಇನ್ನು ರಾಖಿ ಹಬ್ಬದ ದಿನ ತನ್ನ ಅಣ್ಣನ ಜೊತೆಗೆ ನಟಿ ತಮ್ಮ ಮನೆಯ ನಾಯಿಗೂ ಕೂಡ ರಾಖಿ ಕಟ್ಟಿದ್ದಾರೆ. ಮನೆಯ ನಾಯಿಯನ್ನು ತಮ್ಮ ಮನೆಯ ಒಬ್ಬ ಸದಸ್ಯರಾಗಿ ನೋಡುವ ವೈಷ್ಣವಿ ಅವರ ಈ ಗುಣ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ಸದ್ಯ ನಟಿ ನಾಯಿಗೆ ರಾಖಿ ಕಟ್ಟುತ್ತಿರುವ ಫೋಟೋ ಸೋಷಿಯಲ್ ಮೀಡಿಯಾ ಸಕತ್ ವೈರಲ್ ಆಗುತ್ತಿದೆ.