ನಟ ಯಶ್ ಯಶೋಮಾರ್ಗದ ಮೂಲಕ ಒಳ್ಳೆಯ ಕೆಲಸಗಳಿಗೆ ಮುಂದಾಗಿರುವುದು ಗೊತ್ತೇ ಇದೆ. ಇದೀಗ ಮತ್ತೊಂದು ಒಳ್ಳೆಯ ಕೆಲಸ ಮಾಡುವುದಕ್ಕೆ ಯಶೋಮಾರ್ಗ ಸಜ್ಜಾಗಿ ನಿಂತಿದೆ. ನಟ ಯಶ್ ಇದೀಗ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಮಿಂಚುತ್ತಿದ್ದಾರೆ.
ಕೆಜಿಎಫ್ 2 ಸಿನಿಮಾ ಬಿಡುಗಡೆಯಾದ ಬಳಿಕ ನಟ ಯಶ್ ಅವರಿಗೆ ದೇಶದ ಮೂಲೆ ಮೂಲೆಯಲ್ಲೂ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಸದ್ಯ ನಟ ಯಶ್ ಮೇಘಾ ಸಕ್ಸಸ್ ಖುಷಿಯಲ್ಲಿ ತೇಲಾಡುತ್ತಿದ್ದಾರೆ.
ನಟ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗುವುದಕ್ಕೂ ಮುನ್ನ ಸಮಾಜಮುಖಿ ಕೆಲಸಗಳಲ್ಲಿ ತೊಡಗಿದ್ದರು. ಇದೀಗ ನಟ ಯಶ್ ಅವರ ಫೌಂಡೇಶನ್ ಮತ್ತಷ್ಟು ಸಕ್ರಿಯವಾಗಿದೆ. ಕುಡಿಯುವ ನೀರಿನ ವ್ಯವಸ್ಥೆ, ಕೆರೆಯ ಹೂಳತ್ವ ಕೆಲಸ ಮಾಡಿದ್ದು ಎಲ್ಲರಿಗೂ ಸಹ ಗೊತ್ತೇ ಇದೆ.
ಇದೀಗ ನಟ ಯಶ್ ಅವರು ತಮ್ಮಯಶೋಮಾರ್ಗ ಫೌಂಡೇಶನ್ ನ ಮೂಲಕ ಮತ್ತೊಂದು ಸಮಾಜ ಮುಖಿ ಕೆಲಸಕ್ಕೆ ಮುಂದಾಗಿದ್ದಾರೆ. ಹೌದು ಯಶ್ ಅವರು ಇದೀಗ ದೇವಸ್ಥಾನದ ಪುಷ್ಕರಣೆ ಮಾಡಲು ಸಜ್ಜಾಗಿದ್ದಾರೆ. ಕೆಳದಿ ಅರಸರ ಕಾಲದಲ್ಲಿ ನಿರ್ಮಾಣ ಮಾಡಲಾಗಿದ್ದ ಕಲ್ಯಾಣಿಯ ಪುಷ್ಕರಣೆ ಸ್ವಚ್ಛತಾ ಕಾರ್ಯಕ್ಕೆ ಯಶ್ ಮುಂದಾಗಿದ್ದಾರೆ.
ನಟ ಯಶ್ ಅವರ ಯಶೋಮಾರ್ಗ ಸೋಷಿಯಲ್ ಮಿಡಿಯಾದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಯಶ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಯಶೋಮಾರ್ಗ ಮಾಡುತ್ತಿರುವ ಈ ಕೆಲಸದ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಯಶೋಮಾರ್ಗದ ಸ್ಫೂರ್ತಿಯಿಂದ ಗುಬ್ಬಿ ಅಯ್ಯಪ್ಪ ಸ್ವಾಮಿಯ ದೇವಸ್ಥಾನದ ಪಕ್ಕದ ಪುಷ್ಕರಣಿ ಸ್ವಚ್ಛತಾ ಕಾರ್ಯ ಮತ್ತು ದೇವಾಲಯಕ್ಕೆ ಬಣ್ಣದ ಕೆಲಸಗಳನ್ನು ಅಖಿಲ ಕರ್ನಾಟಕದ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಸಂಗ ಗುಬ್ಬಿ ತಾಲೂಕಿನ ಕಾರ್ಯಕರ್ತರು ಎಲ್ಲರೂ ಸೇರಿ ದಿನಾಂಕ 13-08-2022 ರಿಂದ ಪ್ರಾರಂಭಿಸಲು ಇಚ್ಛಿಸಲಾಗಿದೆ ಎಂದು ತಿಳಿಸಿದೆ.
ಇತ್ತೀಚೆಗಷ್ಟೇ ಕಲ್ಯಾಣಿಯ ಜೀರ್ಣೋದ್ಧಾರ ಮಾಡಿದ್ದು, ಇನ್ನು ಮುಂದಿನ ಕೆಲಸಗಳನ್ನು ಈಗಾಗಲೆ ಶುರು ಮಾಡಿಕೊಂಡಿದ್ದಾರೆ. ಇನ್ನು ನಟ ಯಶ್ ಅವರ ಈ ಕೆಲಸಕ್ಕೆ ಅವರ ಅಭಿಮಾನಿಗಳು ಸಹ ಸಾತ್ ನೀಡುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.