ಅಣ್ಣ ಶರಣ್ ಗೆ ರಕ್ಷಾ ಬಂಧನ ಕಟ್ಟಿದ ತಂಗಿ ನಟಿ ಶ್ರುತಿ..

ಸ್ಯಾಂಡಲವುಡ್

ನಟಿ ಶೃತಿ ಕನ್ನಡ ಚಿತ್ರರಂಗ 90ರ ದಶಕದಲ್ಲಿ ಕಂಡ ಮತ್ತು ಕನ್ನಡ ಚಿತ್ರರಂಗವನ್ನು ಆಳಿದ ಧೀಮಂತ ನಟಿ ಮತ್ತು ಕಣ್ಣೀರಿನ ನಟಿ ತಮ್ಮ ಅಭಿನಯದ ಮೂಲಕ ಹಲವರನ್ನು ರಂಜಿಸಿದ ಮತ್ತು ಕನಸಿನ ರಾಣಿಯಾಗಿದ್ದ ನಟಿ. ಜೀವನದಲ್ಲಿ ಹಲವು ಸೋಲುಗಳನ್ನು ಎದುರಿಸಿ ಎಲ್ಲವನ್ನು ದಾಟಿ ಬಂದಂತ ಮತ್ತು ವೈವಾಹಿಕ ಜೀವನದಲ್ಲೂ ಸಹ ಕಹಿಯಿದ್ದರೂ ಎಲ್ಲವನ್ನು ಸಹಿಸಿಕೊಂಡ ನಟಿ ಶ್ರುತಿ.

ರಾಜಕೀಯದಲ್ಲೂ ಮತ್ತು ಸಿನಿಮಾ ರಂಗದಲ್ಲೂ ಹೆಸರು ಮಾಡಿದ ಶ್ರುತಿ ಅವರು ಕನ್ನಡದ ಫೇಮಸ್ ಗುಬ್ಬಿ ಕಂಪನಿಯ ಮಗಳು ಮತ್ತು ಈಕೆಯ ಸಹೋದರ ಕೂಡ ಕನ್ನಡ ಚಿತ್ರರಂಗದ ಮೇರು ಕಲಾವಿದ ಶರಣ್. ಶ್ರುತಿ ಮತ್ತು ಶರಣ್ ಅಣ್ಣ-ತಂಗಿಯರು ಆದರೆ ಎಲ್ಲರೂ ಶ್ರುತಿ ಅಕ್ಕ ಶರಣ್ ತಮ್ಮ ಎಂದು ಹೇಳುತ್ತಾರೆ.

ಆದರೆ ಶರಣ್ ಶೃತಿಯ ಅಣ್ಣ ಶ್ರುತಿ ಮತ್ತು ಶರಣಿಗೆ ಮತ್ತೊಬ್ಬ ತಂಗಿ ಇದ್ದಾಳೆ, ಅವರ ಹೆಸರು ಉಷಾ ಎಂದು ಮತ್ತು ಶ್ರುತಿಗೆ ಮತ್ತು ಶರಣ್ಗೆ ಇಬ್ಬರು ತಾಯಂದಿರು ಇಬ್ಬರು ತಾಯಂದಿರು ಕೂಡ ಅವಳಿ ಜವಳಿ, ಅವರ ತಾಯಂದಿರ ಸ್ವಯಂ ಹೇಳುವಂತೆ ಅವರಿಬ್ಬರು ಕೃಷ್ಣನೊಂದಿಗೆ ಸಂಸಾರ ಮಾಡಿದ ರಾಧಾ ರುಕ್ಮಿಣಿಯರು.

