ಬಿಗ್ ಬಾಸ್ ಕನ್ನಡ ಓಟಿಟಿ ಕಾರ್ಯಕ್ರಮ ಈಗಾಗಲೇ ಶುರುವಾಗಿ ಎಲ್ಲಾ ವೀಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಇನ್ನು ಶುರುವಾದ ಮೊದಲ ದಿನದಿಂದಲೇ ಸ್ಪರ್ಧಿಗಳು ಜನರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈಗಾಗಲೇ ಜನರಿಗೆ ಅವರವರ ಫೇವರೇಟ್ ಸ್ಪರ್ಧಿಗಳು ಸಹ ಆಗಿದ್ದಾರೆ.
ಇನ್ನು ಬಿಗ್ ಬಾಸ್ ಓಟಿಟಿ ಕನ್ನಡದಲ್ಲಿ ತಮ್ಮ ಮಾತುಗಳು ಹಾಗೂ ಇನ್ನಿತರ ಕಾರ್ಯಗಳಿಂದ ಸಕತ್ ಜನಪ್ರಿಯತೆ ಪಡೆದುಕೊಳ್ಳುತ್ತಿರುವ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ. ಇದೀಗ ಬಿಗ್ ಮನೆಯಲ್ಲಿ ಸೋನು ಗೌಡ ಗೆ ಪ್ರೀತಿ ಶುರುವಾಗಿದೆ. ಈ ಬಗ್ಗೆ ಸ್ವತಃ ಅವರೇ ಮಾತನಾಡಿದ್ದಾರೆ.
ಈಗಾಗಲೇ ನನಗೆ ಬಾಯ್ ಫ್ರೆಂಡ್ ಇದ್ದ ಅವನು ನನಗೆ ಮೋಸ ಮಾಡಿದ ಎಂದು ಬಿಗ್ ಬಾಸ್ ಮನೆಗೆ ಬಂದ ಮೊದಲ ದಿನವೇ ಕಣ್ಣೀರು ಹಾಕಿದ್ದರು. ಟಿಕ್ ಟಾಕ್ ಸ್ಟಾರ್ ಸೋನು ಶ್ರೀನಿವಾಸ್ ಗೌಡ ದೊಡ್ಮನೆ ಒಳಗೆ ಹೋಗಿ ಒಂದು ವಾರ ಕೂಡ ಆಗಿಲ್ಲ ಆಗಲೇ ತನ್ನ ಸಹ ಸ್ಪರ್ಧೆ ರಾಕೇಶ್ ಮೇಲೆ ಫೀಲಿಂಗ್ಸ್ ಇದೆ ಎಂದು ಹೇಳುವ ಮೂಲಕ ಟ್ರೋಲ್ ಗೆ ಗುರಿಯಾಗಿದ್ದಾರೆ.
ಫೀಲಿಂಗ್ಸ್ ಅಂದರೆ ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡ ನಂತರ ಹುಟ್ಟುವಂತದ್ದು ಆದರೆ ತಕ್ಷಣ ಸೋನು ಶ್ರೀನಿವಾಸ್ ಗೌಡ ಹೀಗೆ ಹೇಳುತ್ತಿದ್ದಾರೆ ಎಂದರೆ ಆ ಹುಡುಗಿಯಲ್ಲಿ ಏನೋ ದೋಷವಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ರಾಕೇಶ್ ವಿಚಾರವಾಗಿ ಬಿಗ್ ಬಾಸ್ ಮನೆಯಲ್ಲಿ ಈಗಾಗಲೇ ಸ್ಪೂರ್ತಿ ಗೌಡ ಮತ್ತು ಸೋನು ಶ್ರೀನಿವಾಸ್ ಗೌಡ ಇಬ್ಬರು ಕಿತ್ತಾಡುತ್ತಿದ್ದಾರೆ. ಇನ್ನು ರಾಕೇಶ್ ನತ್ತ ಒಲವು ಬೆಳೆಸಿಕೊಳ್ಳಲು ಏನೆಲ್ಲ ಮಾಡುತ್ತಿದ್ದಾರೆ. ಈ ಮಧ್ಯ ರಾಕೇಶ್ ಮೇಲೆ ತಮ್ಮ ಫೀಲ್ ಹಾಕಿರುವ ಕುರಿತು ಸೋನು ನೇರವಾಗಿ ಮಾತಾಡಿದ್ದಾರೆ.
ರೂಪೇಶ್ ಅವರ ಬಳಿ ಬರುವ ಸೋನು ತನಗೆ ಸಿರಿಯಸ್ ಆಗಿ ರಾಕೇಶ್ ಮೇಲೆ ಇಷ್ಟವಾಗುತ್ತಿದ್ದಾನೆ ಎಂದು ಹೇಳಿದರೆ ನೇರವಾಗಿ ರಾಕೇಶ್ ಬಳಿ ಬಂದು ನೀನು ಒಪ್ಪುತ್ತಿಯೋ ಇಲ್ಲವೋ ಗೊತ್ತಿಲ್ಲ ನಿನ್ನ ಮೇಲೆ ಫೀಲಿಂಗ್ಸ್ ಆಗುತ್ತಿದೆ ಎಂದು ನೇರವಾಗಿ ಹೇಳಿದ್ದಾರೆ ಅದಕ್ಕೆ ಅಚ್ಚರಿ ವ್ಯಕ್ತಪಡಿಸಿರುವ ರಾಕೇಶ್ ನಿಜ ಹೇಳುತ್ತಿದ್ದೀಯ ಎಂದು ಕೇಳಿದ್ದಾರೆ.
ಈ ಮಧ್ಯ ರಾಕೇಶ್ ಅವರನ್ನು ತುಂಬಾ ಹಚ್ಚಿಕೊಂಡಿರುವ ಸ್ಪೂರ್ತಿಗೌಡ ಇದನ್ನು ಯಾವ ರೀತಿ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ ಈ ವಿಷಯದ ಬಗ್ಗೆ ನಿಮಗೆ ಆಸಕ್ತಿ ಇದ್ದರೆ ಕಾಮೆಂಟ್ ಮಾಡಿ ತಿಳಿಸಿ.