ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಮಾಲಾಶ್ರೀ ಮಗಳಿಗೆ ಭರ್ಜರಿ ಗಿಫ್ಟ್ ಕೊಟ್ಟ ಡಿ ಬಾಸ್..

ಸ್ಯಾಂಡಲವುಡ್

ಸ್ಯಾಂಡಲ್ವುಡ್ ನ ಕನಸ್ಸಿನ ರಾಣಿ ಎಂದೇ ಖ್ಯಾತಿ ಪಡೆದಿರುವ ನಟಿ ಮಾಲಾಶ್ರೀ. ತಮ್ಮ ಅದ್ಭುತ ನಟನೆ ಹಾಗೂ ಗ್ಲಾಮರ್ ನ ಮೂಲಕ ಒಂದು ಕಾಲದಲ್ಲಿ ಅದೆಷ್ಟೋ ಜನರ ಫೇವರೇಟ್ ಆಗಿದ್ದರು. ಇಂದಿಗೂ ಸಹ ಮಾಲಾಶ್ರೀ ಸಿನಿಮಾಗಳು ಎಂದರೆ ಅವರ ಅಭಿಮಾನಿಗಳ ತುಂಬಾ ಇಷ್ಟ ಪಟ್ಟು ನೋಡುತ್ತಾರೆ.

ಕನ್ನಡ ಚಿತ್ರರಂಗದ ಕನಸಿನ ರಾಣಿ ಮಾಲಾಶ್ರೀ ಅವರು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದು 49ನೇ ವಸಂತಕ್ಕೆ ಕಾಲಿಟ್ಟಿರುವ ನಟಿ ಮಾಲಾಶ್ರೀ ಅವರಿಗೆ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಮಾಲಾಶ್ರೀ ಅವರು ತಮ್ಮ ಅಭಿನಯದಿಂದ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ.

ಭಾವನಾತ್ಮಕ ಚಿತ್ರಗಳ ಮೂಲಕ ಜನರನ್ನು ಅಳಿಸಿದ್ದು ಮಾತ್ರವಲ್ಲದ ಖಡಕ್ ಪೊಲೀಸ್ ಪಾತ್ರದಲ್ಲೂ ಕೂಡ ಜನ ಮೆಚ್ಚಿದ ನಾಯಕಿ ಎಂದರೆ ಅದು ಮಾಲಾಶ್ರೀ. ಪತಿ ನಿರ್ಮಾಪಕ ಕೋಟಿ ರಾಮ ಅವರು ಕಳೆದ ವರ್ಷ ಅಗಲಿದ ಬಳಿಕ ಈ ಹಿನ್ನಲೆ ಮಾಲಾಶ್ರೀ ಅವರು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿರಲಿಲ್ಲ.

ಸದ್ಯ ಇದೀಗ ಅಭಿಮಾನಿಗಳು ಹಾಗೂ ಕುಟುಂಬದವರ ಒತ್ತಾಯದ ಮೇಲೆ ನಟಿ ಮಾಲಾಶ್ರೀ ಅವರ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ. ಇದೀಗ ದರ್ಶನ್ ಅವರು ಮಾಲಾಶ್ರೀ ಅವರಿಗೆ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ. ಈಗ ಮಾಲಾಶ್ರೀ ಹುಟ್ಟು ಹಬ್ಬಕ್ಕೆ ದರ್ಶನವರು ಎಂತ ಸರ್ಪ್ರೈಸ್ ನೀಡಿದ್ದಾರೆ ಗೊತ್ತಾ?

ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 56ನೇ ಸಿನಿಮಾದ ಮುಹೂರ್ತ ಕಾರ್ಯಕ್ರಮ ಇದೀಗ ಪ್ರಾರಂಭವಾಗಿದ್ದು ವಿಶೇಷ ಎಂದರೆ ಕೆಲವರು ಈ ಸಿನಿಮಾಗೆ ನಟಿ ಮಾಲಾಶ್ರೀಯ ಮಗಳು ಅನನ್ಯ ಅವರು ನಾಯಕ ನಟಿಯಾಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ಆ ವಿಚಾರವಾಗಿ ದರ್ಶನ ಅವರೇ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ರಾಮು ಅವರು ಇದ್ದಾಗಿನಿಂದಲೂ ದರ್ಶನ್ ಹಾಗೂ ಮಾಲಾಶ್ರೀ ಕುಟುಂಬದ ನಡುವೆ ಒಳ್ಳೆಯ ಒಡನಾಟ ವಿದೆ. ಇನ್ನು ಮಾಲಾಶ್ರೀ ಅವರಿಗೆ ದರ್ಶನ್ ಗೆ ತುಂಬಾ ಗೌರವವಿದೆ.

ಹುಟ್ಟು ಹಬ್ಬದ ಪ್ರಯುಕ್ತ ಮಾಲಾಶ್ರೀ ಮನೆಗೆ ಹೋಗಿರುವ ನಟ ದರ್ಶನ್ ರವರು ಸರ್ಪ್ರೈಸ್ ನೀಡಿದ್ದು, ಮಾಲಾಶ್ರೀ ಅವರನ್ನು ತಬ್ಬಿಕೊಂಡು ಅವರ ಕೆನ್ನೆ ಗಿಂಟ್ಟಿದ್ದಾರೆ ಜೊತೆಗೆ ಹೂವಿನ ಬುಕ್ಕೆ ಕೊಟ್ಟು ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ. ಹಾಗೆ ಕಾರು ಒಂದನ್ನು ಗಿಫ್ಟ್ ಮಾಡಿದ್ದಾರೆ ಎಂಬ ಮಾತು ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿದೆ ನೀವು ಕೂಡ ಕಮೆಂಟ್ ಮಾಡಿ ತಿಳಿಸಿ.

 

Leave a Reply

Your email address will not be published. Required fields are marked *