ರಾಕಿಂಗ್ ಸ್ಟಾರ್ ಯಶ್ ಇದೀಗ ಇದು ಕೇವಲ ಹೆಸರಲ್ಲ ಇದು ಒಂದು ಬ್ರಾಂಡ್ ಆಗಿ ಬಿಟ್ಟಿದೆ ಎಂದರೆ ತಪಾಗುವುದಿಲ್ಲ. ತಮ್ಮ ಅದ್ಭುತ ನಟನೆ ಹಾಗೂ ಇನ್ನಿತರ ಗುಣಗಳ ಮೂಲಕ ನಟ ಯಶ್ ಇದೀಗ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
ಕನ್ನಡ ಚಿತ್ರರಂಗದ ಸೊಗಡನ್ನು ಎಲ್ಲೆಡೆ ಸಾರಿದ ಯಶ್ ಇದೀಗ ಪ್ಯಾನ್ ಇಂಡಿಯಾ ನಟರ ಪೈಕಿ ಕೂಡ ಮೊದಲ ಸ್ಥಾನದಲ್ಲಿದ್ದಾರೆ. ಕೆಜಿಎಫ್ ಹಾಗೂ ಕೆಜಿಎಫ್ 2 ಸಿನಿಮಾಗಳ ಬಳಿಕ ಯಶ್ ಇದೀಗ ಮತ್ತೊಂದು ದೊಡ್ಡ ಪ್ರಾಜೆಕ್ಟ್ ನಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಯಶ್ ಅವರ ಮುಂದಿನ ಸಿನಿಮಾದ ಬಗ್ಗೆ ಇನ್ನೂ ಯಾವುದೇ ಅಪಡೆಟ್ ಸಿಕ್ಕಿಲ್ಲ.
ಯಶ್ ಅವರು ನಟಿ ರಾಧಿಕಾ ಪಂಡಿತ್ ಅವರನ್ನು ಮದುವೆಯಾಗಿ, ಈ ಜೋಡಿಗೆ ಇಬ್ಬರೂ ಮುದ್ದಾದ ಐರಾ ಮತ್ತು ಯಥರ್ವ್ ಎಂಬ ಮಕ್ಕಳಿದ್ದಾರೆ. ಸಿನಿಮಾರಂಗದಿಂದ ದೂರ ಉಳಿದಿರುವ ನಟಿ ರಾಧಿಕಾ ಪಂಡಿತ್ ಆಗಾಗ ಮಕ್ಕಳ ಹಾಗೂ ತಮ್ಮ ಫೋಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
ಇನ್ನು ಐರಾ ಮತ್ತು ಯಥರ್ವ್ ಈಗಾಲೇ ಸ್ಟಾರ್ ಗಳಾಗಿ ಬಿಟ್ಟಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಇವರದ್ದೇ ಫ್ಯಾನ್ ಪೇಜ್ ಗಳು ಕೂಡ ಶುರುವಾಗಿ ಬಿಟ್ಟಿದೆ. ಇಷ್ಟು ಚಿಕ್ಕ ವಯಸ್ಸಿನಲ್ಲೇ ಈ ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಆಗಿ ಬಿಟ್ಟಿದ್ದಾರೆ.
ಐರಾಳಿಗೆ ತನ್ನ ತಮ್ಮ ಯಥರ್ವ್ ಎಂದರೆ ಬಹಳ ಇಷ್ಟ. ತಮ್ಮನನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾಳೆ. ಈ ಇಬ್ಬರ ಜೊತೆಗಿನ ಕ್ಯೂಟ್ ದೃಶ್ಯಗಳನ್ನು ನಟಿ ರಾಧಿಕಾ ಪಂಡಿತ್ ಸೆರೆ ಹಿಡಿದು, ಆಗಾಗ ತಮ್ಮ ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಇನ್ನು ವಿಡಿಯೋ ನೋಡಿ ಅಭಿಮಾನಿಗಳು ಸಾಕಷ್ಟು ಮೆಚ್ಚುಗೆ ಕೂಡ ವ್ಯಕ್ತಪಡಿಸುತ್ತಿರುತ್ತಾರೆ.
ಇನ್ನು ನೆನ್ನೆ ರಾಖಿ ಹಬ್ಬ, ಈ ದಿನ ಎಲ್ಲಾ ಅಕ್ಕ ಮತ್ತು ತಂಗಿಯಂದಿರು ತಮ್ಮ ಸಹೋದರರಿಗೆ ರಾಖಿ ಕಟ್ಟಿ ಅವರ ರಕ್ಷಣೆಗಾಗಿ ಪ್ರಾರ್ಥಿಸುವುದು ನಿಮ್ಮೆಲ್ಲರಿಗೂ ಗೊತ್ತಿರುವ ವಿಚಾರ. ಇನ್ನು ಸಿನಿಮಾರಂಗದಲ್ಲಿ ಕೂಡ ನೆನ್ನೆ ರಾಖಿ ಹಬ್ಬ ತುಂಬಾ ಅದ್ದೂರಿಯಾಗಿ ನಡೆದಿದೆ.
ಯಶ್ ಮನೆಯಲ್ಲಿ ನೆನ್ನೆ ರಾಖಿ ಹಬ್ಬ ಬಹಳ ಅದ್ದೂರಿಯಾಗಿ ಜರುಗಿದೆ. ಐರಾ ತನ್ನ ತಮ್ಮ ಯಥರ್ವ್ ಗೆ ರಾಖಿ ಕಟ್ಟಿ ಅವನ ರಕ್ಷಣೆ ಮಾಡುವುದಾಗಿ ಹೇಳಿದ್ದಾರೆ. ಈ ಪುಟ್ಟಮಕ್ಕಳ ರಾಖಿ ಸಂಭ್ರಮ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ಇನ್ನು ಐರಾ ಯಥರ್ವ್ ಗೆ ರಾಖಿ ಕಟ್ಟುತ್ತಿರುವ ವಿಡಿಯೊಯನ್ನು ನಟಿ ರಾಧಿಕಾ ಪಂಡಿತ್ ಸೆರೆ ಹಿಡಿದ್ದಿದ್ದಾರೆ.
ಈ ವಿಡಿಯೋವನ್ನು ನಟಿ ತಮ್ಮ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಸದ್ಯ ಈ ವಿಡಿಯೋ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಇನ್ನು ಅಣ್ಣ ತಂಗಿ ಎಂದರೆ ಈ ರೀತಿ ಇರಬೇಕು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ನಿಮಗೂ ಕೂಡ ಐರಾ ಯಥರ್ವ್ ಇಷ್ಟವಾಗಿದ್ದರೆ ಈ ವಿಡಿಯೋವನ್ನು ನೋಡಿ ಆನಂಧಿಸಿ.