ಕರುನಾಡ ರತ್ನ ಪುನೀತ್ ರಾಜ್ ಕುಮಾರ್ ಅವರು ನಮ್ಮ ಜೊತೆ ಇಲ್ಲ ಎನ್ನುವುದನ್ನು ನೆನೆದರೂ ಕೂಡ ಮನಸ್ಸಿಗೆ ಬಹಳ ದುಃಖವಾಗುತ್ತದೆ. ಪುನೀತ್ ಅವರು ಈಗಲೂ ಸಹ ಎಲ್ಲೋ ಒಂದು ಕಡೆ ನಮ್ಮನ್ನು ನೋಡುತ್ತಿದ್ದಾರೆ ಎನ್ನುವ ಭಾವನೆ ನಮ್ಮ ಮನಸ್ಸಿನಲ್ಲಿ ಮೂಡುತ್ತದೆ.
ಪುನೀತ್ ರಾಜ್ ಕುಮಾರ್ ಅವರು ಒಬ್ಬ ಅದ್ಭುತ ನಟ ಮಾತ್ರ ಅಲ್ಲ. ಒಬ್ಬ ಅದ್ಭುತ ಮನುಷ್ಯ ಕೂಡ ಹೌದು. ಯಾರಿಗಾದರೂ ಕಷ್ಟ ಎಂದು ಬಂದರೆ ಒಂದು ಕ್ಷಣ ಕೂಡ ಯೋಚಿಸದೆ ಅವರ ಸಹಾಯಕ್ಕೆ ನಿಲ್ಲುವಂತಹ ಗುಣ ನಮ್ಮ ಅಪ್ಪು ಅವರದ್ದು.
ಇಂದಿಗೂ ಸಹ ಅಪ್ಪು ಹೆಸರಿನಲ್ಲಿ ಅದೆಷ್ಟೋ ಒಳ್ಳೆಯ ಕಾರ್ಯಗಳು ದಿನ ನಿತ್ಯ ನಡೆಯುತ್ತಲೆ ಇರುತ್ತದೆ. ಅಂತಹ ಒಳ್ಳೆಯ ಹಾಗೂ ಸಹಜ ಗುಣಗಳ ವ್ಯಕ್ತಿ ಇಂದು ನಮ್ಮೊಂದಿಗೆ ಇಲ್ಲ ಎನ್ನುವುದನ್ನು ನೆನಪಿಸಿಕೊಂಡರು ಸಹ ಮನಸ್ಸಿಗೆ ಬಹಳ ದುಃಖವಾಗುತ್ತದೆ.
ನಟ ಪುನೀತ್ ರಾಜಕುಮಾರ್ ಅವರು ನಮ್ಮನ್ನು ಆಗಲಿ ಹಲವಾರು ತಿಂಗಳು ಕಳೆದೆ ಹೋಗಿದೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಈಗ ತಾನೆ ಸಹಜ ಜೀವನ ಪ್ರಾರಂಭಿಸಿದ್ದಾರೆ, ಅವನ ಎಲ್ಲ ಮರೆಯಲು ಪ್ರಾರಂಭಿಸುತ್ತಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಹಲವರು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು.
ಇನ್ನು ನಟ ಪುನೀತ್ ರಾಜಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನವಂಬರ್ ಒಂದರಂದು ಪ್ರಧಾನ ಮಾಡಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದ್ದು ಇಡೀ ರಾಜ ಕುಟುಂಬ ವೇದದಲ್ಲಿ ಭಾಗವಹಿಸಲಿದೆ. ಇನ್ನು ಈ ವಿಷಯ ಅವರ ಅಭಿಮಾನಿಗಳಿಗೆ ಬಹಳ ಸಂತೋಷ ಉಂಟುಮಾಡಿದೆ.
ಇನ್ನು ನಟ ಪುನೀತ್ ರಾಜ್ ಕುಮಾರ್ ಅವರು ಬಹಳ ಇಷ್ಟ ಪಟ್ಟು ತಮಗಾಗಿ ಒಂದು ಮನೆಯನ್ನ7 ಕಟ್ಟಿಕೊಂಡಿದ್ದರು. ಇನ್ನು ಪುನೀತ್ ಅವರ ಕನಸ್ಸಿನ ಮನೆ ಹೇಗಿದೆ ಎಂದು ನೀವು ನೋಡಬೇಕಾ ಹಾಗಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ. ಬನ್ನಿ ಅಪ್ಪು ಅವರ ಕನಸ್ಸಿನ ಮನೆ ಹೇಗಿದೆ ಎಂದು ನೋಡೋಣ..
ಅಪ್ಪು ಅವರ ಮನೆಯನ್ನು ಆಧುನಿಕತೆಯ ಜೊತೆಗೆ, ಸಾಂಪ್ರದಾಯಿಕವಾಗಿ ಕಟ್ಟಿಸಿದ್ದಾರೆ. ಮನೆಯ ಒಳಗಡೆ ಸುಂದರವಾದ ಪೇಂಟಿಂಗ್ ಗಳು, ಮನೆಯ ಹೊರಗೆ ಸಾಕಷ್ಟು ಗಿಡ ಮರ ಇರುವ ಗಾರ್ಡನ್, ಮನೆಯೊಳಗೆ ಐಷಾರಾಮಿ ಉಪಕರಣಗಳು. ಜೊತೆಗೆ ಮಕ್ಕಳಿಗೆ ಇಷ್ಟ ಆಗುವಂಥಹ ವಾತಾವರಣ ಅಪ್ಪು ಅವರ ಮನೆಯಲ್ಲಿದೆ.