ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಭಾರತ ಚಿತ್ರರಂಗದ ಬ್ಯುಸಿ ನಟರಲ್ಲಿ ಒಬ್ಬರು. ಕನ್ನಡದಲ್ಲಿ ಬಹಳ ಜನಪ್ರಿಯತೆ ಹೊಂದಿರುವ ಸುದೀಪ್ ಇತರ ಭಾಷೆಗಳ ಚಿತ್ರರಂಗದಲ್ಲೂ ಬಹುಬೇಡಿಕೆಯ ನಟ. ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಸುದೀಪ್ ಅವರಿಗೆ ಬಹಳ ಬೇಡಿಕೆ ಇದೆ.
ಈಗಾಗಲೇ ತಮ್ಮ ಅಭಿನಯ ಚಾತುರ್ಯತೆಯಿಂದ ಇತರ ಚಿತ್ರರಂಗದಲ್ಲೂ ಬಹಳ ಜನಪ್ರಿಯತೆ ಗಳಿಸಿದ್ದಾರೆ ಸುದೀಪ್. ಪ್ರಸ್ತುತ ವಿಕ್ರಾಂತ್ ರೋಣ ಸಿನಿಮಾ ಮೂಲಕ ವಿಶ್ವಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ.
ನಟ ಕಿಚ್ಚ ಸುದೀಪ್ ಅವರ ವಿಕ್ರಾಂತ್ ರೋಣ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿ ವೀಕ್ಷಕರಿಂದ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿತ್ತು. ಹೌದು ಇನ್ನು ಅವರ ಅಭಿಮಾನಿಗಳು ಸಹ ಅವರ ಈ ಸಿನಿಮಾಗೆ ಸಾಕಷ್ಟು ಪ್ರೀತಿ ವ್ಯಕ್ತಪಡಿಸಿದ್ದರು. ವಿಕ್ರಾಂತ್ ರೋಣ ಸಿನಿಮಾದ ಕ್ಲೈಮಾಕ್ಸ್ ನಿಂದ ಅಭಿಮಾನಿಗಳು ಸಕತ್ ಕುಶ್ ಆಗಿದ್ದಾರೆ.
ಸದ್ಯ ನಟ ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಸಿನಿಮಾದ ಯಶಸ್ಸಿನ ಖುಷಿಯಲ್ಲಿದ್ದಾರೆ. ಇನ್ನು ಕಿಚ್ಚ ಸುದೀಪ್ ಅವರು ಸದ್ಯ ಬಿಗ್ ಬಾಸ್ ಓಟಿತಿಯಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಇದರ ಜೊತೆಗೆ ಅವರ ಮುಂದಿನ ಸಿನಿಮಾದ ಬಗ್ಗೆ ಚರ್ಚೆಗಳು ಶುರುವಾಗಿದೆ.
ಇನ್ನು ಸಿನಿಮಾ ಕೆಲಸಗಳ ಜೊತೆಗೆ ನಟ ಕಿಚ್ಚ ಸುದೀಪ್ ಅವರ ಫ್ಯಾಮಿಲಿಗೂ ಸಹ ಅಷ್ಟೇ ಸಮಯ ಕೊಡುತ್ತಾರೆ. ಇನ್ನು ಇದೀಗ ಕಿಚ್ಚ ಸುದೀಪ್ ಮನೆಯಲ್ಲಿ ರಾಖಿ ಸಂಭ್ರಮ ನಡೆದಿದ್ದು, ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಕಿಚ್ಚ ಸುದೀಪ್ ಅವರಿಗೆ ಒಬ್ಬರು ಅಕ್ಕ ಇದ್ದು, ಇನ್ನು ನೆನ್ನೆ ರಾಖಿ ಹಬ್ಬದ ಪ್ರಯುಕ್ತ ಸುದೀಪ್ ಅವರ ಅಕ್ಕ ಸುಜಾತಾ ಅವರು ಸುದೀಪ್ ಗೆ ರಾಖಿ ಕಟ್ಟಲೆಂದು ಸುದೀಪ್ ಮನೆಗೆ ಬಂದಿದ್ದಾರೆ.
ಇನ್ನು ಸುಜಾತಾ ಅವರು ರಾಖಿ ತಂದು ತಮ್ಮ ಸುದೀಪ್ ಅವರಿಗೆ ಕಟ್ಟಿ ಅವರಿಗೆ ಶುಭ ಹಾರೈಸಿದ್ದಾರೆ. ಇನ್ನು ರಾಖಿ ಕಟ್ಟಿದ್ದಕ್ಕೆ ಸುದೀಪ್ ಅಕ್ಕನಿಗೆ ಭರ್ಜರಿ ಉಡುಗಿರೆಯನ್ನೇ ನೀಡಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತದೆ.