ಬಿಗ್ ಬಾಸ್ ಕನ್ನಡ ತನ್ನ 8 ಸೀಸನ್ ಗಳನ್ನು ಅದ್ದೂರಿಯಾಗಿ ಮುಗಿಸಿದೆ. ಇನ್ನು ತನ್ನ ವೀಕ್ಷಕರನ್ನು ರಂಜಿಸುವ ಸಲುವಾಗಿ ಇದೀಗ ಬಿಗ್ ಬಾಸ್ ತಂಡ ಈ ಬಾರಿ ಹೊಸ ರೀತಿಯಲ್ಲಿ ಬಿಗ್ ಬಾಸ್ ಸೀಸನ್ ತಂದಿದೆ. ಹೌದು ಈ ಬಾರಿ ಬಿಗ್ ಬಾಸ್ ಸೀಸನ್ 9 ರ ಮೊದಲು ಇದೀಗ ಬಿಗ್ ಬಾಸ್ ಓಟಿಟಿ ಮೊದಲ ಸೀಸನ್ ನನ್ನು ಬಿಗ್ ಬಾಸ್ ತಂಡ ತಂದಿದೆ.
ಇನ್ನು ಈ ಓಟಿಟಿ ಸೀಸನ್ ಅನ್ನು ಕೂಡ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡುತ್ತಿದ್ದು, ಅವರ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಇನ್ನು ಈ ಬಾರಿಯ ಬಿಗ್ ಬಾಸ್ ಓಟಿಟಿ ಸೀಸನ್ ಕೇವಲ ವೂಟ್ ನಲ್ಲಿ ಮಾತ್ರ ಪ್ರಸಾರವಾಗಲಿದ್ದು, ಈ ಬಾರಿ 24/7 ಲೈವ್ ಸ್ಟ್ರೀಮಿಂಗ್ ಕೂಡ ಇದೆ.
ಬಿಗ್ ಬಾಸ್ ಕನ್ನಡ ಓಟಿಟಿ ಮೊದಲ ಸೀಸನ್ ಗೆ ಬಿಗ್ ಬಾಸ್ ತಂಡ ಸೋಷಿಯಲ್ ಮಿಡಿಯಾದ ಸ್ಟಾರ್ ಗಳನ್ನು ಸ್ಪರ್ಧಿಗಳಾಗಿ ಆಯ್ಕೆ ಮಾಡಿ ತಂದಿದ್ದಾರೆ. ಈಗಾಗಲೇ ಬಿಗ್ ಬಾಸ್ ಓಟಿಟಿ ಸೀಸನ್ ಶುರುವಾಗಿದ್ದ, ಎಲ್ಲರಿಂದ ಸಾಕಷ್ಟು ಮೆಚ್ಚುಗೆ ಪಡೆದುಕೊಳ್ಳುತ್ತಿದೆ.
ಆರ್ಯವರ್ಧನ್ ಗುರೂಜಿ, ಸೋನು ಶ್ರೀನಿವಾಸ್ ಗೌಡ, ಸಾನಿಯಾ ಐಯರ್, ಸೋಮಣ್ಣ ಮಂಚಿಮಡ, ಸ್ಫೂರ್ತಿ ಗೌಡ, ಅರ್ಜುನ್ ರಮೇಶ್, ರೂಪೇಶ್ ಶೆಟ್ಟಿ, ಅಕ್ಷತಾ ಕುಕ್ಕಿ, ರಾಕೇಶ್ ಅಡಿಗ, ಚೈತ್ರ ಅಲಿಕೆರೆ, ಕಿರಣ್ ಯೋಗೇಶ್ವರ್, ಜಯಶ್ರೀ ಆರಾಧ್ಯ, ಲೋಕೇಶ್, ಜಸ್ವಂತ್ ಮತ್ತು ನಂದು ಸ್ಪರ್ಧಿಗಳಾಗಿ ಎಂಟ್ರಿ ಕೊಟ್ಟಿದ್ದಾರೆ.
ಇನ್ನು ಆರ್ಯವರ್ಧನ್ ಗುರೂಜಿ ತಮ್ಮ ಹಾಸ್ಯ ಮಾತುಗಳಿಂದ ಜನರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತೀಚೆಗೆ ಆರ್ಯವರ್ಧನ್ ಗುರೂಜಿ ತಮ್ಮ ಸಂಪೂರ್ಣ ಲುಕ್ ಚೇಂಜ್ ಮಾಡಿದ್ದು, ಹೌದು ಅರ್ಜುನ್ ರಮೇಶ್ ಅವರ ಕೈಯಲ್ಲಿ ಆರ್ಯವರ್ಧನ್ ಗುರೂಜಿ ತಮ್ಮ ತಲೆ ಕೂದಲನ್ನು ಸಂಪೂರ್ಣವಾಗಿ ಬೊಲಿಸಿದ್ದರು.
ಇನ್ನು ಇದೀಗ ಆರ್ಯವರ್ಧನ್ ಗುರೂಜಿ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಹೌದು ಬಿಗ್ ಮನೆಯಲ್ಲಿ ತಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಲು ಆರ್ಯವರ್ಧನ್ ಗುರೂಜಿ ಇದೀಗ ಮೊದಲ ಬಾರಿಗೆ ಮೇಕ್ ಅಪ್ ಹಾಕಿಸಿಕೊಂಡಿದ್ದಾರೆ. ಹೌದು ಜಯಶ್ರೀ ಆರಾಧ್ಯ ಅವರ ಕೈಯಲ್ಲಿ ಮೇಕ್ ಹಾಕಿಸಿಕೊಂಡಿದ್ದಾರೆ.
ಇನ್ನು ಜಯಶ್ರೀ ಅವರು ಗುರೂಜಿಗೆ ಸಂಪೂರ್ಣ ಲುಕ್ ಮೇಕ್ ಅಪ್ ಹಾಕಿ ಅವರ ಲುಕ್ ಚೇಂಜ್ ಮಾಡಿದ್ದಾರೆ. ಇನ್ನು ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಇನ್ನು ವೀಕ್ಷಕರನ್ನು ರಂಜಿಸಲು ಆರ್ಯವರ್ಧನ್ ಗುರೂಜಿ ಒಂದೆಲ್ಲಾ ಒಂದು ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಇನ್ನು ವಿಕ್ಷಕರು ಕೂಡ ಆರ್ಯವರ್ಧನ್ ಗುರೂಜಿ ಅವರ ಹಾಸ್ಯ ಸ್ವಭಾವದಿಂದ ಅವರಿಗೆ ಸಾಕಷ್ಟು ಮೆಚ್ಚುಗೆ ಸೂಚಿಸುತ್ತಿದ್ದಾರೆ.