ಆದರೆ ಮಕ್ಕಳು ಮಾತ್ರ ಬಿಡದೆ ತಾಯಂದಿರು ಕೂಡ ಹಲವು ಪಾತ್ರಗಳಲ್ಲಿ ನಟಿಸಿದ್ದಾರೆ ಮತ್ತು ತಂದೆ ಫೇಮಸ್ ನಾಟಕಕಾರ. ಪ್ರಸ್ತುತವಾಗಿ ಶೃತಿಯವರು ಭಾರತೀಯ ಜನತಾ ಪಕ್ಷದ ಚೀಫ್ ಸೆಕ್ರೆಟರಿ ಮತ್ತು ಕನ್ನಡದ ಗಿಚ್ಚಿ ಗಿಲಿ ಗಿಲಿ ಎಂಬ ಟಿವಿ ಶೋನ ಜಡ್ಜ್ ಆಗಿಯೋ ಮತ್ತು ತನ್ನ ಕುಟುಂಬದ ಮುದ್ದಿನ ಮಗಳಾಗಿದ್ದಾರೆ.

ತನ್ನ ಮುದ್ದಿನ ಮಗಳ ತಾಯಿಯಾಗಿದ್ದು ಬಹಳಷ್ಟು ಹೆಸರು ಮಾಡುತ್ತಿರುವ ನಟಿ ಶೃತಿ ಮತ್ತು ಶರಣ್ ಕೂಡ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದು ಮಾತ್ರವಲ್ಲವೇ ಶರಣ್ಗೆ ಮೊದಲು ಸಂಗೀತದಲ್ಲಿ ಬಹಳ ಮೋಜು ಅಂದರೆ ಸಂಗೀತದ ಹುಚ್ಚು ನಾನು ಕೂಡ ಒಬ್ಬ ಸಂಗೀತಕರ ಆಗಬೇಕೆಂದು ಆಸೆ ಇಟ್ಟುಕೊಂಡಿದ್ದರು.

ಅನೇಕ ಆರ್ಕೆಸ್ಟ್ರಗಳಲ್ಲಿ ತಮ್ಮ ಹಾಡುಗಳ ಮೂಲಕ ಆನೇಕಾರನ್ನು ರಂಜಿಸಿದವರು.
ಆದರೆ ತಮ್ಮ ಪೋಷಕರಿಂದ ನಟನೆಗೆ ಬಂದ ಶರಣ್ ಹಲವಾರು ಕಾಮಿಡಿ ಸಿನಿಮಾಗಳಲ್ಲಿ ಕಾಣಿಸಿಕೊಂಡು ತಮ್ಮದೇ ಆದ ಶೈಲಿ ಮೂಡಿಸಿದ ವ್ಯಕ್ತಿ.

ಹಲವಾರು ಸಿನಿಮಾಗಳಲ್ಲಿ ಚಿಕ್ಕ ಪುಟ್ಟ ಪಾತ್ರ ಮಾಡಿ ಹಲವು ಸಿನಿಮಾಗಳ ಸಪೋರ್ಟಿಂಗ್ ರೋಲ್ ನಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಇವರು ಪ್ಲೇ ಬ್ಯಾಕ್ ಸಿಂಗರ್ ಮತ್ತು ಚಿತ್ರ ನಿರ್ಮಾಪಕರು ಆಗಿದ್ದಾರೆ ಮತ್ತು ಹಲವಾರು ಅಂದರೆ ಸುಮಾರು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ಇವರು ಮ್ಮ 100ನೇ ಚಿತ್ರವಾದ ರ‍್ಯಾಂಬೋ ಫಿಲಂನಲ್ಲಿ ನಾಯಕನಟನಾಗಿ ಮಿಂಚಿದರು ಮತ್ತು ಹಲವಾರು ಕಾಮಿಡಿ ಮೂವಿಗಳನ್ನು ಮಾಡಿದ್ದಾರೆ. ಹೀಗೆ ಪರಸ್ಪರ ಒಬ್ಬರಿಗೊಬ್ಬರು ತುಂಬಾ ಆದರ್ಶವಾಗಿ ಬೆಳೆದ ನಿಂತಿರುವ ಈ ಇಬ್ಬರು ರಕ್ಷಾಬಂಧನದ ಬಂಧನದಲ್ಲಿ ಬೆಸೆಯಲು ಪ್ರತಿ ವರ್ಷ ಒಂದಾಗುತ್ತಾರೆ ಅದು ವಿಶೇಷವಾಗಿದೆ.

Leave a Reply

Your email address will not be published. Required fields are marked *